ಹುಕ್ಕೇರಿ: ಪಟ್ಟಣದ ಹಳ್ಳದಕೇರಿಯ ಶ್ರೀ1008 ಪಾರ್ಶ್ವನಾಥ ದಿಗಂಬರ ಜೈನ ಮಂದಿರದಲ್ಲಿ ಪಾರಂಪರಿಕ ಪದ್ಧತಿಯಂತೆ ಸೋಮವಾರ ಭಗವಾನ ಮಹಾವೀರ ಜನ್ಮ ದಿನವನ್ನು ಮಹಾವೀರ ಉದ್ಯೋಗ ಸಮೂಹ ಸಂಸ್ಥೆಯ ಅಧ್ಯಕ್ಷ ಮಹಾವೀರ ನಿಲಜಗಿ ನೇತೃತ್ವದಲ್ಲಿ ಮತ್ತು ಶ್ರಾವಕ ಶ್ರಾವಕಿಯರ ಉಪಸ್ಥಿತಿಯಲ್ಲಿ ಆಚರಿಸಲಾಯಿತು.

ಬೆಳಿಗ್ಗೆ 9ಕ್ಕೆ ಪಂಡಿತ ರಾಜು ಉಪಾಧ್ಯೆ ಅವರಿಂದ ವಿಧಿ ವಿಧಾನ ಮೂಲಕ ಭಗವಾನ ಮಹಾವೀರರ ಮೂರ್ತಿಗೆ ಪಂಚಾಮೃತ ಅಭಿಷೇಕ, ವಿಶೇಷ ಪೂಜೆ, ಮಹಾಶಾಂತಿ ಮಂತ್ರ ಪಠಣ ನಡೆಯಿತು. ಮುಖಂಡ ಪ್ರಜ್ವಲ್ ನಿಲಜಗಿ ಪೂಜೆ ನೆರವೇರಿಸಿ ಮಾತನಾಡಿದರು.

ನಂತರ ಶ್ರಾವಕಿಯರಿಂದ ಮಹಾವೀರರನ್ನು ತೊಟ್ಟಿಲಲ್ಲಿ ಹಾಕಿ ನಾಮಕರಣ ಮಾಡಿದ ನಂತರ ಆರತಿ ವಿಸರ್ಜನೆ ಜತೆ ಕಾರ್ಯಕ್ರಮ ಮಂಗಲಗೊಂಡಿತು. ಮಧ್ಯಾಹ್ನ ಮಹಾಪ್ರಸಾದ ಜರುಗಿತು.

ಟ್ರಸ್ಟ್ ಕಮಿಟಿ ಅಧ್ಯಕ್ಷ ಚಂದ್ರಕಾಂತ ಪಾಟೀಲ್, ಉಪಾಧ್ಯಕ್ಷ ಸಂಜಯ ನಿಲಜಗಿ, ಕಾರ್ಯದರ್ಶಿ ಕಿರಣ ಸೋಲ್ಲಾಪುರೆ, ಟ್ರಸ್ಟಿಗಳಾದ ಸುಕುಮಾರ ಖತಗಲ್ಲಿ, ಅಪ್ಪಾಸಾಬ ಚೌಗಲಾ, ಮಹಾವೀರ ಬೋಳೆ, ಬಾಬುರಾವ್ ಮುರಗುಡೆ, ಭರಮಪ್ಪ ಪಾಟೀಲ, ದೇವೆಂದ್ರ ಸೋಲ್ಲಾಪುರೆ, ಸುಕುಮಾರ ಮುರಗುಡೆ, ಶೀಲಾ ಸೊಲ್ಲಾಪುರೆ, ಸಂಗೀತಾ ನಿಲಜಗಿ, ರಾಜಶ್ರೀ ಸೊಲ್ಲಾಪುರೆ, ಜ್ಯೋತಿ ಸೊಲ್ಲಾಪುರೆ, ವಿಜೇತಾ ಖತಗಲ್ಲಿ ಇದ್ದರು.

ಪಲ್ಲಕ್ಕಿ ಉತ್ಸವ: ಬಜಾರ ಪೇಟೆಯ ಜೈನ ಜೀನ ಮಂದಿರದಲ್ಲಿ ಸೋಮವಾರ ಮಹಾವೀರ ಜನ್ಮ ಕಲ್ಯಾಣಕ ಮಹೋತ್ಸವದ ಮಹಾವೀರರ ಜಯಂತಿ ಉತ್ಸವ ಆವರಣದಲ್ಲಿ ಅತೀ ವಿಜೃಂಭಣೆಯಿಂದ ಆಚರಿಸಲಾಯಿತು. ಇದರ ಅಂಗವಾಗಿ ಪಲ್ಲಕ್ಕಿ ಉತ್ಸವ ಹಾಗೂ ಭಗವಂತರ ಅಭಿಷೇಕ ಪೂಜೆ, ವಿಧಿ– ವಿಧಾನಗಳನು ಸಮಾಜದ ಎಲ್ಲಾ ಶ್ರಾವಕ ಶ್ರಾವಕಿಯರ ಸಮ್ಮುಖದಲ್ಲಿ ನೆರವೇರಿಸಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-21-353376120

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.