ಹುಕ್ಕೇರಿ: ಮಹಾವೀರ ಜಯಂತಿ ದಿನದಂದು ತಾಲ್ಲೂಕು ಆಡಳಿತ ಸರಿಯಾಗಿಲ್ಲ ಸ್ಪಂದಿಸಿಲ್ಲ. ಅಧಿಕಾರಿಗಳಿಂದ ಲೋಪವಾಗಿದೆ. ಇದಕ್ಕಾಗಿ ಕ್ಷಮೆ ಕೋರುತ್ತೇನೆ ಎಂದು ತಹಶೀಲ್ದಾರ್ ಬಲರಾಮ ಕಟ್ಟಿಮನಿ ಹೇಳಿದರು.

ಶುಕ್ರವಾರ ಜೈನ ಸಮಾಜದ ಪ್ರಮುಖರ ಜೊತೆ ಸಭೆ ನಡೆಸಿದ ಅವರು, ‘ಅಂದು ನಾನು ಪಟ್ಟಣದಲ್ಲಿ ಇರಲಿಲ್ಲ. ನನ್ನ ಉಪಸ್ಥಿತಿಯಲ್ಲಿ ಅಧಿಕಾರಿಗಳಿಂದ ಲೋಪವಾಗಿದೆ. ಈ ಕುರಿತು ಮಾಜಿ ಸಂಸದ ರಮೇಶ ಕತ್ತಿ ಮತ್ತು ಶಾಸಕ ನಿಖೀಲ್ ಕತ್ತಿ ಅವರು ದೂರವಾಣಿ ಮೂಲಕ ಮಾತನಾಡಿದ್ದಾರೆ. ಮುಂದೆ ಹೀಗಾಗದಂತೆ ಎಚ್ಚರ ವಹಿಸಲು ಕಚೇರಿಯ ಸಿಬ್ಬಂದಿಗೆ ಸೂಚನೆ ನೀಡುತ್ತೇನೆ’ ಎಂದರು.

ಈಚೆಗೆ ಆಚರಿಸಿದ ಮಹಾವೀರ ಜಯಂತಿ ದಿನದಂದು ತಾಲ್ಲೂಕು ಆಡಳಿತ ಸರಿಯಾಗಿ ಸ್ಪಂದಿಸದ ಹಿನ್ನೆಲೆಯಲ್ಲಿ ಸಮಾಜದವರು ಭಗವಾನ್ ಮಹಾವೀರರ ಭಾವ ಚಿತ್ರವನ್ನು ಕಚೇರಿ ಪ್ರಾಂಗಣದಲ್ಲಿ ಇಟ್ಟು ಪೂಜೆ ಸಲ್ಲಿಸಿದ್ದರು. ತಾಲ್ಲೂಕು ಆಡಳಿತದಿಂದ ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಜೈನ ಅಸೋಸಿಯನ್ ಸದಸ್ಯರು, ತಹಶೀಲ್ದಾರ್ ಕಚೇರಿ ಎದುರು ಜಮಾಯಿಸಿ ಆಕ್ಷೇಪ ವ್ಯಕ್ತಪಡಿಸಿದ್ದರು.

ತಹಶೀಲ್ದಾರ್ ಸ್ಪಷ್ಟನೆಯಿಂದ ಸಮಾಧಾನಗೊಂಡ ಸಮಾಜದ ಮುಖಂಡರು ಮತ್ತು ಜೈನ ಅಸೋಸಿಯನ್ ತಾಲ್ಲೂಕು ಅಧ್ಯಕ್ಷ ಬಾಹುಬಲಿ ನಾಗನೂರಿ ಮಾತನಾಡಿ, ತಹಶೀಲ್ದಾರ್ ಹಾಗೂ ಅಧಿಕಾರಿಗಳು ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೇಳಿದ್ದು ಸ್ವಾಗತಾರ್ಹ. ಮುಂದೆ ಎಲ್ಲಾ ಧರ್ಮ, ಜಯಂತಿಗಳನ್ನು ಗೌರವದಿಂದ ಆಚರಿಸಬೇಕು ಎಂದು ತಿಳಿಸಿದರು.

ತಾಲ್ಲೂಕು ಘಟಕದ ಅಧ್ಯಕ್ಷ ಬಾಹುಬಲಿ ನಾಗನೂರಿ, ಮುಖಂಡರಾದ ರಾಜು ಚೌಗಲಾ, ಸಂಜಯ ನಿಲಜಗಿ, ಆನಂದ ಚೌಗಲಾ, ರತ್ನಾಕರ ಬೋಣಿ, ಸಿ,ಪಿ,ಪಾಟೀಲ, ಜಿನ್ನಪ್ಪ ಸಪ್ತಸಾಗರ, ವಿಪುಲ್ ಬಾಳಿಕಾಯಿ, ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-21-2128175790

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.