ಹುಕ್ಕೇರಿ: ಮಹಿಳೆಯರು ಸಮಾಜದ ಮುಖ್ಯ ವಾಹಿನಿಗೆ ಬರಲೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿವಿಧ ಯೋಜನೆ ರೂಪಿಸಿದ್ದು, ಅವುಗಳ ಸದುಪಯೋಗ ಮಾಡಿಕೊಂಡು ಆರ್ಥಿಕವಾಗಿ ಮಹಿಳೆಯರು ಸಬಲರಾಗಬೇಕು ಎಂದು ಶಾಸಕ ನಿಖಿಲ್ ಕತ್ತಿ ಹೇಳಿದರು.

ಶುಕ್ರವಾರ ಪಟ್ಟಣದ ವಿಶ್ವರಾಜ ಸಭಾ ಭವನದಲ್ಲಿ ಹಮ್ಮಿಕೊಂಡ ಡಿ.ದೇವರಾಜು ಅರಸು ಅಭಿವೃದ್ಧಿ ನಿಗಮದ ವತಿಯಿಂದ ಆಯ್ಕೆಯಾದ 20 ಮಹಿಳಾ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಿಸಿ ಮಾತನಾಡಿದರು.

ಸರ್ಕಾರದಿಂದ ಫಲಾನುಭವಿಗಳಿಗೆ ಹೊಲಿಗೆ ತರಬೇತಿ ನೀಡಿ ಹೊಲಿಗೆ ಯಂತ್ರಗಳನ್ನು ಸಹಾಯಧನದಡಿ ಮನೆ ಮನೆಗೆ ವಿತರಿಸಲಾಗುತ್ತಿದೆ ಎಂದರು.

ಗೃಹ ಕೆಲಸದ ಜತೆ ಮಹಿಳೆಯರು ಹೈನುಗಾರಿಕೆ, ಕರಕುಶಲ ಹೊಲಿಗೆಯಂತ ಸ್ವ ಉದ್ಯೋಗ ಕೈಗೊಂಡು ಕುಟುಂಬಕ್ಕೆ ಆಧಾರವಾಗಲು ಸಲಹೆ ನೀಡಿದರು.

ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ, ನಿರ್ದೇಶಕರಾದ ಸತ್ಯಪ್ಪ ನಾಯಿಕ, ಶಿವಾನಂದ ಮುಡಸಿ, ಗಜಾನನ ಕ್ವಳ್ಳಿ, ಕೆಂಪಣ್ಣ ದೇಸಾಯಿ, ಮುಖಂಡರಾದ ಅಣ್ಣಾಗೌಡ ಪಾಟೀಲ, ಶೀತಲ್ ಬ್ಯಾಳಿ, ಆನಂದ ಲಕ್ಕುಂಡಿ, ಚನ್ನಪ್ಪ ಗಜಬರ, ರಾಜು ಮುನ್ನೋಳಿ, ದಯಾನಂದ ಅಮ್ಮಣಗಿ, ಕಿರಣ ನೇಸರಿ, ಸುನೀಲ ಪರ್ವತರಾವ್, ನೇರಲಿ ಬಾಬಾಗೌಡ ಪಾಟೀಲ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260322-21-1470090112

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.