ಹುಕ್ಕೇರಿ: ತಾಲ್ಲೂಕಿನ ಇಸ್ಲಾಂಪುರ-ಶಹಾಬಂದರ ಗ್ರಾಮದ ಬಾಳಯ್ಯಜ್ಜನವರ ಭಕ್ತಿಮಠದ ತಪೋರತ್ನ ಅನುಷ್ಠಾನ ನಿಧಿ ಶರಣ ಚೇತನರಾಗಿದ್ದ ಲಿಂ.ಸಂಕಪ್ಪಜ್ಜನವರ ನುಡಿನಮನ ಕಾರ್ಯಕ್ರಮ ಈಚೆಗೆ ಜರುಗಿತು.

ಬೆಳಿಗ್ಗೆ ಸಂಕಪ್ಪಜ್ಜನವರ ಕೃರ್ತ ಗದ್ದುಗೆ ಅಂಕಲಗಿ ಕುಂದರಗಿ ಮಠದ ಅಡವಿಸಿದ್ಧೇಶ್ವರ ಸ್ವಾಮೀಜಿ, ತೋಲಗಿ– ಚಿಕ್ಕಲದಿನ್ನಿ ಅದೃಶ್ಯಾನಂದ ಸ್ವಾಮೀಜಿ ಅವರು ತವಗ ಮಠದ ಬಾಳಯ್ಯಜ್ಜನವರ ಸಮ್ಮುಖದಲ್ಲಿ ವಚನಾಭಿಷೇಕ ಮಾಡಿದರು.

ಹತ್ತರಗಿ ಹರಿಮಂದಿರದ ಆನಂದ ಮಹಾರಾಜ ಗೋಸಾವಿ ಮಾತನಾಡಿ, ಆತ್ಮಗಳಲ್ಲಿ ಮೂರು ಪ್ರಕಾರಗಳಿದ್ದು, ಆತ್ಮ, ಪುಣಾತ್ಮ ಮತ್ತು ಪರಮಾತ್ಮ ಎಂಬವು. ಸಂಕಪ್ಪಜ್ಜನವರು ಈ ಭಾಗದಲ್ಲಿ ಶರಣರ ಸಂಪ್ರದಾಯ ಉಳಿಸಿ ಬೆಳೆಸಿದ್ದಾರೆ. ಅವರ ಧಾರ್ಮಿಕ ಚಿಂತನೆಗಳ ಮೂಲಕ ಸಂಕಪ್ಪಜ್ಜನವರು ಪುಣ್ಯಾತ್ಮರಾಗಿ ಪರಮಾತ್ಮನಲ್ಲಿ ಲೀನರಾಗಿದ್ದಾರೆ. ಸಂಕಪ್ಪಜ್ಜ ನಮ್ಮ ಮಧ್ಯದಲ್ಲಿ ಇಲ್ಲದಿದ್ದರೂ ಕೂಡಾ ಸ್ಫೂರ್ತಿ ಸ್ವರೂಪಿಗಳಾಗಿದ್ದಾರೆ. ಭಕ್ತಿಯ ಮೋಕ್ಷದ ಮಾರ್ಗ ಎಂದು ಅವರು ಭಕ್ತರಿಗೆ ಹೇಳಿದ್ದಾರೆ. ಶುದ್ಧ ಮನಸ್ಸಿನಿಂದ ಪರಮಾತ್ಮನನ್ನು ಸ್ಮರಣೆ ಮಾಡಿದರೆ ಮುಕ್ತಿ ಸಿಗುವುದು ಎಂದು ಹೇಳಿದರು.

ಯಮಕನಮರಡಿಯ ಹುಣಸಿಕೊಳ್ಳ ಮಠದ ಸಿದ್ದಬಸವ ದೇವರು, ಶ್ರೀಕೃಪಾನಂದ ಸ್ವಾಮೀಜಿ, ಕಂಕಣವಾಡಿ ಮಾರುತಿ ಶರಣರು ಮಾತನಾಡಿದರು. ಸಾಹಿತಿ, ಶಿಕ್ಷಕ ಆರ್.ಎಸ್. ಪಂಗನ್ನವರ ಮಾತನಾಡಿದರು.

ಕರವೇ ಬೆಳಗಾವಿ ಜಿಲ್ಲಾ ಉಪಾಧ್ಯಕ್ಷ ರಾಜು ನಾಶಿಪುಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶರಣರಾದ ಸದಾಶಿವ ಹಗೆದಾಳ, ಅಜೀತ ಮುನ್ನೋಳ್ಳಿ, ಮಹಾಂತೇಶ ಪಾಟೀಲ, ಲಗಮಣ್ಣ ಪನಗುತ್ತಿ, ವಕೀಲ ಆರ್.ಜಿ. ಹಿರೇಮಠ, ರವಿ ಸುತಾರ, ಸಿದ್ದಲಿಂಗ ಕರಲಿಂಗನ್ನವರ, ರಮೇಶ ತೇಲಿ, ವಿಠ್ಠಲ ಬುಕನಟ್ಟಿ, ಮಲ್ಲಿಕಾರ್ಜುನ ಹಗೆದಾಳ, ಅಡಿವೆಪ್ಪ ನಾಗನೂರಿ, ಅಡಿವೆಪ್ಪ ಪಾಟೀಲ, ಸಿದ್ದಪ್ಪ ಜಕ್ಕನ್ನವರ, ಅಡಿವೆಪ್ಪ ಜಕ್ಕನ್ನವರ, ಮಾರುತಿ ಬುಕನಟ್ಟಿ, ನಿಂಗಪ್ಪ ಜಕ್ಕನ್ನವರ, ಪರಶುರಾಮ ಬೀರನಹೊಳಿ, ಬಸವಣ್ಣಿ ನಿರ್ವಾಣಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-21-1788242817

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.