ಹುಕ್ಕೇರಿ: ಮಾರ್ಚ್ 18 ರಿಂದ ಏಪ್ರಿಲ್ ರವರೆಗೆ ಜರುಗುವ ಪ್ರಸಕ್ತ ಸಾಲಿನ ಎಸ್ .ಎಸ್. ಎಲ್. ಸಿ ಪರೀಕ್ಷೆಗಳ ಯಶಸ್ವಿಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭಾವತಿ ಪಾಟೀಲ್ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲ್ಲೂಕಿನಿಂದ 7,203 ವಿದ್ಯಾರ್ಥಿಗಳು (3313 ಗಂಡು 3324 ಹೆಣ್ಣು) ಪರೀಕ್ಷೆ ಬರೆಯಲಿದ್ದಾರೆ. ಜತೆಗೆ 640 ವಿದ್ಯಾರ್ಥಿಗಳು ಪುನರಾವರ್ತಿತ ವಿದ್ಯಾರ್ಥಿಗಳಿದ್ದಾರೆ ಎಂದರು.

ಒಟ್ಟು 19 ಪರೀಕ್ಷಾ ಕೇಂದ್ರ ತೆರೆಯಲಾಗಿದೆ. ಸಿ.ಸಿ ಕ್ಯಾಮರಾ ಅಳವಡಿಸಲಾಗಿದೆ. ತಹಶಿಲ್ದಾರ್, ಇಒ ಹಾಗೂ ಬಿಇಒ ನೇತೃತ್ವದಲ್ಲಿ ಮೂರು ಜಾಗೃತ ದಳ , ಪೊಲೀಸ್ , ಆರೋಗ್ಯ, ಮುಖ್ಯ ಕೇಂದ್ರಗಳ ಮುಖ್ಯ ಅಧೀಕ್ಷಕರು ಮೇಲ್ವಿಚಾರಕರು ಶಿಕ್ಷಕರು ಸೇರಿದಂತೆ 550 ಜನ ಸಿಬ್ಬಂದಿ ಕಾರ್ಯನಿರ್ವಹಿಸುವರು ಎಂದರು.

ಪಿಇಒ ಎ.ಕೆ ಕೋಟಿವಾಲೆ, ಕ್ಷೇತ್ರ ಸಮನ್ವಯಾಧಿಕಾರಿ ಎ.ಎಸ್ ಪದ್ಮಣ್ಣವರ, ಅಕ್ಷರದಾಸೋಹ ಯೋಜನೆ ಸಹಾಯಕಿ ನಿರ್ದೇಶಕಿ ಸವಿತಾ ಹಲಕಿ,ನೋಡಲ್ ಅಧಿಕಾರಿ ಭರತ ಪಾರ್ಥನಹಳ್ಳಿ, ಶಿಕ್ಷಣ ಸಂಯೋಜಕರಾದ ಎಂ ಡಿ ಬಡಿಗೇರ ಶಿವಾನಂದ ಗುಂಡಾಳಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.