ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹುಕ್ಕೇರಿ ಅರ್ಬನ್ ಬ್ಯಾಂಕ್‌ | ₹1.32 ಕೋಟಿ ಲಾಭ: ಜಯಗೌಡ ಪಾಟೀಲ್

Published : 6 ಸೆಪ್ಟೆಂಬರ್ 2024, 13:09 IST
Last Updated : 6 ಸೆಪ್ಟೆಂಬರ್ 2024, 13:09 IST
ಫಾಲೋ ಮಾಡಿ
Comments

ಹುಕ್ಕೇರಿ: ‘ಸ್ಥಳೀಯ ಹುಕ್ಕೇರಿ ಅರ್ಬನ್ ಕೋ ಆಪ್ ಬ್ಯಾಂಕ್‌ 2023 - 24ನೇ ಸಾಲಿನಲ್ಲಿ ₹1.32 ಕೋಟಿ ಲಾಭ ಗಳಿಸಿದೆ’ ಎಂದು ಬ್ಯಾಂಕಿನ ಅದ್ಯಕ್ಷ ಜಯಗೌಡ ಪಾಟೀಲ್ ಹೇಳಿದರು.

ತುಬಚಿ ಶಿಕ್ಷಣ ಸಂಸ್ಥೆಯ ಚಿಣ್ಣರ ಭವನದಲ್ಲಿ  ಶುಕ್ರವಾರ  ನಡೆದ ಬ್ಯಾಂಕಿನ 96ನೇ ವಾರ್ಷಿಕ ಸರ್ವ ಸಾಧಾರಣ ಸಭೆ ಉದ್ಘಾಟಿಸಿ ಮಾತನಾಡಿದರು.

ಬ್ಯಾಂಕಿನ ಹಿರಿಯ ನಿರ್ದೇಶಕ ವಿಜಯ್ ರವದಿ ಮಾತನಾಡಿದರು. ಪ್ರಧಾನ ವ್ಯವಸ್ಥಾಪಕ ಕೆ.ಬಿ.ಬಂದಾಯಿ ಪ್ರಾಸ್ತಾವಿಕ ಮಾತನಾಡಿ ವರದಿ ಮಂಡಿಸಿದರು. ನಂತರ ಬ್ಯಾಂಕ್ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಸತ್ಕರಿಸಿ ಪ್ರೋತ್ಸಾಹಿಸಲಾಯಿತು.

ಉಪಾದ್ಯಕ್ಷೆ ಮಂಗಲ ಹಂದಿಗುಂದ, ನಿರ್ದೇಶಕರಾದ ಗುರುಲಿಂಗಪ್ಪ ಗಂಧ, ಚಂದ್ರಶೇಖರ ಪಾಟೀಲ, ವಿಜಯ ರವದಿ, ಶಿವಾನಂದ ನೂಲಿ, ಸಿದ್ದೇಶ್ವರ ಹೆದ್ದೂರಶೆಟ್ಟಿ, ಸೋಮಶೇಖರ ಪಟ್ಟಣಶೆಟ್ಟಿ, ಗೌರವ್ವ ನಾಯಿಕ, ರಾಜು ಬಾಗಲಕೋಟಿ, ರಾಜು ಗಸ್ತಿ, ಬಸವಣ್ಣಿ ಮಗದುಮ್ಮ, ಗೀರಿಶ ನಡದಗಲ್ಲಿ, ಶ್ರೀಶೈಲ ಹುಂಡೇಕಾರ  ಇದ್ದರು.

ಕೆಲವು ಬ್ಯಾಂಕಿನ ಸದಸ್ಯರು ಆಡಳಿತ ಮಂಡಳಿಯವರೊಂದಿಗೆ ಸಂವಾದ ನಡೆಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರು.

ಬ್ಯಾಂಕಿನ ವಿವಿಧ ಶಾಖೆಗಳ ವ್ಯವಸ್ಥಾಪಕರಾದ ಬಸವರಾಜ ಗುಳ್ಳ, ಅನೀಲ ಮುನ್ನೋಳಿ, ರವಿಂದ್ರ ಬಾಳಿಕಾಯಿ, ನೀತಾ ಸರದಾರ, ಲೆಕ್ಕಾಧಿಕಾರಿ ಪ್ರೇಮಾ ರಾಜನ್ನವರ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT