ಬುಧವಾರ, ಏಪ್ರಿಲ್ 1, 2020
19 °C

ಪ್ರಿಯಕರನ ಜೊತೆ ಸೇರಿ ಪತಿಯ ಹತ್ಯೆ ಮಾಡಿದ್ದ ಪತ್ನಿಯ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಪ್ರಿಯಕರ ಹಾಗೂ ಸ್ನೇಹಿತರ ಜೊತೆ ಸೇರಿ ತನ್ನ ಪತಿ, ಯೋಧ ದೀಪಕ ಪಟ್ಟಣದಾರ ಅವರನ್ನು ಕೊಲೆ ಮಾಡಿದ ಆರೋಪದ ಮೇಲೆ ಹೊನ್ನಿಹಾಳ ಗ್ರಾಮದ ಅಂಜಲಿ (26) ಹಾಗೂ ಪ್ರಿಯಕರ ಪ್ರಶಾಂತ ದತ್ತಾತ್ರೇಯ ಪಾಟೀಲ (28) ಅವರನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಯೋಧನಾಗಿದ್ದ ಪತಿ ದೀಪಕ ಕಳೆದ ತಿಂಗಳು 28ರಿಂದ ಕಾಣೆಯಾಗಿದ್ದಾರೆ ಎಂದು ಅಂಜಲಿ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದ ಬಗ್ಗೆ ತನಿಖೆ ಕೈಗೊಂಡ ಮಾರಿಹಾಳ ಪೊಲೀಸರು, ಪ್ರಕರಣವನ್ನು ಭೇದಿಸಿದ್ದಾರೆ.

ಅನೈತಿಕ ಸಂಬಂಧ?: ದೀಪಕ ಅವರ ಮನೆಯಲ್ಲಿ ಆರೋಪಿ ಪ್ರಶಾಂತ ಅವರು ಕಾರು ಚಾಲಕನಾಗಿದ್ದರು. ಅಂಜಲಿ ಅವರ ಜೊತೆ ಅನೈತಿಕ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಇದಕ್ಕೆ ಪ್ರಶಾಂತ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಮುಂದೆ ತಮಗೆ ಅಪಾಯ ಎದುರಾಗಬಹುದು ಎಂದು ದೀಪಕ ತನ್ನ ಗೆಳೆಯರಾದ ನವೀನ ಅಶೋಕ ಕೆಂಗೇರಿ, ಪ್ರವೀಣ ಶಿವಲಿಂಗಪ್ಪ ಹುಡೇದ ಹಾಗೂ ಅಂಜಲಿ ಜೊತೆ ಸೇರಿಕೊಂಡು ಪ್ರಶಾಂತನನ್ನು ಹತ್ಯೆ ಮಾಡಲು ಸಂಚು ರೂಪಿಸಿದರು.

ಜ.28ರಂದು ಗೊಡಚಿನಮಲ್ಕಿ ಫಾಲ್ಸ್‌ ನೋಡಲು ಹೋಗೋಣ ಬಾ ಎಂದು ಪ್ರಶಾಂತನನ್ನು ಆರೋಪಿಗಳು ಕಾರಿನಲ್ಲಿ ಕರೆದುಕೊಂಡು ಹೋಗಿದ್ದರು. ಅಲ್ಲಿಯೇ ಸಮೀಪದಲ್ಲಿದ್ದ ಅರಣ್ಯ ಪ್ರದೇಶದಲ್ಲಿ ಕೊಲೆ ಮಾಡಿದ್ದರು. ಪ್ರಕರಣವನ್ನು ಮುಚ್ಚಿಹಾಕಲು ಅಂಜಲಿಯು, ಇದೇ ಫೆಬ್ರುವರಿ 4ರಂದು ಪೊಲೀಸ್‌ ಠಾಣೆಗೆ ಬಂದು ಪತಿ ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು