ಸೋಮವಾರ, ನವೆಂಬರ್ 18, 2019
25 °C

ಅಕ್ರಮ ಮದ್ಯ ಮಾರಾಟ; ಬಂಧನ

Published:
Updated:

ಬೆಳಗಾವಿ: ಗೋವಾ ಹಾಗೂ ಮಿಲಿಟರಿ ಮದ್ಯವನ್ನು ಅಕ್ರಮವಾಗಿ ತನ್ನ ಮನೆಯಲ್ಲಿ ಇಟ್ಟುಕೊಂಡು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಆರೋಪದ ಮೇಲೆ ರಾಜೇಶ ಕೇಶವ ನಾಯ್ಕ (37) ಅವರನ್ನು ಸೈಬರ್‌ಕ್ರೈಂ, ಎಕಾನಾಮಿಕ್‌ ಅಫೇನ್ಸ್‌ ಹಾಗೂ ನರ್ಕಾಟಿಕ್ಸ್‌ (ಸಿಇಎನ್‌) ಪೊಲೀಸರು ಗುರುವಾರ ರಾತ್ರಿ ಬಂಧಿಸಿದರು.

ಕುಮಾರಸ್ವಾಮಿ ಲೇಔಟ್‌ನ ನಿವಾಸಿಯಾಗಿದ್ದ ರಾಜೇಶ ಅವರು ವಿನಾಯಕ ನಗರದಲ್ಲಿರುವ ಅಪರ್ಣಾ ರೆಸಿಡೆನ್ಸಿಯಲ್ಲಿ ಅಪಾರ್ಟ್‌ಮೆಂಟ್‌ನಲ್ಲಿ ಬಾಡಿಗೆ ಮನೆಯನ್ನು ಹೊಂದಿದ್ದರು. ಇಲ್ಲಿ ವಿವಿಧ ಕಂಪನಿಗಳ ಮದ್ಯದ ಬಾಟಲಿಯನ್ನು ಸಂಗ್ರಹಿಸಿಟ್ಟುಕೊಂಡು, ಅಕ್ರಮವಾಗಿ ಮಾರಾಟ ಮಾಡುತ್ತಿದ್ದರು ಎನ್ನುವ ದೂರಿನ ಮೇರೆಗೆ ದಾಳಿ ನಡೆಸಿದ ಪೊಲೀಸರು ಅವರನ್ನು ಬಂಧಿಸಿದರು.

₹ 4.42 ಲಕ್ಷ ಮೌಲ್ಯದ 750 ಎಂ.ಎಲ್‌ ಸಾಮರ್ಥ್ಯದ 411 ಬಾಟಲಿಗಳು ಹಾಗೂ ₹ 4,690 ನಗದು ವಶಪಡಿಸಿಕೊಂಡರು. 

ಕಾರ್ಯಾಚರಣೆಯಲ್ಲಿ ಪಿಐ ಯು.ಎಚ್‌. ಸಾತೇನಹಳ್ಳಿ, ಪಿಎಸ್‌ಐ ಜಯಶ್ರೀ ಮಾನೆ, ಎಎಸ್‌ಐ ಎಸ್‌.ಎಲ್‌. ದೇಶನೂರ, ಸಿಬ್ಬಂದಿಗಳಾದ ಬಿ.ಎಫ್‌. ಬಸ್ತವಾಡ, ಎನ್‌.ಜೆ. ಮಾದರ, ಡಿ.ಎಚ್‌. ಮಾಳಗಿ, ಎಸ್‌.ಎಲ್‌. ಅಜ್ಜಪ್ಪನವರ, ಮಾರುತಿ ಎಲ್‌.ಕೊನ್ಯಾಗೋಳ, ಕೆ.ವಿ. ಚರಲಿಂಗಮಠ, ವಿ.ಎನ್‌. ಬಡವಣ್ಣವರ ಹಾಗೂ ಎ.ಎಂ. ರಾಮಗೋನಟ್ಟಿ ಭಾಗವಹಿಸಿದ್ದರು.

 

ಪ್ರತಿಕ್ರಿಯಿಸಿ (+)