ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯೋಜನೆಗಳ ಅನುಷ್ಠಾನದಿಂದ ಪ್ರಗತಿ’

ಐಐಎಂ ಪ್ರಾಧ್ಯಾಪಕ ಪ್ರೊ.ಶ್ರೀನಿವಾಸನ್‌ ಅಭಿಪ್ರಾಯ
Last Updated 5 ಫೆಬ್ರುವರಿ 2019, 12:17 IST
ಅಕ್ಷರ ಗಾತ್ರ

ಬೆಳಗಾವಿ: ‘ಸರ್ಕಾರದ ಯೋಜನೆಗಳ ಪರಿಣಾಮಕಾರಿ ಹಾಗೂ ಪ್ರಾಮಾಣಿಕ ಅನುಷ್ಠಾನದಿಂದ ರಾಷ್ಟ್ರದ ಸಮಗ್ರ ಬೆಳವಣಿಗೆ ಸಾಧ್ಯವಾಗುತ್ತದೆ’ ಎಂದು ಬೆಂಗಳೂರಿನ ಭಾರತೀಯ ವ್ಯವಸ್ಥಾಪನಾ ಸಂಸ್ಥೆ (ಐಐಎಂ) ಪ್ರಾಧ್ಯಾಪಕ ಪ್ರೊ.ಶ್ರೀನಿವಾಸನ್‌ ಅಭಿಪ್ರಾಯಪಟ್ಟರು.

ಇಲ್ಲಿನ ಜಿಐಟಿಯಲ್ಲಿ ಎಂಬಿಎ ವಿಭಾಗ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

‘ಮೇಕ್ ಇನ್ ಇಂಡಿಯಾ ಮತ್ತು ಡಿಜಿಟಲ್ ಇಂಡಿಯಾ ಮೊದಲಾದ ನೀತಿಗಳು ಆರ್ಥಿಕ ಬೆಳವಣಿಗೆಗೆ ಮಾತ್ರವಲ್ಲದೇ ದೇಶದ ಒಟ್ಟಾರೆ ಸಾಮಾಜಿಕ-ಆರ್ಥಿಕ ಅಭಿವೃದ್ಧಿ ಮುಂದಿನ ಹಂತಕ್ಕೆ ಹೆಚ್ಚಿಸುವ ಸಾಮರ್ಥ್ಯ ಹೊಂದಿವೆ’ ಎಂದರು.

‘ಯೋಜನೆಗಳ ಪರಿಣಾಮಕಾರಿ ಅನುಷ್ಠಾನವು ದೇಶದ ಆಂತರಿಕ ಅಭಿವೃದ್ಧಿಯಲ್ಲಿ ಖಂಡಿತವಾಗಿಯೂ ಸಹಾಯ ಮಾಡುತ್ತದೆ ಮತ್ತು ಪ್ರಮುಖ ಸವಾಲುಗಳನ್ನು ಎದುರಿಸಲು ಆಡಳಿತಕ್ಕೆ ನೆರವಾಗುತ್ತದೆ. ಮನುಷ್ಯ ತನ್ನ ಕೆಲಸಗಳಲ್ಲಿ ಗುರಿ ಮುಟ್ಟಲು, ದಾರಿ ಸುಗುಮಗೊಳಿಸಲು ಹಾಗೂ ಪ್ರಯತ್ನಗಳನ್ನು ಕಡಿಮೆ ಮಾಡಲು ಹೊಸ ನಾವಿನ್ಯತೆಗಳು, ಸಂಶೋಧನೆಗಳನ್ನು ನಡೆಸುತ್ತಾನೆ. ಇದಕ್ಕೆ ಡಿಜಿಟಲೀಕರಣ ಅತ್ಯುತ್ತಮ ಉದಾಹರಣೆಯಾಗಿದೆ’ ಎಂದು ಹೇಳಿದರು.

‘ಡಿಜಿಟಲ್ ಇಂಡಿಯಾ ಯೋಜನೆ ರಾಷ್ಟ್ರದ ಹಲವು ಅಭಿವೃದ್ಧಿ ಅಂಶಗಳಿಗೆ ಹೆಚ್ಚು ಅಗತ್ಯವಾದ ಪ್ರೋತ್ಸಾಹದಾಯಕ ಪರಿಹಾರಗಳನ್ನು ಒದಗಿಸುತ್ತದೆ. ವಾಣಿಜ್ಯೋದ್ಯಮದಲ್ಲಿ ಅನೇಕ ಆಯಾಮಗಳಲ್ಲಿ ಮಾರುಕಟ್ಟೆ ವೇದಿಕೆಗಳನ್ನು ತೆರೆದಿದೆ. ಮೇಕ್‌ ಇನ್ ಇಂಡಿಯಾ ಯೋಜನೆಯು ಭಾರತವನ್ನು ಪ್ರಮುಖ ಉತ್ಪಾದನಾ ಕೇಂದ್ರವಾಗಿ ಸ್ಥಾಪಿಸುವ ಗುರಿ ಹೊಂದುವುದರೊಂದಿಗೆ ಅಲ್ಪಾವಧಿಯಲ್ಲಿಯೇ ವಿವಿಧ ವಲಯಗಳಲ್ಲಿ ಹೂಡಿಕೆ ಆಕರ್ಷಿಸಲು ಕಾರಣವಾಗಿದೆ. ಯುವ ಜನತೆಗೆ ಹೊಸ ಉದ್ಯೋಗದ ಅವಕಾಶಗಳನ್ನು ಸೃಷ್ಟಿಸುತ್ತಿದೆ’ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಜಿಐಟಿ ಆಡಳಿತ ಮಂಡಳಿ ಅಧ್ಯಕ್ಷ ಯು.ಎನ್. ಕಾಲಕುಂದ್ರಿಕರ ಮಾತನಾಡಿದರು.

ಪ್ರಾಚಾರ್ಯ ಎ.ಎಸ್. ದೇಶಪಾಂಡೆ ಇದ್ದರು. ಎಂಬಿಎ ವಿಭಾಗದ ಡೀನ್ ಪ್ರೊ.ಕೃಷ್ಣಶೇಖರ ಲಾಲ್‌ದಾಸ್ ಪ್ರಾಸ್ತಾವಿಕ ಮಾತನಾಡಿದರು. ಪ್ರೊ.ಜ್ಯೋತಿ ತಲರೇಜಾ ಪರಿಚಯಿಸಿದರು. ಪ್ರೊ.ನೂಪುರ ವೇಶ್ನೆ ನಿರೂಪಿಸಿದರು. ಪ್ರೊ.ವಿನಾಯಕ ಹೊಸಮನಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT