ಗುರುವಾರ , ನವೆಂಬರ್ 21, 2019
20 °C

ಸೇನೆಗೆ ಏಳು ಯುವತಿಯರು

Published:
Updated:

ಬೆಳಗಾವಿ: ಭಾರತೀಯ ಸೇನೆಯಿಂದ ಇಲ್ಲಿ ಈಚೆಗೆ ನಡೆದ ಸೇನಾ ಭರ್ತಿ ರ‍್ಯಾಲಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಏಳು ಯುವತಿಯರು ಆಯ್ಕೆಯಾಗಿದ್ದಾರೆ.

ಸೇನೆಗೆ ಮಹಿಳೆಯರ ಆಯ್ಕೆಗಾಗಿ (ಮಹಿಳಾ ಮಿಲಿಟರಿ ಪೊಲೀಸ್) ಇದೇ ಮೊದಲಿಗೆ ರ‍್ಯಾಲಿ ನಡೆಸಲಾಗಿತ್ತು.

ಖಾನಾಪುರ ತಾಲ್ಲೂಕಿನ ಕಾಮಶಿಕೊಪ್ಪದ ಜ್ಯೋತಿ ಚೌಲಗಿ, ಬೈಲಹೊಂಗಲ ತಾಲ್ಲೂಕು ಅಮಟೂರ ಗ್ರಾಮದ ಜ್ಯೋತಿ ಹಂಚಿನಮನಿ, ನಗರದ ಭಡಕಲ್‌ ಗಲ್ಲಿಯ ಸ್ಮಿತಾ ಪಾಟೀಲ, ಕಾಗವಾಡ ತಾಲ್ಲೂಕು ಶೇಡಬಾಳದ ಆರತಿ ತಳವಾರ, ಬೆಳಗಾವಿ ತಾಲ್ಲೂಕು ವಾಘವಡೆಯ ರಾಘವೇಣಿ ಪಾಟೀಲ, ಹುಕ್ಕೇರಿ ತಾಲ್ಲೂಕು ಕೇಸ್ತಿ ಗ್ರಾಮದ ಸಂಗೀತಾ ಕೋಳಿ ಹಾಗೂ ಇಸ್ಲಾಂಪುರದ ಭಾಗ್ಯಶ್ರೀ ಬಡಿಗೇರ ಆಯ್ಕೆಯಾಗಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.

ಪ್ರತಿಕ್ರಿಯಿಸಿ (+)