ಮಂಗಳವಾರ, ಜೂನ್ 28, 2022
20 °C

ಮುಂಗಾರು ಹಂಗಾಮು: ತೋಟಗಾರಿಕೆ ಬೆಳೆಗೆ ವಿಮೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ಮುಂಗಾರು ಹಂಗಾಮಿಗೆ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಲ್ಲಿ ದ್ರಾಕ್ಷಿ, ದಾಳಿಂಬೆ, ಹಸಿ ಮೆಣಸಿನಕಾಯಿ (ನೀರಾವರಿ) ಹಾಗೂ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಲ್ಲಿ ಅರಿಸಿನ, ಆಲೂಗಡ್ಡೆ (ಮಳೆಯಾಶ್ರಿತ), ಟೊಮೆಟೊ, ಈರುಳ್ಳಿ (ನೀರಾವರಿ/ ಮಳೆಯಾಶ್ರಿತ) ಹಾಗೂ ಎಲೆಕೋಸು ಬೆಳೆಗಳಿಗೆ ವಿಮೆ ಪಾವತಿಸಬಹುದು’ ಎಂದು ತೋಟಗಾರಿಕೆ ಇಲಾಖೆ ಉಪ ನೀರ್ದೆಶಕ ರವೀಂದ್ರ ಹಕಾಟಿ ತಿಳಿಸಿದ್ದಾರೆ.

ಅಥಣಿ ತಾಲ್ಲೂಕಿಗೆ ದ್ರಾಕ್ಷಿ, ದಾಳಿಂಬೆ, ಗೋಕಾಕಕ್ಕೆ ದ್ರಾಕ್ಷಿ ಮತ್ತು ಹಸಿಮೆಣಸಿನಕಾಯಿ (ನೀರಾವರಿ), ರಾಯಬಾಗ ತಾಲ್ಲೂಕಿಗೆ ದ್ರಾಕ್ಷಿ ಹಾಗೂ ಬೈಲಹೊಂಗಲ, ಚಿಕ್ಕೋಡಿ, ಹುಕ್ಕೇರಿ ಹಾಗೂ ಸವದತ್ತಿ ತಾಲ್ಲೂಕುಗಳಿಗೆ ಹಸಿಮೆಣಸಿನಕಾಯಿ (ನೀರಾವರಿ) ಬೆಳೆಗಳಿಗೆ ಬೆಳೆ ವಿಮಾ ಪಾವತಿಸಲು ಜೂನ್ 30 ಕೊನೆಯ ದಿನಾಂಕವಾಗಿದೆ.

ಪ್ರತಿ ಹೆಕ್ಟೇರ್ ದ್ರಾಕ್ಷಿ ಬೆಳೆಗೆ ₹ 14ಸಾವಿರ, ದಾಳಿಂಬೆಗೆ ₹ 6,350 ಹಾಗೂ ಹಸಿಮೆಣಸಿನಕಾಯಿ (ನೀರಾವರಿ) ಬೆಳೆಗೆ ₹ 3,550ರಂತೆ ರೈತರು ವಿಮಾ ಕಂತು ಪಾವತಿಸಬೇಕು, ಅಂತೆಯೇ, ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಲ್ಲಿ ಜಿಲ್ಲೆಗೆ ಅರಿಸಿನ, ಆಲೂಗಡ್ಡೆ (ಮಳೆಯಾಶ್ರಿತ), ಟೊಮೆಟೊ, ಈರುಳ್ಳಿ (ನೀರಾವರಿ/ಮಳೆಯಾಶ್ರಿತ) ಹಾಗೂ ಎಲೆಕೋಸು ಬೆಳೆಗಳಿಗೆ ವಿಮೆ ಪಾವತಿಸಬಹುದಾಗಿದೆ. ಎಲೆಕೋಸು ಬೆಳೆಗೆ ಜುಲೈ 15 ಹಾಗೂ ಉಳಿದ ಬೆಳೆಗಳಿಗೆ ಜುಲೈ 31ರಂದು ಕೊನೆಯ ದಿನಾಂಕವಾಗಿದೆ.

ಪ್ರತಿ ಹೆಕ್ಟೇರ್ ಅರಿಸಿನ ಬೆಳೆಗೆ ₹ 6650, ಆಲೂಗಡ್ಡೆ (ಮಳೆಯಾಶ್ರಿತ)ಗೆ ₹ 1337, ಟೊಮೆಟೊ ಬೆಳೆಗೆ ₹ 5334, ಈರುಳ್ಳಿ (ನೀರಾವರಿ)ಗೆ ₹ 3750, ಈರುಳ್ಳಿ (ಮಳೆಯಾಶ್ರಿತ)ಗೆ ₹ 3,500‌ ಹಾಗೂ ಎಲೆಕೋಸುಗೆ ₹ 1430ರಂತೆ ವಿಮಾ ಕಂತಿನ ಮೊತ್ತ ನಿಗದಿಯಾಗಿದೆ. ಹತ್ತಿರದ ಬ್ಯಾಂಕ್ ಶಾಖೆಗಳಲ್ಲಿ ವಿಮೆ ಕಂತು ಪಾವತಿಸಬೇಕು. ಹೆಚ್ಚಿನ ಮಾಹಿತಿಗೆ ಬೆಳಗಾವಿ (0831-2431559), ಗೋಕಾಕ (08332-229382), ಖಾನಾಪುರ (08336-223387), ಸವದತ್ತಿ (08330-222082), ಅಥಣಿ (08289-285099), ರಾಮದುರ್ಗ (08335-241512), ರಾಯಬಾಗ (08331-225049), ಹುಕ್ಕೇರಿ (08333-265915), ಚಿಕ್ಕೋಡಿ (08338-274943), ಬೈಲಹೊಂಗಲ (08288-233758) ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು