ಮುರಕೀಭಾವಿ: 80 ವರ್ಷ ಬಳಿಕ ಜಾತ್ರೆ ಸಂಭ್ರಮ

ನೇಸರಗಿ (ಬೆಳಗಾವಿ ಜಿಲ್ಲೆ): ಸಮೀಪದ ಮುರಕೀಭಾವಿ ಗ್ರಾಮದಲ್ಲಿ 80 ವರ್ಷಗಳ ನಂತರ ಗ್ರಾಮದೇವಿ ಮತ್ತು ದುರ್ಗಾದೇವಿ ಜಾತ್ರೆಯನ್ನು ಜನರು ಸಂಭ್ರಮ–ಸಡಗರ ಹಾಗೂ ಸಾಂಪ್ರದಾಯಿಕವಾಗಿ ಆಚರಿಸಿದರು. ಭಂಡಾರದಲ್ಲಿ ಮಿಂದೆದ್ದರು.
ಗ್ರಾಮದಾದ್ಯಂತ ಭಂಡಾರದ ಚೀಲ ಹಿಡಿದಿದ್ದ ಭಕ್ತರು ಬಂದ ಜನರ ಮೇಲೆ ಭಂಡಾರ ಎರಚಿ ಸಂಭ್ರಮ ಹಂಚಿಕೊಂಡರು. ಮಕ್ಕಳು ಗುಂಪು ಗುಂಪಾಗಿ ಓಡಾಡುತ್ತಾ ಖುಷಿಪಟ್ಟರು.
ಹಲವು ಊರುಗಳಿಂದ ಬಂದಿದ್ದ ನೆಂಟರು, ಸ್ನೇಹಿತರು ಕೂಡ ಭಾಗಿಯಾದರು. ವಿಶೇಷ ಭೋಜನ ಸವಿದರು.
ಗ್ರಾಮದೇವಿ ದ್ಯಾಮವ್ವ ಮೂರ್ತಿಗೆ ಕೆಂಪು ಬಣ್ಣ, ದುರ್ಗವ್ವ ಮೂರ್ತಿಗೆ ಹಸಿರು ಬಣ್ಣದ ಸೀರೆ ಉಡಿಸಿ ಅಲಂರಿಸಲಾಗಿತ್ತು. ಅಕ್ಕತಂಗೇರಹಾಳ ಗ್ರಾಮದ ಬಡಿಗೇರ ಮನೆತನದವರು ಮಾಡಿದ್ದ ಮೂರ್ತಿಯನ್ನು ಟ್ರ್ಯಾಕ್ಟರ್ನಲ್ಲಿ ತರುತ್ತಿದ್ದಂತೆಯೇ ಭಕ್ತರು ಪೂಜೆ ಸಲ್ಲಿಸಿ ಭಕ್ತಿ ಮೆರೆದರು. ಗ್ರಾಮದಲ್ಲಿ ಇಂಚಲ ಶಿವಾನಂದ ಭಾರತಿ ಸ್ವಾಮೀಜಿ, ಹಣಬರಹಟ್ಟಿ ಬಸವಲಿಂಗ ಪಟ್ಟದೇವರು, ರಮಾನಂದ ಸ್ವಾಮೀಜಿ ಪೂಜೆ ಸಲ್ಲಿಸಿ ಪ್ರತಿಷ್ಠಾಪನೆ ಮಾಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.