ಗುರುವಾರ , ಆಗಸ್ಟ್ 22, 2019
26 °C

‘ಕುಸಿದ ಮನೆಗಳ ತೆರವಿಗೆ ಜೆಸಿಬಿ ಒದಗಿಸುವೆ: ಸತೀಶ ಜಾರಕಿಹೊಳಿ

Published:
Updated:
Prajavani

ಗೋಕಾಕ: ಶಾಸಕ ಸತೀಶ ಜಾರಕಿಹೊಳಿ ಬುಧವಾರ ನಗರದ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ‌
ಇಲ್ಲಿನ ವಡ್ಡರ ಗಲ್ಲಿ, ಕುಂಬಾರ ಗಲ್ಲಿ, ಲಕ್ಕಡ ಗಲ್ಲಿ, ಉಪ್ಪಾರ ಗಲ್ಲಿ, ಕಲಾಲ ಗಲ್ಲಿ ಸೇರಿ ವಿವಿಧೆಡೆ ಸಂಚರಿಸಿ ನಗರಸಭೆ ಹಾಗೂ ಸತೀಶ ಶುಗರ್ಸ್‌ ಸಿಬ್ಬಂದಿ ಕೈಗೊಂಡಿರುವ ಸ್ವಚ್ಛತಾ ಕಾರ್ಯವನ್ನು ವೀಕ್ಷಿಸಿದರು. ಸಂತ್ರಸ್ತರಿಗೆ ಒದಗಿಸಿರುವ ಸೌಲಭ್ಯಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. 

‌‌‘ಕುಸಿದ ಗೋಡೆ ಹಾಗೂ ಮನೆಗಳ ತೆರವಿಗೆ ಸತೀಶ ಶುಗರ್ಸ್‌ ಕಾರ್ಖಾನೆಯಿಂದ ಜೆಸಿಬಿ ಹಾಗೂ ಟ್ರ್ಯಾಕ್ಟರ್‌ಗಳನ್ನು ಒದಗಿಸಲಾಗುವುದು. ಸಂತ್ರಸ್ತರು ಇವುಗಳ ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಭರವಸೆ ನೀಡಿದರು. 

ನಗರಸಭೆ ಸದಸ್ಯ ಭಗವಂತ ಹುಳ್ಳಿ, ಉದ್ಯಮಿ ಲಖನ್‌ ಜಾರಕಿಹೊಳಿ, ಮುಖಂಡರಾದ ರಿಯಾಜ ಚೌಗಲಾ, ಶಿವು ಪಾಟೀಲ, ವಿವೇಕ ಜತ್ತಿ, ಆರೀಪ ಪೀರಜಾದೆ, ಸದಾನಂದ ಕಲಾಲ, ವಿನಾಯಕ ಚಿಪ್ಪಲಕಟ್ಟಿ, ಅಶೋಕ ರಾಠೋಡ ಇದ್ದರು.

Post Comments (+)