ಕಾಗವಾಡ: ‘ಗ್ರಾಮಗಳು ಅಭಿವೃದ್ಧಿಯಾಗಬೇಕಾದರೆ ಪ್ರತಿಯೊಬ್ಬ ನಾಗರಿಕರು ಕರ ತುಂಬುವುದು ಮುಖ್ಯ. ಸಕಾಲದಲ್ಲಿ ಕಾಗವಾಡ ತಾಲ್ಲೂಕಿನ ಸಾರ್ವಜನಿಕರು ಕರ ಸಂದಾಯ ಮಾಡುವ ಮೂಲಕ ಸಹಕಾರ ನೀಡಿರುವುದು ಅಭಿನಂದನಾರ್ಹ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಹೇಳಿದರು. ತಾಲ್ಲೂಕಿನ ಉಗಾರ ಬಿ.ಕೆ.ಗ್ರಾಮಕ್ಕೆ ಶನಿವಾರ ಭೇಟಿ ನೀಡಿ ಗ್ರಾಮ ಪಂಚಾಯಿತಿಯಲ್ಲಿ ಏರ್ಪಡಿಸಿದ ಕಾಯಕ ಗ್ರಾಮ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ಕಾಗವಾಡ ತಾಲ್ಲೂಕಿನ ಏಳು ಗ್ರಾಮ ಪಂಚಾಯಿತಿಗಳು ಶೇ100 ಕ್ಕೂ ಹೆಚ್ಚು ಕರ ವಸೂಲಾತಿ ಮಾಡಿರುವುದು ಶ್ಲಾಘನೀಯ. ಇದು ಹೀಗೆ ಮುಂದುವರಿಸಿ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಿ, ಗ್ರಾಮಸ್ಥರಿಗೆ ಅಗತ್ಯ ಸೌಲಭ್ಯಗಳನ್ನು ನೀಡಬೇಕು’ ಎಂದರು.

ಇದೇ ವೇಳ ತಾಲ್ಲೂಕಿನ ಕರ ವಸೂಲಾತಿಯಲ್ಲಿ ಸಾಧನೆ ಮಾಡಿದ ಏಳು ಗ್ರಾಮ ಪಂಚಾಯಿತಿ ಅಭಿವೃಧ್ಧಿ ಅಧಿಕಾರಿಗಳನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಸನ್ಮಾನಿಸಿದರು.

ನಂತರ ಸರ್ಕಾರಿ ಕನ್ನಡ ಗಂಡು ಹಾಗೂ ಹೆಣ್ಣು ಮಕ್ಕಳ ಶಾಲೆಗೆ ಭೇಟಿ ನೀಡಿ, ಪರಿಶೀಲಿಸಿ ಎರಡು ಶಾಲೆಗಳು ಒಂದೇ ಆವರಣದಲ್ಲಿರುವುದರಿಂದ ಎರಡನ್ನು ವಿಲೀನಗೊಳಿಸಿ ಅಲ್ಲಿರುವ ಆರು ಜನ ಶಿಕ್ಷಕರು ಎಲ್ಲಾ ಮಕ್ಕಳಿಗೆ ಶಿಕ್ಷಣ ನೀಡಿದರೆ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಶಾಲಾ ಸುಧಾರಣಾ ಸಮಿತಿ, ಪಾಲಕರು ಮತ್ತು ಶಾಸಕರ ಅಭಿಪ್ರಾಯವನ್ನು ಪಡೆದು ವಿಲೀನಗೊಳಿಸುವಂತೆ ಕ್ಷೇತ್ರ ಶೀಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ರವೀಂದ್ರ ಬಂಗಾರೆಪ್ಪನವರ, ಇಒ ವೀರಣ್ಣ ವಾಲಿ, ಶಿವಾನಂದ ಕಲ್ಲಾಪೂರ, ಬಿಇಒ ಪಾಂಡುರಂಗ ಮದಭಾವಿ, ಎ.ಡಿ ಅನ್ಸಾರಿ, ಮಲ್ಲಿಕಾರ್ಜುನ ನಾಮದಾರ, ರವೀಂದ್ರ ಮುರಗಾಲಿ, ಶಿವಾನಂದ ಸನ್ನಾಳ, ಬಸಗೌಡ ಕಾಗೆ, ಜ್ಞಾನೇಶ್ವರ ಕಾಂಬಳೆ, ವೆಂಕಟೇಶ ಕುಲಕರ್ಣಿ,ನಿಂಗನಗೌಡ ಬಿರಾದಾರ, ಕಾಂತಿನಾಥ ಬಿರಾದಾರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260405-21-784528907

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.