ಕಾಗವಾಡ: ಮಹಾರಾಷ್ಟ್ರದ ಮಿರಜ್ ಪಟ್ಟಣದ ಸಚೀನ ಆಸ್ಪತ್ರೆಯಲ್ಲಿ ಮೇ 24 ರಂದು ಉಚಿತ ಮಹಿಳೆಯರ ಲೈಂಗಿಕ ರೋಗಗಳು, ಬಂಜೆತನ ನಿವಾರಣೆ ಹಾಗೂ ಉಪಚಾರ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, ಇದರ ಲಾಭವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ಸ್ತ್ರೀರೋಗ ತಜ್ಞ ಡಾ. ಸಚೀನ ಸುಗಣ್ಣವರ ತಿಳಿಸಿದ್ದಾರೆ.

ಮಿರಜ್ದಲ್ಲಿನ ಸಚೀನ ಆಸ್ಪತ್ರೆಯು ಬಂಜೆತನ ನಿವಾರಣೆ ಹಾಗೂ ಮಹಿಳೆಯರ ಲೈಂಗಿಕ ರೋಗಗಳ ನಿವಾರಣೆ ಕುರಿತು ಕಳೆದ ಹಲವು ವರ್ಷಗಳಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರಗಳನ್ನು ಏರ್ಪಡಿಸಿ, ತನ್ನದೇ ಆದ ರೀತಿಯಲ್ಲಿ ಸಾಮಾಜಿಕ ಕಾರ್ಯವನ್ನು ಕೈಗೊಳ್ಳುತ್ತಿದೆ ಎಂದು ಹೇಳಿದರು.

ಈ ಆಸ್ಪತ್ರೆಯಲ್ಲಿ ನುರಿತ ವೈದ್ಯರ ತಂಡ, ಅತ್ಯಾಧುನಿಕ ಯಂತ್ರೋಪಕರಣಗಳು ಜೊತೆಗೆ ಆಸ್ಪತ್ರೆಯು ಹೈಟೆಕ್ ಸೌಲಭ್ಯವನ್ನು ಹೊಂದಿದೆ. ಪ್ರತಿ ತಿಂಗಳು ಮಹಿಳೆಯರ ಎಲ್ಲ ಲೈಂಗಿಕ ರೋಗಗಳ ಮತ್ತು ಬಂಜೆತನ ನಿವಾರಣೆ ಹಾಗೂ ಉಪಚಾರ ಶಿಬಿರವನ್ನು ಉಚಿತವಾಗಿ ಹಮ್ಮಿಕೊಳ್ಳಲಾಗುತ್ತಿದೆ ಎಂದರು. ಲೈಂಗಿಕ ರೋಗಗಳಿಂದ ಬಳಲುವ ಹಾಗೂ ಮಕ್ಕಳಾಗದೇ ಇರುವ ದಂಪತಿಗಳು ಮೇ 24ರಂದು ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ಜರುಗುವ ಶಿಬಿರದಲ್ಲಿ ಉಚಿತ ಆರೋಗ್ಯ ತಪಾಸಣೆ, ಉಪಚಾರ ಮತ್ತು ಕಡಿಮೆ ಖರ್ಚಿನಲ್ಲಿ ಶಸ್ತ್ರಕ್ರಿಯೆ ಮಾಡಲಾಗುವುದು. ಇದರ ಲಾಭವನ್ನು ಪಡೆದುಕೊಳ್ಳುವಂತೆ ಡಾ. ಸಚೀನ ಸುಗಣ್ಣವರ ಮತ್ತು ನೇಹಾ ಸುಗಣ್ಣವರ ಕರೆ ನೀಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ.09765010834 ಸಂಪರ್ಕಿಸಬಹುದು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-21-911381624

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.