ಕಾಗವಾಡ: ತಾಲ್ಲೂಕಿನ ಮೋಳೆ ಗ್ರಾಮ ಮಲ್ಲಯ್ಯ ದೇವಸ್ಥಾನದಲ್ಲಿ ಕಳ್ಳರು ಕೈಚಳಕ ತೋರಿಸಿ 20 ತೊಲ ಬೆಳ್ಳಿ ಆಭರಣಗಳನ್ನು ಸೋಮವಾರ ರಾತ್ರಿ ಕಳವು ಮಾಡಿಕೊಂಡು ಹೋಗಿದ್ದಾರೆ.

ಗ್ರಾಮ ಪಂಚಾಯಿತಿ ಹತ್ತಿರದ ದೇವಸ್ಥಾನದ ಬಾಗಿಲು ಒಡೆದು ಬೆಳ್ಳಿ ಆಭರಣಗಳು, ಮೂರ್ತಿ ಮೇಲೆ ಇರುವ ವಿಭೂತಿ ಬೆಳ್ಳಿಯ ಅಚ್ಚು ಸೇರಿದಂತೆ ಹಲವು ಬೆಳ್ಳಿ ಆಭರಣ ಕಳ್ಳರ ಪಾಲಾಗಿವೆ. ಪೂಜೆಗಾಗಿ ಪೂಜಾರಿಗಳು ಆಗಮಿಸಿದ ವೇಳೆ ಕಳವಾಗಿರುವುದು ಕಂಡು ಬಂದಿದೆ.

ಈ ಕುರಿತು ಕಾಗವಾಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಕಾಗವಾಡ ಪಿಎಸ್ಐ ರಾಘವೇಂದ್ರ ಖೋತ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.