ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಕಮರಿ: ರಾಣಿ ಚನ್ನಮ್ಮ ಸ್ಮರಣೆ

Last Updated 23 ಅಕ್ಟೋಬರ್ 2020, 8:29 IST
ಅಕ್ಷರ ಗಾತ್ರ

ಕಕಮರಿ: ಹೊರವಲಯದ ಚನ್ನಮ್ಮ ವೃತ್ತದಲ್ಲಿ ರಾಣಿ ಚನ್ನಮ್ಮ ಜಯಂತಿ ಮತ್ತು ವಿಜಯೋತ್ಸವವನ್ನು ಶುಕ್ರವಾರ ಆಚರಿಸಲಾಯಿತು.

ಅಮ್ಮಾಜೇಶ್ವರಿ ಪಿಕೆಪಿಎಸ್ ಮುಖ್ಯಕಾರ್ಯನಿರ್ವಾಹಕ ಮಲ್ಲಿಕಾರ್ಜುನ ಜನಗೌಡ ಮತ್ತು ರೇಣುಕಾ ಶುಗರ್ಸ್‌ ಕಬ್ಬು ಅಧಿಕಾರಿ ಈರಣ್ಣ ಬಸರಗಿ ಫೋಟೊ ಪೂಜೆ ನೆರವೇರಿಸಿದರು.

ಶಿಕ್ಷಕ ಮಹಾಂತೇಶ ಮಠಪತಿ ಮಾತನಾಡಿ, ‘ಇಂದಿನ ಯುವಕರು ಮೊಬೈಲ್‌ ಫೋನ್‌ಗಳಲ್ಲಿ ಹೆಚ್ಚಿನ ಸಮಯ ಮುಳುಗಿ ಹೋಗಿ ಜೀವನವನ್ನು ಹಾಳು ಮಾಡಿಕೊಳ್ಳುವಂತಹ ಪರಿಸ್ಥಿತಿ ಎದುರಾಗಿದೆ. ಅವರಿಗೆ ವೀರ ರಾಣಿ ಕಿತ್ತೂರು ಚನ್ನಮ್ಮನಂತಹ ಶೌರ್ಯವಂತರ ಸಾಹಸ ಹಾಗೂ ಧೈರ್ಯವನ್ನು ತಿಳಿಸಿಕೊಡಬೇಕು. ಅವರ ಆದರ್ಶಗಳನ್ನು ಪಾಲಿಸಲು ಪ್ರೇರಣೆ ನೀಡಬೇಕು’ ಎಂದು ತಿಳಿಸಿದರು.

ಮುಖಂಡರಾದ ಅಶೋಕ ಶಿರಗುಪ್ಪಿ, ಮಲ್ಲಿಕಾರ್ಜುನ ಕನಮಡಿ, ಉಮೇಶ ತಂಗಡಿ, ಅಪ್ಪಾಸಾಬ ಬಾಳಿಕಾಯಿ, ಸಂಜೀವ ಬಿಳ್ಳೂರ, ಗಿರಮಲ್ಲ ಅಡಹಳ್ಳಿ, ಪಿಂಟು ಆಜೂರ, ಮಹಾಂತೇಶ ತಾವಂಶಿ, ಶಿವಾನಂದ ಬಿರಾದಾರ, ಮಲ್ಲಿಕಾರ್ಜುನ ಜನಗೌಡ, ಗುಂಡು ತಂಗಡಿ, ಮಲ್ಲಪ್ಪ ದಾಶ್ಯಾಳ, ಸಂತೋಷ ಸವದಿ, ಕುಮಾರ ಬಿಳ್ಳೂರ, ಮಹಾದೇವ ಖೋಜನವಾಡಿ, ಬಿ.ಎಲ್. ಬಿರಾದಾರ ಇದ್ದರು.

ಮಹಾದೇವ ದಾಶ್ಯಾಳ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT