ಮೂಡಲಗಿ: ತಾಲ್ಲೂಕಿನ ಕಲ್ಲೋಳಿಯ ಬಸವೇಶ್ವರ ಸೌಹಾರ್ದ ಸಹಕಾರಿ ಸಂಘದಿಂದ ಪ್ರತಿ ವರ್ಷದಂತೆ, ಈ ವರ್ಷವೂ ಏ.20ರಂದು ಬಸವ ಜಯಂತಿ ಅಂಗವಾಗಿ ಪಟ್ಟಣದಲ್ಲಿ ನಡೆಯುವ ರಾಮಲಿಂಗೇಶ್ವರ ರಥೋತ್ಸವದಲ್ಲಿ ಅದ್ಧೂರಿಯಾಗಿ ಜೋಡೆತ್ತುಗಳ ಮೆರವಣಿಗೆ ಆಯೋಜಿಸಿದ್ದಾರೆ.

‘ಬಸವ ಜಯಂತಿಯಂದು ಜಗಜ್ಯೋತಿ ಬಸವೇಶ್ವರರ ಭಾವಚಿತ್ರದ ಮೆರವಣಿಗೆಯೊಂದಿಗೆ ಕಳೆದ ಎರಡು ದಶಕಗಳಿಂದ ಬಸವೇಶ್ವರ ಸಹಕಾರ ಸಂಘದಿಂದ ಜೋಡೆತ್ತುಗಳ ಮೆರವಣಿಗೆ ಮಾಡಿಕೊಂಡು ಬಂದಿದ್ದೇವೆ’ ಎಂದು ಸಂಘದ ಸಂಸ್ಥಾಪಕ ಅಧ್ಯಕ್ಷ ಬಾಳಪ್ಪ ಬಿ. ಬೆಳಕೂಡ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಮೆರವಣಿಗೆಯಲ್ಲಿ ಜೋಡೆತ್ತಿಗೆ ಮೇವಿಗಾಗಿ ಹಣ, 2 ಸ್ಟೀಲ್ ಬುಟ್ಟಿ, 1 ಸ್ಟೀಲ್ ಬಕೆಟ್ ಸಂಘದಿಂದ ನೀಡಲಾಗುತ್ತದೆ. ಎತ್ತಿನ ಜೊತೆಗೆ ಬರುವ ರೈತರಿಗೆ 2 ಟೀ ಶರ್ಟ್ ನೀಡಿ ಪ್ರೋತ್ಸಾಹಿಸುತ್ತಿದ್ದಾರೆ. ಈ ಸಲ 110 ಜೋಡೆತ್ತುಗಳು ಮೆರವಣಿಗೆಯಲ್ಲಿ ಭಾಗವಹಿಸಲು ಸಜ್ಜಾಗಿವೆ.

ಎತ್ತುಗಳ ಕೋಡುಗಳಿಗೆ ಬಣ್ಣದ ರಿಬ್ಬನ್, ಬಣ್ಣದ ಹಗ್ಗಗಳು, ಕೊರಳಿಗೆ ಗೆಜ್ಜೆಗಳ ಸರ, ಕಿರುಗಂಟೆ, ಬೆನ್ನಿನ ಮೇಲೆ ಬಣ್ಣದ ಜೂಲು (ಬಟ್ಟೆ), ಮೈಗೆ ಅಲ್ಲಲ್ಲಿ ಬಣ್ಣದ ಚಿತ್ತಾರ ಹಾಕಿರುವುದರಿಂದ ಮೈಲುದ್ದದವರೆಗೆ ಇರುವ ಜೋಡಿ ಎತ್ತುಗಳ ಸಾಲು ರಸ್ತೆಗೆ ಕಳೆಕಟ್ಟಿರುತ್ತದೆ.

ಕರಡಿ ಮಜಲು, ಹಲಗೆ ಮಜಲು ವಾದ್ಯಗಳ ಗತ್ತಿಗೆ ಹೆಜ್ಜೆ ಹಾಕುತ್ತ ಬರುವ ರೈತನ ಸರದಾರ ಎತ್ತುಗಳನ್ನು ಪಟ್ಟಣದ ಜನರು ರಸ್ತೆಯ ಎರಡೂ ಬದಿಯಲ್ಲಿ ನಿಂತು ಕಣ್ಮುಂಬಿಸಿಕೊಳ್ಳುತ್ತಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-21-1904844514

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.