ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಮೇಶ್ವರ ಜಾತ್ರಾ ಮಹೋತ್ಸವ ಆರಂಭ

ಎಂ.ಕೆ.ಹುಬ್ಬಳ್ಳಿ: ಉಡಿ ತುಂಬಿ ಪ್ರಾರ್ಥನೆ
Last Updated 1 ಏಪ್ರಿಲ್ 2022, 7:10 IST
ಅಕ್ಷರ ಗಾತ್ರ

ಎಂ.ಕೆ.ಹುಬ್ಬಳ್ಳಿ:ಎಂ.ಕೆ.ಹುಬ್ಬಳ್ಳಿ ಪಟ್ಟಣದ ಆರಾಧ್ಯ ದೈವ ಕಲ್ಮೇಶ್ವರ ದೇವರ ಜಾತ್ರಾ ಮಹೋತ್ಸವ ಗುರುವಾರದಿಂದ ಆರಂಭಗೊಂಡಿದ್ದು, ಮಂಗಳವಾರ ಏ.5ರ ವರೆಗೆ ಸಡಗರ-ಸಂಭ್ರಮದಿಂದ ನಡೆಯಲಿದೆ.

ವೇ.ಮೂ. ಚಂದ್ರಯ್ಯ ಸ್ವಾಮೀಜಿ, ಗೋಣಿಕಾಂತಿ ಹಿರೇಮಠ ಇವರ ನೇತೃತ್ವದಲ್ಲಿ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಮೊದಲ ದಿನವಾದ ಗುರುವಾರ ದೈವದವರ ವತಿಯಿಂದ ಪಟ್ಟಣದ ಗ್ರಾಮದೇವಿಯರಿಗೆ ಉಡಿ ತುಂಬಲಾಯಿತು.

ಶ್ರೀ ಕಲ್ಮೇಶ್ವರ ದೇವಸ್ಥಾನದಿಂದ ಗ್ರಾಮದೇವಿ ದೇವಸ್ಥಾನದವರೆಗೆ ಸಕಲ-ವಾದ್ಯಮೇಳಗಳೊಂದಿಗೆ ತೆರಳಿದ ಭಕ್ತರು, ಗ್ರಾಮದೇವಿಯರಿಗೆ ಉಡಿ ತುಂಬಿ ಕೈಮುಗಿದು ಪ್ರಾರ್ಥಿಸಿದರು. ಪೂಜೆ-ಪುನಸ್ಕಾರ ನೆರವೇರಿಸಿ ಭಕ್ತಿ ಸಮರ್ಪಿಸಿದರು. ಬೆಳಿಗ್ಗೆ ಕಲ್ಮೇಶ್ವರ ಹಾಗೂ ಗ್ರಾಮದೇವಿಯರಿಗೆ ರುದ್ರಾಭಿಷೇಕ ನೆರವೇರಿಸಲಾಯಿತು. ಈ ವೇಳೆ ದೇವಸ್ಥಾನ ಕಮಿಟಿ ಪದಾಧಿಕಾರಿಗಳು, ಹಿರಿಯರು, ಮಹಿಳೆಯರು, ಭಕ್ತರು ಪಾಲ್ಗೊಂಡಿದ್ದರು.

ಶಕ್ತಿದೇವ: ಐತಿಹಾಸಿಕ ಹಿನ್ನೆಲೆ ಹೊಂದಿರುವ ಕಲ್ಮೇಶ್ವರ ದೇವಸ್ಥಾನ ಶಕ್ತಿಕೇಂದ್ರವಾಗಿ ಗುರುತಿಸಿಕೊಂಡಿದೆ. ನಂಬಿದ ಭಕ್ತರ ಇಷ್ಟಾರ್ಥ ಇಡೇರಿಸುವ ಜೊತೆಗೆ ಸಂಕಷ್ಟದ ಸಮಯದಲ್ಲಿ ಹಲವರು ಕಲ್ಮೇಶ್ವರನಲ್ಲಿ ಹರಕೆ ಹೊತ್ತು ಒಳಿತನ್ನು ಕಂಡಿದ್ದಾರೆ. ಸಾವು-ಬದುಕಿನ ನಡುವೆ ಹೋರಾಟಡುತ್ತಿದ್ದ ಹಲವರು ಪವಾಡ ರೀತಿ ಗುಣಮುಖರಾದ ಉದಾಹರಣೆಗಳಿವೆ ಎನ್ನುತ್ತಾರೆ ಭಕ್ತರು. ಹಾಗಾಗಿ, ಪ್ರತಿವರ್ಷ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡು ಶ್ರೀ ಕಲ್ಮೇಶ್ವರನ ರಥವನ್ನೆಳೆದು ಪುನೀತರಾಗುತ್ತಾರೆ.

ಜಾತ್ರಾ ಕಾರ್ಯಕ್ರಮಗಳ ವಿವರ:
ಮೊದಲ ದಿನವಾದ ಗುರುವಾರ ನಂದಿ ಧ್ವಜಾರೋಹಣ, ಕಲ್ಮೇಶ್ವರ ಹಾಗೂ ಶ್ರೀ ಗ್ರಾಮದೇವಿಯರಿಗೆ ರುದ್ರಾಭಿಷೇಕ ಹಾಗೂ ದೈವದವರಿಂದ ಗ್ರಾಮದೇವಿಯರ ಉಡಿ ತುಂಬಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT