ಬೆಳಗಾವಿ: ‘ಇಲ್ಲಿನ ಮಹಾನಗರ ಪಾಲಿಕೆ ಪರಿಷತ್ ಸಭೆಯಲ್ಲಿ, ‘ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ನಿರ್ಣಯ ಕೈಗೊಳ್ಳಲು ಜೂನ್ 2ರವರೆಗೆ ಕನ್ನಡ ಹೋರಾಟಗಾರರು ಗಡುವು ನೀಡಿದ್ದೇವೆ. ಅಷ್ಟರೊಳಗೆ ಬೇಡಿಕೆ ಈಡೇರದಿದ್ದರೆ ಬೆಂಗಳೂರಿನಲ್ಲಿ ಜೂನ್ 4ರಂದು ಕನ್ನಡಪರ ಸಂಘಟನೆಗಳ ರಾಜ್ಯಮಟ್ಟದ ಸಭೆ ನಡೆಸಿ, ಅಖಂಡ ಕರ್ನಾಟಕ ಬಂದ್ಗೆ ಕರೆ ಕೊಡುತ್ತೇವೆ’ ಎಂದು ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ ಎಚ್ಚರಿಕೆ ಕೊಟ್ಟರು.

‘ಪಾಲಿಕೆಯಲ್ಲಿ ಕರ್ನಾಟಕ ಪರವಾದ ನಿರ್ಣಯ ಅಂಗೀಕರಿಸಬೇಕು’ ಎಂದು ಆಗ್ರಹಿಸಿ ನಗರದಲ್ಲಿ ಮಂಗಳವಾರ ವಾಟಾಳ್ ನಾಗರಾಜ ನೇತೃತ್ವದಲ್ಲಿ 20ಕ್ಕೂ ಅಧಿಕ ಕನ್ನಡ ಸಂಘಟನೆಗಳ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.

ಆರಂಭದಲ್ಲಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪುನರ್ ಸ್ಥಾಪನೆಗೊಂಡ ಹಲ್ಮಿಡಿ ಶಾಸನದ ಪ್ರತಿಕೃತಿಗೆ ಮಲಪ್ರಭಾ, ಘಟಪ್ರಭಾ, ದೂಧಗಂಗಾ, ಹಿರಣ್ಯಕೇಶಿ ಹಾಗೂ ಕೃಷ್ಣಾ ನದಿಗಳ ನೀರಿನ ಅಭಿಷೇಕ ಹಾಗೂ ಕ್ಷೀರಾಭಿಷೇಕ ಮಾಡಿದ ನಂತರ, ಪಾಲಿಕೆಗೆ ಮುತ್ತಿಗೆ ಹಾಕಲು ಮುಂದಾದರು. ನೂರಾರು ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಸಾಗುತ್ತಿದ್ದ ಅವರನ್ನು ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಪೊಲೀಸರು ವಶಕ್ಕೆ ಪಡೆದರು.

ಹೋರಾಟದ ನೇತೃತ್ವ ವಹಿಸಿದ್ದ ವಾಟಾಳ್ ನಾಗರಾಜ ಸುದ್ದಿಗಾರರೊಂದಿಗೆ ಮಾತನಾಡಿ, ‘ಪಾಲಿಕೆಯಲ್ಲಿ ಕರ್ನಾಟಕ ಪರವಾದ ನಿರ್ಣಯ ಕೈಗೊಳ್ಳದಿದ್ದರೆ, ಬೆಳಗಾವಿಯಲ್ಲಿ ಎಂದೂ ಕಂಡರಿಯದ ಕ್ರಾಂತಿ ಆಗಲಿದೆ. ಬೆಳಗಾವಿಯಿಂದಲೇ ಇಡೀ ರಾಜ್ಯಕ್ಕೆ ಹೋರಾಟದ ಕಿಡಿ ಹೊತ್ತಲಿದೆ. ಹಾಗಾಗಿ ಜೂನ್ 2ರೊಳಗೆ ನಿರ್ಣಯ ತೆಗೆದುಕೊಳ್ಳಲೇಬೇಕು. ಇಲ್ಲದಿದ್ದರೆ 4ರಂದು ನಡೆಯುವ ಸಭೆಯಲ್ಲಿ ಕರ್ನಾಟಕ ಬಂದ್ಗೆ ಕರೆ ಕೊಡುತ್ತೇವೆ. ಬಂದ್ ದಿನ ನಾವೂ ಬೆಳಗಾವಿಗೆ ಬರುತ್ತೇವೆ. ಬೀದಿ ಬೀದಿಯಲ್ಲಿ ಮೆರವಣಿಗೆ, ಹೋರಾಟ ನಡೆಸುತ್ತೇವೆ. ಸರ್ಕಾರದ ಮೇಲೆ ಒತ್ತಡ ತರುತ್ತೇವೆ. ಆಗಲೂ ನಿರ್ಣಯ ಆಗದಿದ್ದರೆ, ಪಾಲಿಕೆಯ ಎಲ್ಲ ಸದಸ್ಯರನ್ನು ಮನೆಗೆ ಕಳುಹಿಸಬೇಕು’ ಎಂದರು.

‘ಪಾಲಿಕೆಯಲ್ಲಿ ಕರ್ನಾಟಕದ ಪರ ನಿರ್ಣಯ ಕೈಗೊಳ್ಳುವುದಕ್ಕೂ ನಾವು ಹೋರಾಟ ಮಾಡಬೇಕಾದ ಬೆಳಗಾವಿ ಈ ಪರಿಸ್ಥಿತಿಗೆ ಬರಲು ಇಲ್ಲಿನ ಸ್ವಾರ್ಥ ರಾಜಕಾರಣಿಗಳೇ ಕಾರಣ. ಇಂದು ಬೆಳಗಾವಿಯಲ್ಲಿ ಕನ್ನಡ ಉಳಿದಿದ್ದರೆ ಅದು ಕನ್ನಡ ಚಳವಳಿಗಾರರಿಂದಲೇ ಹೊರತು, ರಾಜಕಾರಣಿಗಳಿಂದ ಅಲ್ಲ’ ಎಂದು ವಾಗ್ದಾಳಿ ನಡೆಸಿದರು.

‘ಇಂದು 20ಕ್ಕೂ ಹೆಚ್ಚು ಕನ್ನಡ ಸಂಘಟನೆಯವರು ಹೋರಾಟಕ್ಕೆ ಸೇರಿದ್ದೇವೆ. ನಮಗೆ ನ್ಯಾಯ ಸಿಗುವವರೆಗೂ ಹೋರಾಟ ಮಾಡುತ್ತೇವೆ. ರಾಜ್ಯದಲ್ಲಿ ಕನ್ನಡ ಹೆಸರಿನಲ್ಲೇ ಯಾವುದೇ ಪಕ್ಷ ಅಧಿಕಾರಕ್ಕೆ ಬರಬೇಕು. ವಿಧಾನಸೌಧದಲ್ಲಿ ಕನ್ನಡ ಸಂಘಟನೆಗಳಿಗೆ ಪ್ರತ್ಯೇಕ ಕೊಠಡಿ ಕೊಡಬೇಕು. ಬೆಳಗಾವಿಯ ಕನ್ನಡ ಸಂಘಟನೆಗಳಿಗೆ ವಾರ್ಷಿಕ ₹1 ಕೋಟಿ ಅನುದಾನ ನೀಡಬೇಕು. ಜತೆಗೆ, ಪ್ರೆಸ್ ಕ್ಲಬ್ಗೆ ವಾರ್ಷಿಕ ₹5 ಕೋಟಿ ಅನುದಾನ ಕೊಡಬೇಕು. ಇವೆಲ್ಲಾ ಬೇಡಿಕೆ ಈಡೇರೆಲು ನಾನೇ ಮುಖ್ಯಮಂತ್ರಿ ಆಗಬೇಕು. ಮುಂದಿನ ಬಾರಿ ನಾನೇ ಮುಖ್ಯಮಂತ್ರಿ ಆಗುತ್ತೇನೆ’ ಎಂದರು.

ಕನ್ನಡ ಹೋರಾಟಗಾರ ಸಾ.ರಾ.ಗೋವಿಂದು, ‘ನಾನು 1983ನೇ ಇಸ್ವಿಯಿಂದಲೂ ಬೆಳಗಾವಿಯಲ್ಲಿ ಹೋರಾಟ ಮಾಡುತ್ತ ಬಂದಿದ್ದೇನೆ. ಇಂದು ಕನ್ನಡಿಗರ ಸ್ವಾಭಿಮಾನ ಎತ್ತಿ ಹಿಡಿಯುವ ಹಲ್ಮಿಡಿ ಶಾಸನಕ್ಕೆ ಪೂಜೆ ಸಲ್ಲಿಸಿ, ಹೋರಾಟಕ್ಕೆ ಅಣಿಯಾಗಿದ್ದು ಖುಷಿಯ ವಿಚಾರ. ಕರ್ನಾಟಕದ ಪರ ನಿರ್ಣಯಕ್ಕಾಗಿ ಯಾವುದೇ ಹೋರಾಟಕ್ಕೂ ಸಿದ್ಧ. ನಿರ್ಣಯ ಆಗುವವರೆಗೂ ವಿಶ್ರಾಂತಿ ಪಡೆಯಲ್ಲ’ ಎಂದರು.

‘ಪಾಲಿಕೆಯಲ್ಲಿ ಕರ್ನಾಟಕದ ಪರ ನಿರ್ಣಯ ಕೈಗೊಳ್ಳಲು ಹಿಂದೇಟು ಹಾಕುತ್ತಿರುವ ರಾಜಕೀಯ ಪಕ್ಷದವರಿಗೆ ಸ್ವಾಭಿಮಾನ ಮತ್ತು ನಾಡಿನ ಬಗ್ಗೆ ಕನಿಷ್ಠ ಅಭಿಮಾನ ಇಲ್ಲವಾ’ ಎಂದು ತರಾಟೆಗೆ ತೆಗೆದುಕೊಂಡರು.

ಕೆ.ಆರ್.ಕುಮಾರ, ‘ಸರ್ಕಾರದ ಮೊಂಡುತನದ ವಿರುದ್ಧ ಹೋರಾಟಕ್ಕೆ ಇಳಿದಿದ್ದೇವೆ. ನ್ಯಾಯಕ್ಕಾಗಿ ವಾಟಾಳ್ ನಾಗರಾಜ ನೇತೃತ್ವದಲ್ಲಿ ದೃಢ ಹೆಜ್ಜೆ ಇರಿಸುತ್ತೇವೆ’ ಎಂದು ತಿಳಿಸಿದರು.

ಮಂಜುನಾಥ ದೇವ, ‘ಕರ್ನಾಟಕದ ಅನ್ನ ತಿಂದು ಮತ್ತು ಇಲ್ಲಿನ ನೀರು ಕುಡಿದು ನಾಡದ್ರೋಹ ಚಟುವಟಿಕೆ ಎಸಗುತ್ತಿರುವವರಿಗೆ ಒಂದು ಗಟ್ಟಿಯಾದ ಸಂದೇಶ ಸಾರಬೇಕಿದೆ’ ಎಂದರು.

ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ, ‘ಪಾಲಿಕೆಯಲ್ಲಿ ಕರ್ನಾಟಕದ ಪರ ನಿರ್ಣಯ ಆಗುವವರೆಗೂ ಹೋರಾಟ ಕೈಬಿಡುವುದಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.