ಶುಕ್ರವಾರ, ನವೆಂಬರ್ 15, 2019
23 °C

’ಮಾತೃಭಾಷೆ ಕನ್ನಡದಲ್ಲಿ ಶಿಕ್ಷಣ ಕೊಡಿಸಿ’

Published:
Updated:
Prajavani

ಬೆಳಗಾವಿ: ಇಲ್ಲಿನ ವಿಟಿಯುನಲ್ಲಿ ಶುಕ್ರವಾರ 64ನೇ ಕರ್ನಾಟಕ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

ನಾಡದೇವಿ ಭುವನೇಶ್ವರಿ ಫೋಟೊಗೆ ಮಾಲಾರ್ಪಣೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿದ ಕುಲ‍ಪತಿ ಪ್ರೊ.ಕರಿಸಿದ್ದಪ್ಪ, ‘ಕನ್ನಡ ಭಾಷೆ ಅತ್ಯಂತ ಸಂಪತ್ಭರಿತವಾದ ಸಾಹಿತ್ಯ ಹಾಗೂ ವೈಚಾರಿಕತೆಯಿಂದ ಕೂಡಿದೆ. ನಮ್ಮ ಮಕ್ಕಳಿಗೆ ಮಾತೃ ಭಾಷೆ ಕನ್ನಡದಲ್ಲಿ ಶಿಕ್ಷಣ ಕೊಡಬೇಕಾದ ಅಗತ್ಯವಿದೆ’ ಎಂದರು.

ಕುಲಸಚಿವ ಡಾ.ಎ.ಎಸ್. ದೇಶಪಾಂಡೆ, ಹಣಕಾಸು ಅಧಿಕಾರಿ ಎಂ.ಎ. ಸಪ್ನಾ, ಸ್ಥಾನಿಕ ಎಂಜಿನಿಯರ್‌ ಹೇಮಂತಕುಮಾರ, ಎನ್‌ಎಸ್‌ಎಸ್‌ ಅಧಿಕಾರಿ ಡಾ.ಎಲ್‌.ವಿ. ಅಪ್ಪಾಸಾಬ ಇದ್ದರು.

ಪ್ರತಿಕ್ರಿಯಿಸಿ (+)