ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾಟೆ: ಶಾಹುನಗರ ಪ್ರತಿಭೆಗಳ ಸಾಧನೆ

Last Updated 17 ಮೇ 2022, 13:46 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಶಾಹುನಗರದ ಯೂನಿವರ್ಸಲ್ ಶೋಟೋಕಾನ್ ಕರಾಟೆ ತಂಡದ ಪಟುಗಳು ದಾವಣಗೆರೆಯ ಜಿಲ್ಲಾ ಗುರುಭವನದಲ್ಲಿ ಜುಡೋ ಮಾರ್ಷಲ್‌ ಆರ್ಟ್ಸ್‌ ಸಂಘ–ಕರ್ನಾಟಕ ಹಾಗೂ ಶೋಟೊಕಾನ್‌ ಕರಾಟೆ ಅಂತರರಾಷ್ಟ್ರೀಯ ಸಂಸ್ಥೆ ವತಿಯಿಂದ ಈಚೆಗೆ ಆಯೋಜಿಸಿದ್ದ 2ನೇ ರಾಜ್ಯಮಟ್ಟದ ಮುಕ್ತ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಹಲವು ಪದಕಗಳನ್ನು ಗೆದ್ದು ಮಿಂಚಿದ್ದಾರೆ. ಚಾಂಪಿಯನ್‌ಶಿಪ್‌ ಪಡೆದಿದ್ದಾರೆ.

ಬಾಲಕಿಯರ ವಿಭಾಗದಲ್ಲಿ ಶ್ರದ್ಧಾ ಸೂರ್ಯವಂಶಿ, ಕಾವೇರಿ ಪಿ.ಸೂರ್ಯವಂಶಿ, ಕರೀಷ್ಮಾ ಬಿ., ಮಂಜಿರಿ ಮತ್ತು ಶಾಂಭವಿ ಸೊಗಲದ ಚಿನ್ನದ ಪದಕ ಗೆದ್ದಿದ್ದಾರೆ. ನವ್ಯಾ ಬಿ. ಪಿಳ್ಳೈ ಹಾಗೂ ಮೃಣನ್ಮಯಿ ಎಸ್.ಭಾತ್ಖಾಂಡೆ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ.

ಬಾಲಕರ ವಿಭಾಗದಲ್ಲಿ ಆರ್‌.ಎಸ್. ಶುಭಾಂಜಿ, ಪ್ರಜ್ವಲ್ ಕಾಂಬ್ಳೆ ಹಾಗೂ ಧನರಾಜ್‌ ವಿ. ಖಟಾವಕರ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಯುವರಾಜ್‌ ವಿ. ಖಟಾವಕರ್ ಬೆಳ್ಳಿ ಮತ್ತು ಶಿವಂ ಆರ್. ಸೂರ್ಯವಂಶಿ ಮತ್ತು ಬ್ರಿಜೇಶ್ ಎ.ಗಾವಡೆ ಕಂಚಿನ ಪದಕ ಪಡೆದಿದ್ದಾರೆ. 300ಕ್ಕೂ ಹೆಚ್ಚಿನ ಪಟುಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT