ಸೋಮವಾರ, ಆಗಸ್ಟ್ 26, 2019
22 °C

ಬೆಳಗಾವಿ: ವಿವಿಧೆಡೆ ಸಂತ್ರಸ್ತರಿಗೆ ನೆರವು

Published:
Updated:
Prajavani

ಬೆಳಗಾವಿ: ಜಿಲ್ಲೆಯ ವಿವಿಧೆಡೆ ಪ್ರವಾಹದಿಂದ ಸಂತ್ರಸ್ತರಾಗಿರುವವರಿಗೆ ಮೈಸೂರಿನ ಕಾಂಗ್ರೆಸ್ ಮುಖಂಡ ಎಂ.ಕೆ. ಸೋಮಶೇಖರ ನೇತೃತ್ವದಲ್ಲಿ ಕಾರ್ಯಕರ್ತರು ಮಂಗಳವಾರ ಅಗತ್ಯ ಸಾಮಗ್ರಿಗಳನ್ನು ವಿತರಿಸಿದರು.

ಚಿಕ್ಕಾಲಗುಡ್ಡ, ಕುರಣಿ, ಕೋಚರಿ, ಅರ್ಜುನವಾಡ, ಪಾಶ್ಚಾಪುರ, ಗೋಕಾಕ ಮೊದಲಾದ ಕಡೆಗಳಲ್ಲಿ ₹ 10 ಲಕ್ಷ ಮೌಲ್ಯದ ಅಕ್ಕಿ, ಸಕ್ಕರೆ, ಅಡುಗೆ ಎಣ್ಣೆ, ಬೆಲ್ಲ ಮೊದಲಾದ ಆಹಾರ ಪದಾರ್ಥ, ಈರುಳ್ಳಿ, ಹೊದಿಕೆ ಮೊದಲಾದವುಗಳನ್ನು ಖುದ್ದಾಗಿ ವಿತರಿಸಿ, ಧೈರ್ಯ ತುಂಬಿದರು.

ಮುಖಂಡರಾದ ಮಲ್ಲಗೌಡ ಪಾಟೀಲ, ಕೆ. ಮಹೇಶ್, ಗುಣಶೇಖರ, ವಿಶ್ವ, ಡಿಪೊ ವಸಂತ, ವಿನಯ್, ಸಂತೋಷ್, ಕೋಚರಿ ಕುಶಲ್‌ಕುಮಾರ್ ಇದ್ದರು.

Post Comments (+)