ರಾಮದುರ್ಗ: ‘ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಬೊಕ್ಕಸದ ಮೇಲೆ ಹೆಚ್ಚಿನ ಹೊರೆ ಬಿದ್ದಿದೆ. ಆದರೂ ಗ್ರಾಮೀಣ ಪ್ರದೇಶದ ಜನರಿಗೆ ಮೂಲಸೌಲಭ್ಯ ಪೂರೈಕೆಗೆ ಸರಿಯಾದ ಸಮಯದಲ್ಲಿ ಅನುದಾನ ಬಿಡುಗಡೆ ಮಾಡುತ್ತಿದೆ’ ಎಂದರು ವಿಧಾನಸಭೆಯ ಮುಖ್ಯ ಸಚೇತಕ ಅಶೋಕ ಪಟ್ಟಣ ಹೇಳಿದರು.

₹25 ಲಕ್ಷ ವೆಚ್ಚದ ಘಟಕನೂರ–ಸುರೇಬಾನ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ಸಿಸಿ ರಸ್ತೆ ನಿರ್ಮಾಣ, ₹2.5 ಕೋಟಿ ವೆಚ್ಚದಲ್ಲಿ ರಂಕಲಕೊಪ–ದೊಡಮಂಗಡಿ ಗ್ರಾಮದ ಹತ್ತಿರ ಹೂವಿನ ಕೊಳ್ಳಕ್ಕೆ ಬ್ರಿಜ್ ಕಂ ಬ್ಯಾರೇಜ್ ನಿರ್ಮಾಣ, ₹30 ಲಕ್ಷ ವೆಚ್ಚದಲ್ಲಿ ರಾಮಾಪೂರದಲ್ಲಿ ಸಿಸಿ ರಸ್ತೆ, ₹2.35 ಕೋಟಿ ವೆಚ್ಚದಲ್ಲಿ ಆರಿಬೆಂಚಿ ಗ್ರಾಮದ ಸಮೀಪ ನೀರಾವರಿ ಕಾಲುವೆಯ ನವೀಕರಣ, ₹30 ಲಕ್ಷ ವೆಚ್ಚದಲ್ಲಿ ಹುಲಕುಂದ–ಹೊಸೂರು ರಸ್ತೆ ಸುಧಾರಣೆ ಕಾಮಗಾರಿಗೆ ಶನಿವಾರ ಅವರು ಚಾಲನೆ ನೀಡಿದರು.

‘ಗುತ್ತಿಗೆದಾರರು ಗುಣಮಟ್ಟದ ಕೆಲಸಕ್ಕೆ ಆದ್ಯತೆ ನೀಡಬೇಕು. ಕಾಮಗಾರಿ ಸಂದರ್ಭದಲ್ಲಿ ಅಧಿಕಾರಿಗಳ ಜೊತೆಗೆ ಗ್ರಾಮಸ್ಥರು ಸಹಕಾರ ನೀಡಬೇಕು. ಕಾಮಗಾರಿ ಕಳಪೆಯಾದರೆ ಅಧಿಕಾರಿಗಳ ಗಮನಕ್ಕೆ ತರಬೇಕು’ ಎಂದು ತಿಳಿಸಿದರು.

ಕಾಂಗ್ರೆಸ್ ಮುಖಂಡ ಪ್ರದೀಪ ಪಟ್ಟಣ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಶಿದ್ದಿಂಗಪ್ಪ ಶಿಂಗಾರಗೊಪ, ಮುಖಂಡರಾದ ಫಕೀರಪ್ಪ ಕೊಂಗವಾಡ, ನಾಶೀರಖಾನ್ ಶಾನೆಧಿವಾನೆ, ಜಿಲ್ಲಾ ಪಂಚಾಯಿತು ಮಾಜಿ ಸದಸ್ಯ ಜಹೂರ ಹಾಜಿ, ಕೆಎಂಎಫ್ ನಿರ್ದೇಶಕ ರಮೇಶ ಅಣ್ಣಿಗೇರಿ, ರಾಜಶೇಖರ ತೋಳಗಟ್ಟಿ, ಗುತ್ತಿಗೆದಾರ ವಿಜಯ ಶೆಟ್ಟಿ, ಪುಂಡಲೀಕ ಪಮ್ಮಾರ, ನೀರಾವರಿ ಇಲಾಖೆಯ ಎಇಇ ಶ್ರೀನಿವಾಸ ಅರಿಷಿನಗೋಡಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-21-734098076

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.