ಹುಬ್ಬಳ್ಳಿ: ಧಾರವಾಡ, ಬೆಳಗಾವಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಂಗಳವಾರ ಬಿರುಗಾಳಿ, ಗುಡುಗು ಮತ್ತು ಸಿಡಿಲು ಸಹಿತ ಧಾರಾಕಾರ ಮಳೆಯಾಯಿತು. ಹಲವು ಕಡೆ ವಿದ್ಯುತ್ ಕಂಬಗಳಿಗೆ ಹಾನಿಯಾದರೆ, ಕೆಲ ಕಡೆ ಮರಗಳು ಉರುಳಿ ಬಿದ್ದವು. ಬಹುತೇಕ ಕಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿತು.

ಬೆಳಗಾವಿ ಜಿಲ್ಲೆಯ ರಾಮದುರ್ಗ ಮತ್ತು ಖಾನಾಪುರ ತಾಲ್ಲೂಕಿನಲ್ಲಿ ಮಳೆಯಾಯಿತು. ಖಾನಾಪುರ ತಾಲ್ಲೂಕಿನ ನಾಗರಗಾಳಿ-ತಾವರಗಟ್ಟಿ ರೈಲು ನಿಲ್ದಾಣಗಳ ಮಧ್ಯೆ ಇರುವ ಅರಣ್ಯ ಪ್ರದೇಶದಲ್ಲಿನ ಹಳಿ ಮೇಲೆ ಬೃಹತ್ ಮರ ಬಿದ್ದು, ಅಳ್ನಾವರ–ಲೋಂಡಾ ಮಾರ್ಗದಲ್ಲಿ ಸಂಚರಿಸುವ ಕೊಲ್ಹಾಪುರ–ತಿರುಪತಿ ಹರಿಪ್ರಿಯಾ ಎಕ್ಸ್ಪ್ರೆಸ್ ರೈಲು ಸೇರಿ ಹಲವು ರೈಲುಗಳ ಸಂಚಾರಕ್ಕೆ ವ್ಯತ್ಯಯ ಉಂಟಾಯಿತು. ನಾಗರಗಾಳಿ ಮತ್ತು ತಾವರಗಟ್ಟಿ ನಿಲ್ದಾಣಗಳ ಸಿಬ್ಬಂದಿ ಘಟನಾ ಸ್ಥಳಕ್ಕೆ ಬಂದು ಪರಿಶೀಲಿಸಿದರು.

‘ಲೋಂಡಾದಲ್ಲಿ ಸಾಂಗ್ಲಿ–ಬೆಂಗಳೂರು ಮಾರ್ಗದಲ್ಲಿ ಸಂಚರಿಸುವ ರಾಣಿ ಚನ್ನಮ್ಮ ಎಕ್ಸ್ಪ್ರೆಸ್ ರೈಲು, ಖಾನಾಪುರ ನಿಲ್ದಾಣದಲ್ಲಿ ಬೆಳಗಾವಿ–ಮೈಸೂರು ರೈಲು ಸಂಚಾರ ತಡೆಹಿಡಿಯಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಧಾರವಾಡ ಜಿಲ್ಲೆಯ ಧಾರವಾಡ–ಹುಬ್ಬಳ್ಳಿ, ಅಳ್ನಾವರ, ಕುಂದಗೋಳ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಮಳೆ ಸುರಿಯಿತು. ಅಳ್ನಾವರದಲ್ಲಿ ಗಾಳಿ ರಭಸಕ್ಕೆ ಕೆಲವೆಡೆ ಮನೆಗಳ ಚಾವಣಿಯ ಶೀಟುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದವು. ಮನೆಗಳಿಗೆ ನೀರು ನುಗ್ಗಿತು. ಅಳ್ನಾವರದ ನಾಡಕಚೇರಿ ಆವರಣದಲ್ಲಿನ ಮರ ರಸ್ತೆಗೆ ಉರುಳಿ ಬಿದ್ದ ಪರಿಣಾಮ ವಾಹನಗಳ ಸಂಚಾರಕ್ಕೆ ತೊಂದರೆಯಾಯಿತು.

ಉತ್ತರ ಕನ್ನಡ ಜಿಲ್ಲೆಯಾದ್ಯಂತ ಗುಡುಗು, ಸಿಡಿಲು ಸಹಿತ ಗಾಳಿ, ಮಳೆ ಸುರಿಯಿತು. ಜೊಯಿಡಾ ಮೂಲಕ ಹಾದುಹೋಗುವ ಸದಾಶಿವಗಡ–ಔರಾದ್ ರಾಜ್ಯ ಹೆದ್ದಾರಿ, ಶಿರಸಿ–ಹಾವೇರಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮಳೆನೀರು ಹರಿದು ರಸ್ತೆ ಕೆಸರುಮಯವಾಯಿತು.

ಧಾರಾಕಾರ ಮಳೆ (ಮಂಗಳೂರು ವರದಿ): ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಮಂಗಳವಾರ ರಾತ್ರಿ ಗುಡುಗು ಮಿಂಚು ಸಹಿತ ಧಾರಾಕಾರ ಸುರಿಯಿತು.

ಸಿಡಿಲು ಬಡಿದು ರೈತ ಸಾವು (ಹನುಮಸಾಗರ): ಕುಷ್ಟಗಿ ತಾಲ್ಲೂಕಿನ ಕಬ್ಬರಗಿ ಗ್ರಾಮದ ರೈತ ಶರಣಪ್ಪ ಮಾಸಪ್ಪ ಹೂಲಗೇರಿ (51) ಸಿಡಿಲು ಬಡಿದು ಮಂಗಳವಾರ ಮೃತಪಟ್ಟಿದ್ದಾರೆ. ಸಂಜೆ ತಮ್ಮ ಹೊಲದಲ್ಲಿ ಕೃಷಿ ಕೆಲಸ ನಿರ್ವಹಿಸುತ್ತಿದ್ದಾಗ ಈ ಘಟನೆ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.