ಸೋಮವಾರ, ನವೆಂಬರ್ 18, 2019
28 °C

ಹನೂರು, ನುಗಡೋಣಿಗೆ ‘ಕಟ್ಟೀಮನಿ ಪ್ರಶಸ್ತಿ’

Published:
Updated:
Prajavani

ಬೆಳಗಾವಿ: ಇಲ್ಲಿನ ಬಸವರಾಜ ಕಟ್ಟೀಮನಿ ಪ್ರತಿಷ್ಠಾನ ನೀಡುವ ಪ್ರಶಸ್ತಿಗೆ ಜಾನಪದ ತಜ್ಞ ಡಾ.ಕೃಷ್ಣಮೂರ್ತಿ ಹನೂರು, ಕಥೆಗಾರ ಡಾ.ಅಮರೇಶ ನುಗಡೋಣಿ ಭಾಜನರಾಗಿದ್ದಾರೆ.

ಪ್ರಶಸ್ತಿಯು ತಲಾ ₹ 50 ಸಾವಿರ ನಗದು ಒಳಗೊಂಡಿದೆ. ಕಟ್ಟೀಮನಿ ಅವರ ಜನ್ಮಶತಮಾನೋತ್ಸವ ದಿನವಾದ ಅಕ್ಟೋಬರ್ 5ರಂದು ಸಂಜೆ 4.30ಕ್ಕೆ ನಗರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದು. ವಿಮರ್ಶಕ ಪ್ರೊ.ಓ.ಎಲ್.ನಾಗಭೂಷಣಸ್ವಾಮಿ ಪ್ರಶಸ್ತಿ ಪ್ರದಾನ ಮಾಡುವರು.ಲೇಖಕ ಡಾ.ರಹಮತ್ ತರೀಕೆರೆ ಅಭಿನಂದನಾ ಭಾಷಣ ಮಾಡುವರು ಎಂದು ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಮಲ್ಲಿಕಾರ್ಜುನ ಹಿರೇಮಠ ತಿಳಿಸಿದ್ದಾರೆ. 

ಪ್ರತಿಕ್ರಿಯಿಸಿ (+)