ಕೌಜಲಗಿ: ಪಟ್ಟಣದಲ್ಲಿ ಪ್ರತಿ ಐದು ವರ್ಷಕ್ಕೊಮ್ಮೆ ಜರುಗುವ ಕೌಜಲಗಿ ಗ್ರಾಮದೇವತೆಯರ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರದಿಂದ ಶುಕ್ರವಾರದ ವರೆಗೆ ರಥೋತ್ಸವ ಜರುಗಿತು.

ಮಂಗಳವಾರ ದೇವಸ್ಥಾನದಿಂದ ದ್ಯಾಮವ್ವದೇವಿಯ ರಥವು ಲಕ್ಷ್ಮಿ ದೇವಸ್ಥಾನದವರೆಗೆ ನಡೆದು, ಲಕ್ಷ್ಮಿ ಮತ್ತು ದ್ಯಾಮವ್ವದೇವಿ ಎರಡು ತೇರುಗಳು ಸಕಲ ವಾದ್ಯ ಮೇಳಗಳೊಂದಿಗೆ, ಯುವಕರ ಸಂಭ್ರಮದ ಕುಣಿತದೊಂದಿಗೆ, ಪಟ್ಟಣದ ಬಲಭೀಮ ದೇವಸ್ಥಾನದವರೆಗೆ ಸಾಗಿ ವಾಸ್ತವ್ಯವಾಯಿತು. ಮರುದಿನ ಬುಧವಾರ ಬಲಭೀಮ ದೇವಸ್ಥಾನದಿಂದ ಉದ್ದಮ್ಮಾದೇವಿ ದೇವಸ್ಥಾನದ ವರೆಗೆ ತಲುಪಿ ವಾಸ್ತವ್ಯ ಮಾಡಲಾಯಿತು.

ಗುರುವಾರ ಗ್ರಾಮದೇವತೆಯರ ಎರಡು ತೇರುಗಳು ಉದ್ದಮ್ಮದೇವಿ ದೇವಸ್ಥಾನದಿಂದ ಕಟ್ಟೆ ಬಸವೇಶ್ವರ ದೇವಸ್ಥಾನ, ಕುಂಬಾರ ಓಣಿಯ ಮೂಲಕ ಪೇಟೆ ಬಸವೇಶ್ವರ ದೇವಸ್ಥಾನಕ್ಕೆ ತಲುಪಿ ವಾಸ್ತವ್ಯ ಮಾಡಲಾಯಿತು. ಶುಕ್ರವಾರ ದೇವಿಯರ ಎರಡೂ ತೇರುಗಳು ಬಸವೇಶ್ವರ ದೇವಸ್ಥಾನದಿಂದ ಲಕ್ಷ್ಮಿ ದೇವಸ್ಥಾನ ತಲುಪಿತು.

ಜನಪದ ಕಲಾ ಮೇಳಗಳು, ಗೊಂಬೆ ಕುಣಿತಗಳು, ಯುವಕರ ಸಂಭ್ರಮದ ಕುಣಿತಗಳು, ಖಾನಟ್ಟಿಯ ಪೋತರಾಜರ ಭಕ್ತಿ ಸೇವೆ, ಮುಗಳಖೋಡದ ಮತ್ತು ಮೆಳವಂಕಿಯ ವೀರಗುಂಡ ಸೇವೆ ಹಾಗೂ ಕರಡಿಮಜಲು, ಹಲಗೆ, ಡೊಳ್ಳು ಮುಂತಾದ ಜನಪದ ವಾದ್ಯಗಳ ಕಲಾವಿದರು ಸಂಭ್ರಮದಿಂದ ಎರಡು ತೇರುಗಳ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಸಾಮಾಜಿಕ ನಾಟಕಗಳು, ರಸಮಂಜರಿ ಕಾರ್ಯಕ್ರಮಗಳು ಜರುಗಿದವು. ದಾನಿಗಳಿಂದ ಅನ್ನಪ್ರಸಾದ ನಡೆಯಿತು. ಶನಿವಾರ ಕಳಸವನ್ನು ಇಳಿಸಲಾಯಿತು. ಜಾತ್ರೋತ್ಸವದ ದೇಣಿಗೇದಾರರನ್ನು ಜಾತ್ರಾ ಕಮಿಟಿಯಿಂದ ಸತ್ಕರಿಸಲಾಯಿತು.

ರಾತ್ರಿ 12 ಗಂಟೆಗೆ ದ್ಯಾಮವ್ವ ದೇವಿಯ ಸೀಮೋಲಂಘನ ಕಾರ್ಯಕ್ರಮ ನಡೆಯಿತು. ಮಾರ್ಚ್ 17ರಂದು ದ್ಯಾಮವ್ವದೇವಿ ಹೋಮ ಹವಣ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಗದ್ದುಗೆಗೊಳ್ಳಲಿದ್ದಾಳೆ. ಅನ್ನಪ್ರಸಾದ ಮತ್ತು ರಾತ್ರಿ ‘ಶ್ರೀಕೃಷ್ಣ ಪಾರಿಜಾತ’ ಬಯಲಾಟ ಪ್ರದರ್ಶನ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.