ಪ್ರಸನ್ನ ಕುಲಕರ್ಣಿ

ಖಾನಾಪುರ: ದಟ್ಟ ಕಾನನದ ನಡುವೆ ಕರ್ನಾಟಕ- ಗೋವಾ ಗಡಿಯ ಭೀಮಗಡ ವನ್ಯಧಾಮ ವ್ಯಾಪ್ತಿಯಲ್ಲಿರುವ ಕೃಷ್ಣಾಪುರ ಖಾನಾಪುರ ತಾಲ್ಲೂಕಿನ ಕೊನೆಯ ಗ್ರಾಮ. ಮಹದಾಯಿ ನದಿ ತೀರದಲ್ಲಿರುವ ಈ ಪುಟ್ಟ ಗ್ರಾಮದಲ್ಲಿ ಪಿಸ್ತೇಶ್ವರ ಎಂಬ ದೇವಾಲಯ ಗಮನಾರ್ಹವಾಗಿದೆ. ಇದು ಮೀನುಗಳಿಗಾಗಿ ಇರುವ ದೇವಾಲಯ ಎಂಬುದು ವಿಶೇಷ.

ಮಹದಾಯಿ ನದಿಯಲ್ಲಿ ಸ್ವಚ್ಛಂತವಾಗಿ ವಾಸವಾಗಿರುವ ಮೀನುಗಳ ಸಂರಕ್ಷಣೆ, ಪಾಲನೆ– ಪೋಷಣೆಯ ಉದ್ದೇಶ ಹೊತ್ತು ತಲೆ ಎತ್ತಿ ನಿಂತಿರುವ ಈ ದೇವಾಲಯದಲ್ಲಿ ನಿತ್ಯ ಮೀನುಗಳ ದೇವತೆಗೆ ಪೂಜೆ, ಪುನಸ್ಕಾರ ನಡೆಯುತ್ತದೆ.

ಪಿಸ್ತೇಶ್ವರ ದೇವಾಲಯ ಮಹದಾಯಿ ನದಿತೀರದ ಕಲ್ಲುಬಂಡೆಗಳ ಮೇಲೆ ಎತ್ತರದ ಪ್ರದೇಶದಲ್ಲಿದೆ. ಕೃಷ್ಣಾಪುರ ಗ್ರಾಮ ಗೋವಾ ಗಡಿಯಲ್ಲಿರುವ ಕಾರಣ ಈ ಊರಿನ ರೀತಿ ರಿವಾಜುಗಳು ಗೋವಾ ರಾಜ್ಯವನ್ನು ಹೋಲುತ್ತವೆ. ಗೋವಾದ ಕೊಂಕಣಿ ಭಾಷೆಯಲ್ಲಿ ಪಿಸ್ತು ಎಂದರೆ ಮೀನು. ಪಿಸ್ತೇಶ್ವರ ಎಂದರೆ ಮೀನುಗಳನ್ನು ರಕ್ಷಿಸುವ ದೇವ.

ಪಿಸ್ತೇಶ್ವರ ದೇವಾಲಯದ ಹಿಂಭಾಗದಲ್ಲಿ ನೈಸರ್ಗಿಕವಾಗಿ ನಿರ್ಮಾಣವಾದ ದೊಡ್ಡ ಹೊಂಡಗಳಿವೆ. ಈ ಹೊಂಡಗಳಲ್ಲಿ ವರ್ಷದ ಹನ್ನೆರಡೂ ತಿಂಗಳ ಕಾಲ ಮಹದಾಯಿ ನದಿಯ ನೀರಿನ ಸಂಗ್ರಹವಿರುತ್ತದೆ. ದಟ್ಟ ಅರಣ್ಯದಲ್ಲಿ ಹುಟ್ಟಿ ಹರಿದು ಕೃಷ್ಣಾಪುರ ತಲುಪುವ ಮಹದಾಯಿಯ ನೀರು ತಣ್ಣಗಿದ್ದು ಕುಡಿಯುವ ಸಿಹಿಯಾಗಿದೆ. ಈ ಸಿಹಿ ನೀರಿನಲ್ಲಿ ಹೊಂಡಗಳಲ್ಲಿ ಅಸಂಖ್ಯಾತ ಮೀನುಗಳು ಜೀವಿಸಿವೆ. ಹೊಂಡದಲ್ಲಿ ಬೆರಳುದ್ದ ಗಾತ್ರದಿಂದ ಮಾರುದ್ದ ಗಾತ್ರದವರೆಗೆ ವಿವಿಧ ಪ್ರಜಾತಿಗೆ ಸೇರಿದ ಮತ್ತು ವಿವಿಧ ಆಕಾರ ಮತ್ತು ಬಣ್ಣದ ಮೀನುಗಳಿವೆ. ಪಿಸ್ತೇಶ್ವರನ ದಯೆಯಿಂದ ಯಾವುದೇ ಜೀವಭಯವಿಲ್ಲದೇ ಸ್ವಚ್ಛಂದವಾಗಿ ವಾಸವಾಗಿವೆ ಎಂಬುದು ಇದನ್ನು ನಿರ್ಮಿಸಿದವರ ನಂಬಿಕೆ. ಮಹದಾಯಿ ನದಿ ಕಲ್ಮಶವನ್ನು ಮೀನುಗಳೇ ಸ್ವಚ್ಛಗೊಳಿಸಿ ತಮ್ಮ ಜೀವಜಲ ರಕ್ಷಿಸಿವೆ ಎಂಬುದು ಕೃಷ್ಣಾಪುರದ ಜನರ ನಂಬಿಕೆ. ಈ ದೇವರಿಗೆ ಚುರುಮುರಿಯೇ ನೈವೈದ್ಯ. ಅದನ್ನೇ ಮೀನುಗಳಿಗೂ ಹಾಕಲಾಗುತ್ತದೆ. ಈ ಚುರುಮುರಿ ಕಾಳಿಗಳನ್ನು ಎತ್ತಿಕೊಂಡು ಹೋಗಲು ಮೀನುಗಳು ನೆಗೆನೆಗೆದು ಬರುವ ದೃಶ್ಯವೇ ವರ್ಣನಾತೀತ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260324-21-2026717277

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.