ಖಾನಾಪುರ: ತಾಲ್ಲೂಕಿನ ಜಾಂಬೋಟಿ ಹೋಬಳಿಯ ಬೈಲೂರು ಗ್ರಾಮದಲ್ಲಿ ಬುಧವಾರ ಬೈಲೂರು, ಬಾಕನೂರು, ಮೊರಬ ಮತ್ತು ದೇವಾಚಿಹಟ್ಟಿ ಗ್ರಾಮಗಳ ವ್ಯಾಪ್ತಿಯ 9 ದಿನಗಳ ಗ್ರಾಮದೇವಿಯ ಜಾತ್ರಾ ಮಹೋತ್ಸವ ಶ್ರದ್ಧಾಭಕ್ತಿಯಿಂದ ಆರಂಭಗೊಂಡಿತು.

ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ವೇದ ಮಂತ್ರ ಘೋಷ ಮತ್ತು ಮಂಗಳವಾದ್ಯಗಳೊಂದಿಗೆ ದೇವಿಯ ಅಕ್ಷತಾರೋಪಣ ಜರುಗಿತು. ಬಳಿಕ ದೇವಾಲಯದ ಆವರಣದಲ್ಲಿ ಜಾತ್ರೆಯ ಧಾರ್ಮಿಕ ವಿಧಿ ವಿಧಾನಗಳು ಸಂಪನ್ನಗೊಂಡವು. ನಂತರ ಇಡೀ ದಿನ ನಾಲ್ಕೂ ಗ್ರಾಮಗಳ ಪ್ರಮುಖ ಬೀದಿಗಳಲ್ಲಿ ದೇವಿಯ ಹೊನ್ನಾಟ ನಡೆಯಿತು.

ಪೂರ್ವನಿರ್ಧರಿತ ಮಾರ್ಗದ ಮೂಲಕ ಸಾಗಿದ ದೇವಿಯ ಮೆರವಣಿಗೆ ಸಂಜೆ ಗದ್ದಿಗೆ ತಲುಪಿದ ಬಳಿಕ ನಾಲ್ಕೂ ಊರುಗಳ ಹಕ್ಕುದಾರರ ಸಮ್ಮುಖದಲ್ಲಿ ದೇವಿಯನ್ನು ಪ್ರತಿಷ್ಠಾಪಿಸಲಾಯಿತು. ಭಕ್ತರು ಭಕ್ತಿ ಭಂಡಾರದಲ್ಲಿ ಮಿಂದೆದ್ದರು. ದೇವಿಯ ಮೆರವಣಿಯ ಸಂದರ್ಭದಲ್ಲಿ ದೇವಾಲಯದ ಅರ್ಚಕರು, ಊರಿನ ಹಕ್ಕುದಾರರು, ವತನದಾರರು ಮತ್ತು ಹಿರಿಯರು ಭಾಗವಹಿಸಿದ್ದರು. ಗದ್ದಿಗೆಯಲ್ಲಿ ವಿರಾಜಮಾನಳಾದ ದೇವಿಗೆ ಊರ ಪ್ರಮುಖರು ಉಡಿ ತುಂಬಿದರು. ಶಾಸಕ ವಿಠ್ಠಲ ಹಲಗೇಕರ, ಮಾಜಿ ಶಾಸಕ ಅರವಿಂದ ಪಾಟೀಲ, ಬೈಲೂರು ಗ್ರಾಮದ ಇನಾಮದಾರ ಕರಣಸಿಂಗ್ ದೇಸಾಯಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-21-358349123

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.