ಖಾನಾಪುರ: ತಾಲ್ಲೂಕಿನ ಬಿಜಗರ್ಣಿ, ಅನಗಡಿ, ಹಲಸಾಲ, ಪಡಲವಾಡಿ, ಕರಂಜಾಳ ಹಾಗೂ ಅಕ್ಕಪಕ್ಕದ ಗ್ರಾಮಗಳಿಗೆ ಖಾನಾಪುರ ಪಟ್ಟಣ, ನಂದಗಡ-ಹಲಸಿಯಿಂದ ಬಸ್ ವ್ಯವಸ್ಥೆ ಇಲ್ಲದ್ದರಿಂದ ಈ ಭಾಗದ ಜನರಿಗೆ ಮತ್ತು ಶಾಲಾ–ಕಾಲೇಜುಗಳ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದು, ಸಮರ್ಪಕ ಬಸ್ ಸೌಲಭ್ಯ ಒದಗಿಸಬೇಕೆಂದು ಆಗ್ರಹಿಸಿ ಬಿಜಗರ್ಣಿ ಹಾಗೂ ಸುತ್ತಲಿನ ಗ್ರಾಮಸ್ಥರು ಮಂಗಳವಾರ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಖಾನಾಪುರ ಘಟಕದ ವ್ಯವಸ್ಥಾಪಕ ಸಂತೋಷ ಹುರಳಿಕೊಪ್ಪ ಅವರಿಗೆ ಮನವಿ ಸಲ್ಲಿಸಿದರು.

ಈಗಿನ ವೇಳಾಪಟ್ಟಿ ಪ್ರಕಾರ ಬಿಜಗರ್ಣಿ, ಅನಗಡಿ, ಹಲಸಾಲ, ಪಡಲವಾಡಿ, ಕರಂಜಾಳಗಳಿಗೆ ಬೆಳಿಗ್ಗೆ 11ಗಂಟೆಗೆ ಬಸ್ ಬರುತ್ತದೆ. ಇದರಿಂದ ಖಾನಾಪುರ, ನಂದಗಡ ಮತ್ತು ಹಲಸಿಗೆ ಹೋಗುವ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಈ ಬಸ್ ಸಂಚಾರವನ್ನು ಬೆಳಿಗ್ಗೆ 9.30ಕ್ಕೆ ಬದಲಿಸಬೇಕು ಮತ್ತು ಉಳಿದ ಸಮಯದಲ್ಲಿ ಈ ಭಾಗದಲ್ಲಿ ಎಲ್ಲ ಬಸ್ ಗಳು ಸರಿಯಾದ ಸಮಯಪಾಲನೆ ಮಾಡಬೇಕು ಎಂದು ತಿಳಿಸಿದ್ದಾರೆ.

ಶ್ರೀಕಾಂತ ಮಾದಾರ, ತಾನಾಜಿ ತಾಂಬೂಳಕರ, ಮಾರುತಿ ಕಾಂಬಳೆ, ಅನೀಲ ಚೌರಿ, ದೀಪಕ ಚೌರಿ, ರಾಮಚಂದ್ರ ದೇಸಾಯಿ, ನಾಮದೇವ ಕಾಂಬಳೆ, ಸುಧೀರ ಗುಂಜಿಕರ, ವಿಕಾಸ ದೇಸಾಯಿ, ಹಿಂದೂರಾವ್ ದೇಸಾಯಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-21-1677272450

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.