ಪ್ರಸನ್ನ ಕುಲಕರ್ಣಿ

ಖಾನಾಪುರ: ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ಹಳ್ಳ-ಕೊಳ್ಳಗಳು, ತೊರೆಗಳು, ಕೆರೆ- ಕಟ್ಟೆಗಳು ಮತ್ತು ನದಿಗಳು ಸೇರಿದಂತೆ ಜಲಮೂಲಗಳಲ್ಲಿ ನೀರಿನ ಹರಿವು ಕ್ಷೀಣಿಸುತ್ತವೆ. ಎಲ್ಲೆಡೆ ಜಲದಾಹ ಉಂಟಾಗುತ್ತದೆ. ಆದರೆ ಕಳೆದ ಮಳೆಗಾಲದಲ್ಲಿ ಸುರಿದ ಮಳೆಯಿಂದಾಗಿ ಖಾನಾಪುರ ತಾಲ್ಲೂಕಿನ ಅರಣ್ಯ ಪ್ರದೇಶದಲ್ಲಿ ಹುಟ್ಟಿ ಹರಿಯುವ ಬಹುತೇಕ ಎಲ್ಲ ಜಲಮೂಲಗಳಲ್ಲಿ ಈ ವರ್ಷ ಅವಶ್ಯಕ ಪ್ರಮಾಣದಲ್ಲಿ ನೀರಿನ ಸಂಗ್ರಹವಿದೆ!

ಈ ಜಲಮೂಲಗಳು ಈ ವರ್ಷದ ಬೇಸಿಗೆ ಮುಗಿದು ಮಳೆ ಆರಂಭವಾಗುವವರೆಗೂ ವನ್ಯಜೀವಿಗಳ ದಾಹ ನೀಗಿಸಲು ಅವಶ್ಯವಿರುವ ನೀರಿನ ಶೇಖರಣೆ ಹೊಂದಿವೆ ಎಂಬುದು ವಿಶೇಷ.

ತಾಲ್ಲೂಕಿನ ದೇಗಾಂವ ಅರಣ್ಯದಲ್ಲಿ ಜನ್ಮ ತಳೆಯುವ ಮಹದಾಯಿ ನದಿ ಜಾಂಬೋಟಿ ಅರಣ್ಯದ ಚಾಪೋಲಿ ಗ್ರಾಮದ ಬಳಿಯ ಜಲಪಾತದಲ್ಲಿ ಧುಮ್ಮಿಕ್ಕಿ ಕೃಷ್ಣಾಪುರ ದಾಟಿ ಗೋವಾ ರಾಜ್ಯವನ್ನು ಪ್ರವೇಶಿಸುತ್ತದೆ. ಕರ್ನಾಟಕದ ಮಹದಾಯಿ ನದಿಯನ್ನು ಗೋವಾ ರಾಜ್ಯ ದಾಟಿದಾಗ ಅಲ್ಲಿಯ ಜನರು ಮಾಂಡವಿ ನದಿ ಎಂದು ಕರೆಯುತ್ತಾರೆ. ತನ್ನ ಜನ್ಮಸ್ಥಾನದಿಂದ ಸಮುದ್ರ ಸೇರುವವರೆಗೆ ಒಟ್ಟು 88 ಕಿ.ಮೀ ದೂರವನ್ನು ಕ್ರಮಿಸುವ ಮಹದಾಯಿ ರಾಜ್ಯದ ಅರಣ್ಯ ಪ್ರದೇಶದ 39 ಕಿ.ಮೀ ವ್ಯಾಪ್ತಿಯ ಸುತ್ತಲಿನ ದಟ್ಟ ಅರಣ್ಯದಲ್ಲಿ ವಾಸಿಸುವ ಹುಲಿ, ಚಿರತೆ, ಕರಿಚಿರತೆ, ಕರಡಿ, ಕಾಡೆಮ್ಮೆ, ಕಾಡುಕೋಣ, ನರಿ, ಕಾಡುಹಂದಿ, ಮುಳ್ಳು ಹಂದಿ ಮತ್ತಿತರ ಅಪರೂಪದ ಕಾನನವಾಸಿಗಳ ದಾಹವನ್ನು ನೀಗಿಸುತ್ತಿದೆ.

ಮಹದಾಯಿ ನದಿಗೆ ಬಂಡೂರಿ, ಕಳಸಾ, ಕೋಟ್ನಿ, ಬೈಲ್, ಸೂರ್ಲಾ, ಕೊಟ್ರಾಚಿ ಹಳ್ಳಗಳು ಅರಣ್ಯದಲ್ಲಿ ಮಹದಾಯಿಯನ್ನು ಸೇರಿ ನದಿಯ ಶ್ರೀಮಂತಿಕೆಯನ್ನು ಹೆಚ್ಚಿಸಿವೆ. ಮಲಪ್ರಭಾ ನದಿ ತಾಲ್ಲೂಕಿನ ಕಣಕುಂಬಿ ಅರಣ್ಯದಲ್ಲಿ ಹುಟ್ಟಿ ಜಾಂಬೋಟಿ, ಖಾನಾಪುರ, ಪಾರಿಶ್ವಾಡ, ಎಂ.ಕೆ ಹುಬ್ಬಳ್ಳಿ ಮೂಲಕ ಕ್ರಮಿಸಿ ಸವದತ್ತಿ ಬಳಿ ನವಿಲುತೀರ್ಥ ಅಣೆಕಟ್ಟೆ ಸೇರುತ್ತದೆ. ಕಣಕುಂಬಿಯಿಂದ ರೇಣುಕಾಸಾಗರ ಆಣೆಕಟ್ಟೆವರೆಗಿನ 150 ಕಿಮೀ ಕ್ರಮಿಸುವ ಈ ನದಿಯೊಂದಿಗೆ ಮಂಗೇತ್ರಿ, ಕುಂಬಾರ, ನಿಟ್ಟೂರ, ಅಲಾತ್ರಿ, ತಟ್ಟೀ ಮತ್ತಿತರ ಹಳ್ಳಗಳು ಸಂಗಮಿಸುತ್ತವೆ.

ಕಣಕುಂಬಿ ಮತ್ತು ಜಾಂಬೋಟಿ ಅರಣ್ಯದಲ್ಲಿ ಈ ನದಿ ಮರಗಿಡಗಳ ಬೇರುಗಳ ಮೇಲೆ, ಬಂಡೆಗಳ ಮೇಲೆ ಹಾಯುತ್ತದೆ. ದಟ್ಟ ಅರಣ್ಯದ ನಡುವೆ ಬಹುಪಾಲು ದೂರವನ್ನು ಕ್ರಮಿಸುವ ಎರಡೂ ನದಿಗಳು ಮತ್ತು ಹಳ್ಳಕೊಳ್ಳಗಳು ಔಷಧೀಯ ಗುಣಗಳನ್ನು ಹೊಂದಿವೆ. ಈ ನದಿಗಳು ಹರಿಯುವ ಮಾರ್ಗಮಧ್ಯದಲ್ಲಿ ದಟ್ಟ ಅರಣ್ಯ ಇರುವ ಕಾರಣ ಸೂರ್ಯನ ಕಿರಣಗಳು ಕಾಣಸಿಗುವುದು ಅಪರೂಪವಾಗಿದ್ದು, ಈ ಕಾರಣಕ್ಕಾಗಿಯೇ ಈ ನದಿಗಳ ನೀರು ತಂಪಾಗಿದ್ದು, ನದಿಯ ಪರಿಸರ ಸ್ವಚ್ಛತೆಯಿಂದ ಕೂಡಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260405-21-1778104553

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.