ಖಾನಾಪುರ: 16 ವರ್ಷಗಳ ನಂತರ ಸಡಗರದಿಂದ ನಡೆಯುತ್ತಿರುವ ಗ್ರಾಮದೇವಿ ಜಾತ್ರೆಗೆ ತಾಲ್ಲೂಕಿನ ಬೈಲೂರು, ಮೊರಬ, ದೇವಾಚಿಹಟ್ಟಿ ಹಾಗೂ ಬೆಳಗಾವಿ ತಾಲ್ಲೂಕಿನ ಬಾಕನೂರು ಸಾಕ್ಷಿಯಾಗುತ್ತಿವೆ.

ವಿದ್ಯುದ್ದೀಪಗಳ ಅಲಂಕಾರದಿಂದ ಝಗಮಗಿಸುತ್ತಿರುವ ಈ ಊರುಗಳಲ್ಲಿ ಹಬ್ಬದ ಸಂಭ್ರಮ ಮನೆಮಾಡಿದೆ. ಎತ್ತ ನೋಡಿದರೂ ಭಂಡಾರವೋ ಭಂಡಾರ.

ನಾಲ್ಕು ಗ್ರಾಮಗಳ ಆರಾಧ್ಯದೈವ ಬೈಲೂರಿನ ಗ್ರಾಮದೇವಿ. ಈ ಜಾತ್ರೆಯಲ್ಲಿ ಪಾಲ್ಗೊಳ್ಳಲು ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಿಂದ ಅಸಂಖ್ಯಾತ ಭಕ್ತರು ಆಗಮಿಸುತ್ತಿದ್ದಾರೆ.

ಬೈಲೂರಿನ ಗ್ರಾಮದೇವಿ ದೇವಸ್ಥಾನದ ಮುಂಭಾಗದಲ್ಲಿ ದೇವಿ ವಿವಾಹ ಮಹೋತ್ಸವ ಮತ್ತು ಜಾತ್ರೆಯ ಸಾಂಪ್ರದಾಯಿಕ ಮತ್ತು ಧಾರ್ಮಿಕ ವಿಧಿ–ವಿಧಾನ ಸಂಪನ್ನಗೊಂಡ ನಂತರ, ಇಡೀದಿನ ನಾಲ್ಕೂ ಗ್ರಾಮಗಳ ಪ್ರಮುಖ ಬೀದಿಗಳಲ್ಲಿ ದೇವಿ ಹೊನ್ನಾಟ ನಡೆದಿದೆ. ಇದರ ಪ್ರಯುಕ್ತ ನಾಲ್ಕೂ ಊರುಗಳು ಭಂಡಾರದ ಓಕುಳಿಯಲ್ಲಿ ಮಿಂದೆದ್ದಿವೆ.

ಈ ಊರುಗಳ ಬೀದಿಗಳು, ದೇವಾಲಯಗಳು, ಮನೆಗಳು ಮತ್ತು ಸಾರ್ವಜನಿಕ ಕಟ್ಟಡಗಳು ಭಂಡಾರಮಯವಾಗಿವೆ. ಹೊನ್ನಾಟದ ಬಳಿಕ ದೇವಿಯನ್ನು ಬೈಲೂರಿನ ಹೊರವಲಯದಲ್ಲಿ ನಿರ್ಮಿಸಿದ ಭವ್ಯ ಮಂಟಪದಲ್ಲಿ ಪ್ರತಿಷ್ಠಾಪಿಸಲಾಗಿದೆ. ಮೇ 14ರವರೆಗೆ ದೇವಿ ಇದೇ ಗದ್ದುಗೆಯಲ್ಲಿ ವಿರಾಜಮಾನಳಾಗಿ ಭಕ್ತರಿಗೆ ದರ್ಶನ ನೀಡಲಿದ್ದಾಳೆ.

ಜಾತ್ರಾ ಸಮಿತಿ ನಿತ್ಯ ಸಂಜೆ ಆಯೋಜಿಸುತ್ತಿರುವ ಕಾರ್ಯಕ್ರಮಗಳು, ಆಟಗಳು ಜಾತ್ರೆ ನೋಡಲು ಬಂದವರಿಗೆ ಮುದ ನೀಡುತ್ತಿವೆ. ಮೇ 14ರಂದು ಸೂರ್ಯಾಸ್ತದ ಬಳಿಕ ದೇವಿಯನ್ನು ಸೀಮೆಗೆ ಕಳುಹಿಸಿದ ನಂತರ, ಜಾತ್ರೆಗೆ ವಿದ್ಯುಕ್ತವಾಗಿ ತೆರೆ ಬೀಳಲಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260510-21-811043541

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.