ಖಾನಾಪುರ: ಪಟ್ಟಣದ ಹೊರವಲಯದ ಪೊಲೀಸ್ ತರಬೇತಿ ಶಾಲೆಯ ಬಳಿಯ ಕವಳೇಮಠಕ್ಕೆ ಸೇರಿದ ಆಸ್ತಿಯ ಪೈಕಿ ಸರ್ವೇ ನಂ.40 ಮತ್ತು 45 ಕೃಷಿ ಜಮೀನನ್ನು ಕಂದಿ ರವಿಕುಮಾರ ಎಂಬ ವ್ಯಕ್ತಿ ಅತಿಕ್ರಮಣ ಮಾಡಿದ್ದು, ಮಠದ ಆಸ್ತಿ ಅತಿಕ್ರಮಣದ ಬಗ್ಗೆ ದೂರು ನೀಡಿದರೂ ಖಾನಾಪುರ ಪೊಲೀಸರು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅತಿಕ್ರಮಣ ಮಾಡಿದವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಮಠದ ಪೀಠಾಧಿಪತಿ ಶಿವಾನಂದ ಸರಸ್ವತಿ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಟ್ಟಣದ ಕವಳೇಮಠದಲ್ಲಿ ಮಂಗಳವಾರ ಆಯೋಜಿಸಿದ್ದ ಮಠದ ಭಕ್ತರ ಸಭೆ ಉದ್ದೇಶಿಸಿ ಮಾತನಾಡಿದ ಸ್ವಾಮೀಜಿ, ‘ಪಟ್ಟಣದ ವಿವಿಧೆಡೆ ಮಠದ ಹೆಸರಿನಲ್ಲಿ ಮತ್ತು ಮಠದ ಅಧೀನದಲ್ಲಿ ನೂರಾರು ಎಕರೆ ಆಸ್ತಿಯಿದ್ದು, ಕಳೆದ ನೂರಾರು ವರ್ಷಗಳಿಂದ ಈ ಆಸ್ತಿಯ ನಿರ್ವಹಣೆಯನ್ನು ಮಠದ ವತಿಯಿಂದ ಕೈಗೊಂಡು ಬರಲಾಗಿದೆ. ಅದರಲ್ಲಿ ಕೆಲ ಆಸ್ತಿಯನ್ನು ಮಠದಿಂದ ಪಯೋನಿಯರ್ ಕ್ಲೇ ಮತ್ತು ಇಂಡಸ್ಟ್ರೀಸ್ ಸಂಸ್ಥೆಗೆ 40 ವರ್ಷಗಳ ಗುತ್ತಿಗೆ ನೀಡಲಾಗಿತ್ತು. 2021ರಲ್ಲಿ ಗುತ್ತಿಗೆಗೆ ನೀಡಿದ್ದ ಆಸ್ತಿಯನ್ನು ಸಂಸ್ಥೆಯಿಂದ ಮರಳಿ ಮಠಕ್ಕೆ ಹಸ್ತಾಂತರಿಸಿಕೊಳ್ಳಲಾಗಿದೆ’ ಎಂದರು.

ಹಸ್ತಾಂತರ ಪಡೆದ ಜಮೀನಿನಲ್ಲಿ ಮಠದ ವತಿಯಿಂದ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಆದರೆ ಇತ್ತೀಚಿನ ಕೆಲ ದಿನಗಳ ಹಿಂದೆ ಕಂದಿ ರವಿಕುಮಾರ ಎಂಬ ವ್ಯಕ್ತಿ ಮಠದ ಆಸ್ತಿ ರಿ.ಸ.ನಂ. 40 ಮತ್ತು 45 ರಲ್ಲಿರುವ ಜಮೀನನ್ನು ತಮ್ಮ ಸ್ವಾಧೀನಕ್ಕೆ ಪಡೆದು ಜಮೀನಿನಲ್ಲಿ ಭೀಮಸೇನಾ ಸಂಘಟನೆ ಮತ್ತು ಅಂಬೇಡ್ಕರ್ ಅವರ ಹೆಸರಿನ ಫಲಕ ಅಳವಡಿಸಿದ್ದಾರೆ. ಈ ಅತಿಕ್ರಮಣ ವಿರೋಧಿಸಿ ಮಠದ ವತಿಯಿಂದ ಪೊಲೀಸರಿಗೆ ದೂರು ನೀಡಿದರೂ ಪೊಲೀಸರು ಎಫ್.ಐ.ಆರ್ ದಾಖಲಿಸಿಲ್ಲ. ಎಸ್.ಪಿ ಅವರನ್ನು ಸಂಪರ್ಕಿಸಿ ಅತಿಕ್ರಮಣದ ಬಗ್ಗೆ ವಿವರಿಸಿದ್ದರೂ ಎಸ್.ಪಿ ಅತಿಕ್ರಮಣದಾರರ ವಿರುದ್ಧ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಇದರಿಂದಾಗಿ ಮಠದ ಭಕ್ತರು ಅತಿಕ್ರಮಣದಾರರು ಮತ್ತು ಪೊಲೀಸ್ ವ್ಯವಸ್ಥೆಯ ವಿರುದ್ಧ ರೊಚ್ಚಿಗೆದ್ದಿದ್ದು, ಕೂಡಲೇ ಪೊಲೀಸ್ ಇಲಾಖೆ ಅತಿಕ್ರಮಣ ತೆರವುಗೊಳಿಸಿ ಮಠಕ್ಕೆ ಭೂಮಿಯನ್ನು ಹಸ್ತಾಂತರಿಸದಿದ್ದಲ್ಲಿ ದೇಶದ ವಿವಿಧ ಭಾಗಗಳಿಂದ ಮಠದ ಭಕ್ತರು ಖಾನಾಪುರಕ್ಕೆ ಆಗಮಿಸಿ ಮಠದ ಭೂಮಿಯ ಬಗ್ಗೆ ಬೀದಿಗಿಳಿದು ಪೊಲೀಸರ ಬಳಿ ನ್ಯಾಯ ಕೇಳಲಿದ್ದಾರೆ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಶರದ ಕೇಶಕಾಮತ, ಪ್ರದ್ಯುಮ್ನ ಭಾಟೆ, ಪದ್ಮಾ ಹಳ್ಯಾಳ, ನಿಲೇಶ ಬೋರ್ಕರ್, ಸುಭಾಸ ದೇಶಪಾಂಡೆ ಸೇರಿದಂತೆ ಮಠದ ಭಕ್ತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.