ಖಾನಾಪುರ: ತನ್ನ ಹಿಂಡಿನಿಂದ ತಪ್ಪಿಸಿಕೊಂಡ 10-12 ವರ್ಷ ವಯಸ್ಸಿನ ಕಾಡಾನೆ ಶನಿವಾರ ಪಟ್ಟಣದ ಹೊರವಲಯದ ಜನವಸತಿ ಪ್ರದೇಶಗಳ ಬಳಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿತ್ತು. ಮಾಹಿತಿ ಲಭ್ಯವಾಗುತ್ತಲೇ ಧಾವಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಕಾಡಾನೆಯನ್ನು ಮರಳಿ ಅರಣ್ಯದತ್ತ ಸಾಗುವಂತೆ ಮಾಡುವಲ್ಲಿ ಸಫಲರಾದರು.

ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಖಾನಾಪುರ ಆರ್.ಎಫ್.ಒ ಶ್ರೀಕಾಂತ ಪಾಟೀಲ, ‘ಶುಕ್ರವಾರ ಮಧ್ಯಾಹ್ನ ಮತ್ತು ಸಂಜೆಯ ಹೊತ್ತಿನಲ್ಲಿ ತಾಲ್ಲೂಕಿನ ಜಾಂಬೋಟಿ ರಸ್ತೆಯ ಮೋದೆಕೊಪ್ಪ, ಕಾನಸುಲಿ ಗ್ರಾಮಗಳ ವ್ಯಾಪ್ತಿಯಲ್ಲಿ ಆನೆ ಕಾಣಿಸಿಕೊಂಡಿತ್ತು. ಅರಣ್ಯ ಇಲಾಖೆಯ ಸಿಬ್ಬಂದಿ ಆನೆ ಸಂಚರಿಸಿದ ಸ್ಥಳದ ಸುತ್ತ ಪಹರೆಯನ್ನು ಕೈಗೊಂಡು ಜನರು ಆನೆಯ ಬಳಿ ಹೋಗದಂತೆ ತಡೆದರು. ಶನಿವಾರ ಮಧ್ಯಾಹ್ನದ ಬಳಿಕ ಕಾಡಾನೆ ಮಲಪ್ರಭಾ ನದಿಯನ್ನು ದಾಟಿ ರುಮೇವಾಡಿ, ಶೇಡೇಗಾಳಿ ಗ್ರಾಮಗಳ ಮೂಲಕ ಅರಣ್ಯ ಪ್ರದೇಶವನ್ನು ಪ್ರವೇಶಿಸಿದೆ’ ಎಂದರು.

ಆನೆ ಮರಳಿ ಜನವಸತಿ ಪ್ರದೇಶದತ್ತ ಬರದಂತೆ ಇಲಾಖೆಯಿಂದ ಗಮನಹರಿಸಲಾಗುತ್ತಿದೆ. ಜನರೂ ಸಹ ಆನೆಯ ಚಲನವಲನದ ಬಗ್ಗೆ ಮಾಹಿತಿಯನ್ನು ಅರಣ್ಯ ಇಲಾಖೆಯ ಜೊತೆ ಹಂಚಿಕೊಳ್ಳಬೇಕು, ಯಾವುದೇ ಕಾರಣಕ್ಕೂ ಆನೆಯನ್ನು ಕೆಣಕಬಾರದು ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುನೀತಾ ನಿಂಬರಗಿ ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-21-595301300

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.