ಖಾನಾಪುರ: ಖಾನಾಪುರದ ಕಾಡಿನಲ್ಲಿ ಕಳೆದ ಹಲವು ವರ್ಷಗಳಿಂದ ಮಾನವ– ವನ್ಯಜೀವಿ ಸಂಘರ್ಷ ನಿರಂತರವಾಗಿ ನಡೆಯುತ್ತ ಬಂದಿದೆ. ಕೆಲವೊಮ್ಮೆ ಮನುಷ್ಯರು ಕಾಡಿನೊಳಗೆ ಹೋದಾಗ ವನ್ಯಜೀವಿಗಳು ಅವರ ಮೇಲೆ ದಾಳಿ ನಡೆಸಿವೆ. ಕೆಲವೊಮ್ಮೆ ವನ್ಯಜೀವಿಗಳು ಆಹಾರ ಅರಸಿ ಜನವಸತಿ ಪ್ರದೇಶಗಳ ಬಳಿ ಬಂದು ಸಂಚಕಾರ ತಂದಿವೆ. ಮತ್ತೊಂದೆಡೆ, ರೈಲು ಮಾರ್ಗ ಹಾಗೂ ಹೆದ್ದಾರಿಗಳ ಮೇಲೆ ಓಡಾಡುವ ಪ್ರಾಣಿಗಳಿಗೂ ಕುತ್ತು ಬಂದಿದೆ.

ಈ ಮೂರೂ ಆಯಾಮಗಳಲ್ಲಿ ಖಾನಾಪುರ ಕಾಡನ್ನು, ಕಾಡಿನ ಕೂಸುಗಳನ್ನು ಕಾಪಾಡಬೇಕು ಎಂಬ ಕೂಗು ಎದ್ದಿದೆ.

ಒಂದೆಡೆ ವನ್ಯಜೀವಿಗಳ ಆವಾಸ ಸ್ಥಾನದಲ್ಲಿ ಮಾನವ ಹಸ್ತಕ್ಷೇಪ ಅವ್ಯಾಹತವಾಗಿ ನಡೆದಿದ್ದು, ಮತ್ತೊಂದೆಡೆ ಮನುಷ್ಯ ವಸತಿ ಪ್ರದೇಶದ ಮೇಲೆ ವನ್ಯಜೀವಿಗಳ ಆಕ್ರಮಣ ನಿರಂತರವಾಗಿ ನಡೆಯುತ್ತಿರುವುದು ತಲೆನೋವಾಗಿ ಪರಿಣಮಿಸಿದೆ.

ತಾಲ್ಲೂಕಿನಲ್ಲಿ ವ್ಯಾಪಿಸಿರುವ ಅರಣ್ಯ ಪ್ರದೇಶವನ್ನು ಪ್ರಾದೇಶಿಕ ಅರಣ್ಯ ಇಲಾಖೆಯಿಂದ ಎರಡು ಉಪ ವಿಭಾಗಗಳ 6 ವಲಯಗಳಲ್ಲಿ ವಿಂಗಡಿಸಲಾಗಿದೆ. ಕಣಕುಂಬಿ, ಖಾನಾಪುರ, ಲೋಂಡಾ ಮತ್ತು ಭೀಮಗಡ ವಲಯಗಳು ಖಾನಾಪುರ ಉಪವಿಭಾಗ ಮತ್ತು ನಾಗರಗಾಳಿ, ಗೋಲಿಹಳ್ಳಿ ವಲಯಗಳು ನಾಗರಗಾಳಿ ಉಪವಿಭಾಗದ ವ್ಯಾಪ್ತಿಗೆ ಒಳಪಟ್ಟಿವೆ.

ತಾಲ್ಲೂಕಿನ ಅರಣ್ಯ ಪ್ರದೇಶದಲ್ಲಿ ಹುಲಿ, ಚಿರತೆ, ಕರಡಿ, ಆನೆ ಸೇರಿದಂತೆ ಅಸಂಖ್ಯಾತ ವನ್ಯಜೀವಿಗಳು, ಪ್ರಾಣಿ– ಪಕ್ಷಿಗಳು ನೆಲೆಸಿವೆ. ಬಾನೆತ್ತರಕ್ಕೆ ವ್ಯಾಪಿಸಿರುವ ಮರಗಳು, ಬೆಟ್ಟಗುಡ್ಡಗಳು, ನದಿ– ಹಳ್ಳಗಳು ಕಾಡಿನ ಶ್ರೀಮಂತಿಕೆಯನ್ನು ಹೆಚ್ಚಿಸಿವೆ. ಕಾನನದೊಳಗೆ ವನ್ಯಜೀವಿಗಳು ಸುಖ, ಶಾಂತಿಯಿಂದ ಜೀವನ ನಡೆಸಲು ಉತ್ತಮ ವಾತಾವರಣವಿದೆ. ಆದರೆ, ಕೆಲವೊಮ್ಮೆ ಆಹಾರ ಮತ್ತು ನೀರಿನ ಸಮಸ್ಯೆ ಎದುರಾದಾಗ ಕಾಡುಪ್ರಾಣಿಗಳು ಕಾಡಿನಿಂದ ಹೊರಬರುವ ಕಾರಣ ಮಾನವ– ವನ್ಯಜೀವಿ ಸಂಘರ್ಷಕ್ಕೆ ಕಾರಣವಾಗುತ್ತಿದೆ.

ನಿಲ್ಲದ ಪ್ರಾಣಿಗಳ ಸಾವು: ಕಾಡನ್ನು ಸೀಳಿರುವ ರೈಲು ಮಾರ್ಗದಲ್ಲಿ ರೈಲ್ವೆ ಹಳಿಗಳ ಬಳಿ ಆಹಾರ ತಿನ್ನಲು ಬಂದ ಅಸಂಖ್ಯಾತ ಕಾಡುಕೋಣ, ಕಾಡೆಮ್ಮೆ ಮತ್ತು ಕಾಡಾನೆಗಳು ರೈಲಿಗೆ ಸಿಲುಕಿ ತಮ್ಮ ಪ್ರಾಣತೆತ್ತಿವೆ. ಇತ್ತ ಅನೇಕ ವನ್ಯಮೃಗಗಳು ರೈತರು ತಮ್ಮ ಬೆಳೆ ಸಂರಕ್ಷಣೆಗೆ ಅಳವಡಿಸಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಸಾವನ್ನಪ್ಪಿವೆ. ಜೊತೆಗೆ ಕಾಡಿನಿಂದ ಉದರಪೋಷಣೆಗಾಗಿ ಹೊರಬರುವ ಪ್ರಾಣಿಗಳು ರಸ್ತೆ ಅಪಘಾತಕ್ಕೆ ಸಿಲುಕಿ, ಬೇಟೆಗಾರರ ಬಲೆಗೆ ಬಿದ್ದು ಮೃತಪಟ್ಟಿವೆ.

ಗ್ರಾಮಗಳು ದಟ್ಟ ಅರಣ್ಯದಲ್ಲಿದ್ದು, ಮಳೆಗಾಲದಲ್ಲಿ ನೆರೆಗೆ ಬಾಧೆಗೊಳ್ಳುತ್ತವೆ. ಅರಣ್ಯ ಪ್ರದೇಶದಲ್ಲಿ ಮಳೆಗಾಲದಲ್ಲಿ ಸತತವಾಗಿ ಮಳೆಯಾಗುವ ಕಾರಣ ಈ ಗ್ರಾಮಗಳು ಅಗತ್ಯ ಸೌಲಭ್ಯಗಳಿಂದ ವಂಚಿತವಾಗುತ್ತವೆ. ಈ ಊರುಗಳಿಗೆ ಮೂಲಭೂತ ಸೌಲಭ್ಯ ಒದಗಿಸುವುದು ಸರ್ಕಾರದ ಪಾಲಿಗೆ ಕಷ್ಟಕರವಾಗಿರುವ ಕಾರಣ ಕಾನನದೊಳಗಿನ ಊರುಗಳನ್ನು ಕಾಡಿನಿಂದ ಹೊರಗೆ ಸ್ಥಳಾಂತರಿಸುವುದು ಸೂಕ್ತ ಎನ್ನುವ ಅಭಿಪ್ರಾಯ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಪರಿಸರವಾದಿಗಳದ್ದು.

ಇವರೇನಂತಾರೆ?

ಅರಣ್ಯ ಪ್ರದೇಶದ ಸುತ್ತ ವಾಸಿಸುವ ಜನರಿಗೆ ಮೂಲ ಸೌಲಭ್ಯಗಳನ್ನು ಒದಗಿಸಲು ಕಾನೂನಿನ ಅಡಚಣೆ ಇದೆ. ಹೀಗಾಗಿ ಮೊದಲು ಭೀಮಗಡ ವನ್ಯಧಾಮ ವ್ಯಾಪ್ತಿಯ ಕಾಡಿನ ಜನರನ್ನು ಮುಖ್ಯ ವಾಹಿನಿಗೆ ಸ್ಥಳಾಂತರ ಮಾಡಲು ಈಗಾಗಲೇ ಚರ್ಚಿಸಿದ್ದೇನೆ. ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಸಚಿವರು ಸಹ ಭೀಮಗಡ ವನ್ಯಧಾಮಕ್ಕೆ ಬಂದು ಭೇಟಿ ನೀಡಿ ಹೋಗಿದ್ದಾರೆ. ಈಗ ಕಾನನವಾಸಿಗಳ ಮನವೊಲಿಕೆ ಪ್ರಗತಿಯಲ್ಲಿದೆ.

ವಿಠ್ಠಲ ಹಲಗೇಕರ, ಶಾಸಕ

ರೈಲು ಹಳಿಗಳ ಪಕ್ಕದಲ್ಲಿ ಪ್ರಯಾಣಿಕರು ಎಸೆದ ಆಹಾರ ಪದಾರ್ಥವನ್ನು ತಿನ್ನುತ್ತಿದ್ದ ವನ್ಯಜೀವಿಗಳು ರೈಲಿಗೆ ಅಪ್ಪಳಿಸಿ ಸಾವನ್ನಪ್ಪಿದ ಅನೇಕ ಘಟನೆಗಳು 2017–2022ರ ಅವಧಿಯಲ್ಲಿ ಸಂಭವಿಸಿವೆ. ಇದುವರೆಗೂ ತಾಲ್ಲೂಕಿನ ಅರಣ್ಯದಲ್ಲಿ ಹಾದುಹೋಗಿರುವ ರೈಲು ಮಾರ್ಗದಲ್ಲಿ ರೈಲು ಅಪ್ಪಳಿಸಿ 1 ಕಾಡಾನೆ, 20ಕ್ಕೂ ಹೆಚ್ಚು ಕಾಡುಕೋಣಗಳು ಮತ್ತು ಅನೇಕ ವನ್ಯಜೀವಿಗಳು ಬಲಿಯಾಗಿವೆ. ಆಹಾರ ಪದಾರ್ಥಗಳನ್ನು ಹೊರಗೆ ಎಸೆಯಬಾರದು.

ಶಿವಾನಂದ ಮಗದುಮ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ನಾಗರಗಾಳಿ

ಪ್ರಕೃತಿಯ ಮಡಿಲಲ್ಲಿರುವ ನಮ್ಮ ಊರಿನಲ್ಲಿ ನಾವು ನೆಮ್ಮದಿಯ ಜೀವನ ನಡೆಸುತ್ತಿದ್ದೇವೆ. ಆದರೆ, ಸರ್ಕಾರ ನಮಗೆ ಕನಿಷ್ಠ ಮೂಲ ಸೌಲಭ್ಯಗಳನ್ನು ಒದಗಿಸುತ್ತಿಲ್ಲ. ಸೂಕ್ತ ಪರಿಹಾರ, ವಾಸಿಸಲು ಮನೆ ಮತ್ತು ಉಳಲು ಹೊಲ ನೀಡಿದರೆ ನಾವು ನಮ್ಮೂರನ್ನು ಅರಣ್ಯ ಇಲಾಖೆಯ ಸುಪರ್ದಿಗೆ ಒಪ್ಪಿಸಿ ಹೊರಗೆ ಬರಲು ಸಿದ್ಧರಿದ್ದೇವೆ.

ಅರ್ಜುನ್ ಗಾಂವಕರ, ಭೀಮಗಡ ವನ್ಯಧಾಮ ನಿವಾಸಿ

ಕೆಲ ಗ್ರಾಮಗಳನ್ನು ಅರಣ್ಯದಿಂದ ಸ್ಥಳಾಂತರಿಸುವ ಕೆಲಸಕ್ಕೆ ಇಲಾಖೆ ಮುಂದಾಗಿದೆ. ಪರಿಹಾರವನ್ನೂ ನೀಡಲಾಗುತ್ತದೆ. ಈಗಾಗಲೇ ಕೆಲ ಗ್ರಾಮಗಳ ಸ್ಥಳಾಂತರದ ಕುರಿತು ಬೆಳವಣಿಗೆಗಳು ಆರಂಭಗೊಂಡಿವೆ. ಶಾಶ್ವತ ಪರಿಹಾರ ಒದಗಿಸಲು ಮುಂದಾಗಿರುವ ಅರಣ್ಯ ಇಲಾಖೆ; ಕಳೆದ ಹಲವು ತಿಂಗಳಿಂದ ಕಾನನವಾಸಿಗಳ ಮನವೊಲಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ.

ಸುನೀತಾ ನಿಂಬರಗಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ

ಕಾಡಿನ ವಾಸಿಗಳ ಗೋಳು

ತಾಲ್ಲೂಕಿನ ಅರಣ್ಯ ಪ್ರದೇಶದ ನಡುವೆ ಹಲವು ಸಣ್ಣಸಣ್ಣ ಗ್ರಾಮಗಳಿದ್ದು, ಈ ಗ್ರಾಮಗಳಲ್ಲಿ ಈಗಲೂ ನೂರಾರು ಕುಟುಂಬಗಳು ವಾಸವಾಗಿವೆ. ಕಾಡಿನೊಳಗಿನ ಊರುಗಳಲ್ಲಿ ವಾಸಿಸುತ್ತಿರುವ ಕಾನನವಾಸಿಗಳು ಇಂದಿಗೂ ಕೆಲ ಅಗತ್ಯ ಮೂಲ ಸೌಲಭ್ಯಗಳಿಂದ ವಂಚಿತರಾಗಿ ಸಂಕಷ್ಟದ ಜೀವನವನ್ನು ಅನುಭವಿಸುತ್ತಿದ್ದಾರೆ.

ಇಲ್ಲಿಯ ಅರಣ್ಯ ಎಷ್ಟು ಸಮೃದ್ಧ ಮತ್ತು ಸುಂದರವಾಗಿದೆಯೋ ಈ ಅರಣ್ಯದೊಳಗೆ ವಾಸಿಸುತ್ತಿರುವ ಜನರ ಜೀವನವೂ ಅಷ್ಟೇ ತೊಂದರೆಯಿಂದ ಕೂಡಿದೆ. ಕಾಡಿನೊಳಗಿನ ಊರುಗಳ ಜನತೆ ಇಂದಿಗೂ ಮೊಬೈಲ್ ನೆಟ್ವರ್ಕ್, ವಿದ್ಯುತ್, ರಸ್ತೆ, ಸೇತುವೆ, ಸಾರಿಗೆ, ಶಿಕ್ಷಣ, ಆರೋಗ್ಯ ಮತ್ತಿತರ ಕನಿಷ್ಠ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.

ಅರಣ್ಯ ಇಲಾಖೆಯ ಕಠಿಣ ನಿಯಮದ ಕಾರಣ ಕಾನನವಾಸಿ ಜನರಿಗೆ ಅಗತ್ಯ ಮೂಲ ಸೌಲಭ್ಯ ಒದಗಿಸಲು ಸಮಸ್ಯೆ ಎದುರಾಗಿದೆ. ಪ್ರತಿ ವರ್ಷ ಬೇಸಿಗೆ ಕಾಲದಲ್ಲಿ ಕಾಡಿನ ಪ್ರಾಣಿಗಳು ಆಹಾರ ಹುಡುಕುತ್ತ ಕಾಡಿನಿಂದ ಹೊರಗೆ ಬರುತ್ತಿವೆ. ಕಾಡಾನೆಗಳು, ಕಾಡುಹಂದಿ, ಕಾಡುಕೋಣ, ಕಾಡೆಮ್ಮೆ, ನರಿ, ನವಿಲು, ಮೊಲ ಮತ್ತಿತರ ವನ್ಯಜೀವಿಗಳು ರೈತರ ಜಮೀನುಗಳಿಗೆ ಲಗ್ಗೆ ಇಟ್ಟು ಅವರು ಕಷ್ಟಪಟ್ಟು ಬೆಳೆದ ಬೆಳೆಗಳನ್ನು ತಿಂದು–ತುಳಿದು ಹಾಳು ಮಾಡುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.