ಚನ್ನಮ್ಮನ ಕಿತ್ತೂರು: ತಾಲ್ಲೂಕಿನ ಬೈಲೂರು ಗ್ರಾಮದ ಮಹಾತ್ಮ ಗಾಂಧಿ (ಹೊಸಗೇರಿ) ಮಾರ್ಗದಲ್ಲಿರುವ ಮೇಲ್ಮಟ್ಟದ ನೀರಿ ಟ್ಯಾಂಕ್ ತೀವ್ರ ಶಿಥಿಲಗೊಂಡಿದೆ. ಅದನ್ನು ಪೂರ್ಣ ನಾಶಪಡಿಸಿ ಹೊಸ ಟ್ಯಾಂಕ್ ನಿರ್ಮಿಸಬೇಕು ಎಂದು ಓಣಿಯ ನಾಗರಿಕರು ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

ಮೂರೂವರೆ ದಶಕದ ಹಿಂದೆ ನಿರ್ಮಾಣ ಮಾಡಲಾಗಿದ್ದ ಟ್ಯಾಂಕ್ ಊರಿನ ಕೆಲವು ಓಣಿಗಳಿಗೆ ಕುಡಿಯುವ ನೀರು ಸರಬರಾಜು ಮಾಡಲು ಅನುಕೂಲವಾಗಿತ್ತು. ನಿರ್ಮಾಣಗೊಂಡು ಬಹಳ ವರ್ಷಗಳು ಕಳೆದಿರುವುದರಿಂದ ಅದು ಮೊದಲಿನ ಸಾಮರ್ಥ್ಯ ಕಳೆದುಕೊಂಡಿದೆ. ಸಿಮೆಂಟ್ ಪ್ಲಾಸ್ಟರ್ ಕಳಚಿ ಬೀಳುತ್ತಿದೆ. ಒಳಗಿರುವ ಕಬ್ಬಿಣವು ತುಕ್ಕು ಹಿಡಿದು ಉದುರುತ್ತಿದೆ ಎಂದು ಗ್ರಾಮಸ್ಥ ನಾಗೇಶ ಬೆಣ್ಣಿ ತಿಳಿಸಿದರು.

ಕುಡಿಯುವ ನೀರು ಪೂರೈಕೆ ಮಾಡುವ ಈ ಮೇಲ್ಮಟ್ಟದ ಟ್ಯಾಂಕ್ ಸ್ವಚ್ಛಗೊಳಿಸಿ ವರ್ಷಗಳೇ ಕಳೆದಿವೆ. ಮೇಲೇರುವ ಏಣಿಯೂ ಸುರಕ್ಷಿತವಾಗಿಲ್ಲ. ಮೇಲೇರಲು ಹೋದರೆ ತೀವ್ರವಾಗಿ ಅಲುಗಾಡುತ್ತದೆ. ಉದುರಿ ಬೀಳುತ್ತಿರುವ ಸಿಮೆಂಟ್ ಮತ್ತು ತುಕ್ಕು ಹಿಡಿದಿರುವ ಕಬ್ಬಿಣದ ಜಂಗಿನ ಪುಡಿ ನೀರಿನಲ್ಲಿ ಮಿಶ್ರಣವಾಗುತ್ತಿರುವ ಸಂದೇಹವಿದೆ. ಇಂಥ ನೀರು ಕುಡಿದು ಗ್ರಾಮಸ್ಥರ ಆರೋಗ್ಯದಲ್ಲಿ ಏರುಪೇರು ಆಗುವ ಮುನ್ನವೇ ಈ ಟ್ಯಾಂಕಿಗೆ ನೀರು ಪೂರೈಸುವುದನ್ನು ಸ್ಥಗಿತಗೊಳಿಸಬೇಕು. ಇದು ಕುಸಿದು ಬಿದ್ದು ಅಕ್ಕ-ಪಕ್ಕದ ಮನೆಗಳಿಗೆ ಹಾನಿ ಆಗುವ ಮುನ್ನವೇ ಇದನ್ನು ನೆಲಸಮಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು.

ಕ್ರಮ ಕೈಗೊಳ್ಳುತ್ತೇವೆ: ಬೈಲೂರು ಗ್ರಾಮದಲ್ಲಿಯ ಮೇಲ್ಮಟ್ಟದ ಜಲಸಂಗ್ರಹಾಲಯ ಸ್ಥಳಕ್ಕೆ ಹೋಗಿ ಭೇಟಿ ಕೊಟ್ಟು ಬಂದಿರುವೆ. ಅದನ್ನು ನೆಲಸಮಗೊಳಿಸಲಾಗುವುದು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅವರ ಜತೆಗೆ ಚರ್ಚಿಸಿ ಹೊಸ ನೀರಿನ ಟ್ಯಾಂಕ್ ನಿರ್ಮಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಚನ್ನಮ್ಮನ ಕಿತ್ತೂರು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ನಿಂಗಪ್ಪ ಮಸಳಿ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-21-1338936498

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.