ಚನ್ನಮ್ಮನ ಕಿತ್ತೂರು: ತಾಲ್ಲೂಕಿನ ಬೈಲೂರು ಗ್ರಾಮದ ಗಾಂಧಿ ಮಾರ್ಗದಲ್ಲಿರುವ ಶಿಥಿಲಗೊಂಡ ಟ್ಯಾಂಕ್ ಅನ್ನು ಕುಡಿಯುವ ನೀರು ಸರಬರಾಜು ಇಲಾಖೆಯ ಕಾರ್ಯನಿರ್ವಾಹಕ ಇಂಜನಿಯರ್ ಕಿರಣ ಘೋರ್ಪಡೆ ಅವರು ಶುಕ್ರವಾರ ಭೇಟೆ ನೀಡಿ ಪರಿಶೀಲಿಸಿದರು.

ಪರಿಣಿತರ ತಂಡದ ಜತೆ ಆಗಮಿಸಿದ್ದ ಅವರು ಈ ಟ್ಯಾಂಕ್ ಪೂರ್ಣ ಶಿಥಿಲ ಗೊಂಡಿಲ್ಲ. ಇನ್ನೂ ಬಾಳಿಕೆ ಬರುತ್ತದೆ. ಹೆದರುವ ಅಗತ್ಯವಿಲ್ಲ ಎಂದರು.

ನೂತನ ಮತ್ತು ಈಗಿರುವುದಕ್ಕಿಂತಲೂ ಹೆಚ್ಚು ಸಾಮರ್ಥ್ಯವುಳ್ಳ ಮೇಲ್ಮಟ್ಟದ ಟ್ಯಾಂಕ್ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು. ಮಂಜೂರಾದ ನಂತರ ಟ್ಯಾಂಕ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

ದೇವಗಾಂವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸರಖೋಡ ಗ್ರಾಮದ ಬಳಿ ನಿರ್ಮಾಣಗೊಳ್ಳುತ್ತಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸ್ಥಳಕ್ಕೂ ಇಇ ಘೋರ್ಪಡೆ ಅವರು ಭೇಟಿ ನೀಡಿ ಕಾಮಗಾರಿಯ ಪರಿಶೀಲನೆ ನಡೆಸಿದರು. ಬರುವ ಡಿಸೆಂಬರ್ ವೇಳೆಗೆ ಈ ಯೋಜನೆಯ ಕಾಮಗಾರಿಗಳು ಪೂರ್ಣಗೊಳ್ಳಲಿವೆ ಎಂದು ತಿಳಿಸಿದರು.

ಬೈಲಹೊಂಗಲ ಕುಡಿಯುವ ನೀರು ಸರಬರಾಜು ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಇಂಜನಿಯರ್ ಅಜಿತ್ ಬಿರಾದಾರ, ಕಿರಿಯ ಇಂಜನಿಯರ್ ಚಂದ್ರಕಾಂತ ಅನಗೊಂಡ, ಬೈಲೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಈಶ್ವರ ಹಡಪದ, ಗ್ರಾಮಸ್ಥರಾದ ಶಿವಾನಂದ ಹಿರೇಮಠ, ಸುರೇಶ ಚಿಕಲಿ ಇದ್ದರು. ಗ್ರಾಮಸ್ಥರ ಆತಂಕ ಸ್ಥಿತಿ ಕುರಿತು ‘ಪ್ರಜಾವಾಣಿ’ ಶುಕ್ರವಾರ ವರದಿ ಮಾಡಿತ್ತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-21-289036891

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.