ಚನ್ನಮ್ಮನ ಕಿತ್ತೂರು: ನಾರಿಶಕ್ತಿ ವಂದನ ಮಸೂದೆ ವಿರೋಧಿಸಿ ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳ ವಿರುದ್ಧ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ನೇತೃತ್ವದಲ್ಲಿ ಬಿಜೆಪಿ ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿತು.

ಬಳಿಕ ಮಾತನಾಡಿದ ದೊಡ್ಡಗೌಡರ, ಸಂಸತ್ತಿನಲ್ಲಿ ಮಂಡಿಸಿದ ಕಾನೂನು ಬಿದ್ದ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿಜಯೋತ್ಸವ ಆಚರಿಸಿದರು. ಕಿತ್ತೂರು ಚನ್ನಮ್ಮ, ಬೆಳವಡಿ ಮಲ್ಲಮ್ಮ, ಝಾನ್ಸಿ ಲಕ್ಷ್ಮಿಬಾಯಿ, ಒನಕೆ ಒಬವ್ವ ಅಂಥ ಧೀರ ಮಹಿಳೆಯರಿಗೆ ಈ ಮೂಲಕ ಅವಮಾನ ಮಾಡಲಾಯಿತು. ದೇಶದಲ್ಲಿಯ ಎಲ್ಲ ಮಹಿಳೆಯರ ಮನಸಿಗೆ ಇದರಿಂದ ನೋವಾಗಿದೆ ಎಂದು ಹೇಳಿದರು.

ಮುಖಂಡರಾದ ಲಕ್ಷ್ಮಿ ಇನಾಮದಾರ, ಶ್ರೀಕರ ಕುಲಕರ್ಣಿ, ರಾಧಾಶ್ಯಾಮ ಕಾದ್ರೊಳ್ಳಿ, ಸಂದೀಪ ದೇಶಪಾಂಡೆ ಮಾತನಾಡಿದರು.

ರಾಷ್ಟ್ರೀಯ ಹೆದ್ದಾರಿ ಬಳಿಯ ಚನ್ನಮ್ಮ ವರ್ತುಲದಿಂದ ಹೊರಟ ಮೆರವಣಿಗೆ ಅರಳಿಕಟ್ಟಿ ವೃತ್ತಕ್ಕೆ ಬಂದು ಮುಕ್ತಾಯಗೊಂಡಿತು.

ಉಳವಪ್ಪ ಉಳ್ಳಾಗಡ್ಡಿ, ಬಸನಗೌಡ ಸಿದ್ರಾಮನಿ, ಕಿರಣ ಪಾಟೀಲ, ಬಸವರಾಜ ಮಾತನವರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-21-1264864534

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.