ಚನ್ನಮ್ಮನ ಕಿತ್ತೂರು: ಕಿತ್ತೂರು ಸಂಸ್ಥಾನ ಹಾಗೂ ಥ್ಯಾಕರೆಯೊಂದಿಗೆ ರಾಣಿ ಚನ್ನಮ್ಮ ಆಡಿದ ರಣೋತ್ಸಾಹದ ಮಾತುಗಳು, ನಂತರ ನಡೆದ ಯುದ್ಧದ ಸನ್ನಿವೇಶ ಒಳಗೊಂಡಿದ್ದ ರೋಮಾಂಚನಕಾರಿ ಕಥಾಗುಚ್ಛವಾಗಿದ್ದ ‘ಧ್ವನಿ ಮತ್ತು ಬೆಳಕು’ ಮಹತ್ವಾಕಾಂಕ್ಷಿ ಕಾರ್ಯಕ್ರಮದ ದನಿ ಈಗ ಅಡಗಿದೆ. ನವರಸಗಳ ಸನ್ನಿವೇಶಕ್ಕೆ ತಕ್ಕಂತೆ ಕುಣಿಯುತ್ತಿದ್ದ ಬಣ್ಣ, ಬಣ್ಣದ ಬೆಳಕು ಈಗ ಶ್ವೇತ ಬಣ್ಣವನ್ನೂ ಬೀರುತ್ತಿಲ್ಲ.

ಮಹತ್ವದ ಈ ಯೋಜನೆಗೆ ಬಳಕೆಯಾಗಿದ್ದ ಪರಿಕರಗಳೆಲ್ಲ ಅನಾಥವಾಗಿ ಬಿದ್ದಿವೆ. ಪ್ರದರ್ಶನಕ್ಕೆ ನಿಲ್ಲಿಸಿದ್ದ ವಸ್ತುಗಳನ್ನು ಒಂದು ಕಡೆ ಗುಡ್ಡೆ ಹಾಕಲಾಗಿದೆ. ಪ್ರದರ್ಶನದ ಧ್ವನಿಗೆ ಬಲ ನೀಡುತ್ತಿದ್ದ ದೊಡ್ಡ ಗಾತ್ರದ ವಿಶೇಷ ಧ್ವನಿಪೆಟ್ಟಿಗೆಗಳು ‘ಮಾಯ’ವಾಗಿವೆ. ‘ಪ್ರದರ್ಶನ ನಾನು ನಡೆಸುತ್ತೇನೆ ಎಂದು ಬಂದಿದ್ದ ಗುತ್ತಿಗೆದಾರನೊಬ್ಬ ಅಲ್ಲಿಯ ವಸ್ತುಗಳನ್ನು ಬೇರೊಬ್ಬ ವ್ಯಕ್ತಿ ಮೂಲಕ ಸಾಗಿಸುತ್ತಿದ್ದಾಗ ಪೊಲೀಸರಿಗೆ ಸಿಕ್ಕಿ ಬಿದ್ದ ಘಟನೆಯನ್ನೂ ಕೆಲವರು ಮರೆತಿಲ್ಲ’ ಎನ್ನುತ್ತಾರೆ ಸಾರ್ವಜನಿಕರು.

ಅಂದಾಜು ₹2 ಕೋಟಿ ವೆಚ್ಚದಲ್ಲಿ ಸಾಕಾರಗೊಂಡಿದ್ದ ಈ ಯೋಜನೆಯನ್ನು ಆರಂಭದಲ್ಲಿ ಪ್ರತಿವರ್ಷ ಅ.23ರಿಂದ 25ರವರೆಗೆ ಸರ್ಕಾರದ ವತಿಯಿಂದ ನಡೆಯುವ ಚನ್ನಮ್ಮನ ಕಿತ್ತೂರು ಉತ್ಸವದ ಸಂದರ್ಭದಲ್ಲಿ ಪ್ರದರ್ಶನ ಮಾಡಲಾಗುತ್ತಿತ್ತು. ದೊರೆಗಳ ಸಂಕ್ಷಿಪ್ತ ಪರಿಚಯ, ರಾಣಿ ಚನ್ನಮ್ಮನ ಜನ್ಮ, ಬಾಲಕಿಯಾಗಿದ್ದಾಗ ಮೈಗೂಡಿಸಿಕೊಂಡಿದ್ದ ಸಾಹಸ ಕ್ರೀಡೆ, ಸೊಸೆಯಾಗಿ, ದೊರೆ ಮಲ್ಲಸರ್ಜನ ಪತ್ನಿಯಾಗಿ ಕಿತ್ತೂರು ಅರಮನೆಗೆ ಬಂದಿದ್ದು, ನಂತರ ನಡೆದ ಯುದ್ಧದ ಸನ್ನಿವೇಶ, ಕುದುರೆಗಳ ಕರಪುಟಕ ಶಬ್ದ, ವೀರಾವೇಶದ ಮಾತುಗಳನ್ನು ಈ ಧ್ವನಿ, ಬೆಳಕು ಪ್ರದರ್ಶನ ಒಳಗೊಂಡಿತ್ತು.

‘ಕಿತ್ತೂರಲ್ಲಿ ಮತ್ತೆ ದೀಪಗಳು ಮೊಳಗತಾವ’ ಎಂಬ ರಾಣಿ ಚನ್ನಮ್ಮನ ಸ್ವಾತಂತ್ರ್ಯದ ನಿರೀಕ್ಷೆ ಆಕೆಯ ಕಾಲಮಾನದಲ್ಲಿ ಈಡೇರಲಿಲ್ಲವಾದರೂ, ರಾಣಿಯ ಇತಿಹಾಸವನ್ನು ಧ್ವನಿ ಮತ್ತು ಬೆಳಕು ತಂತ್ರಜ್ಞಾನದ ಮೂಲಕ ನಿರಂತರವಾಗಿ ಕಾಣಬೇಕು ಎಂದು ಜನತೆ ಕಂಡ ಕನಸು 2010ರಲ್ಲಿ ನನಸಾಗಿತ್ತು. ಆರಂಭದಲ್ಲಿ 30 ನಿಮಿಷಗಳ ಕಥಾನಕ ಪ್ರದರ್ಶನವನ್ನು 2014ರಲ್ಲಿ 45 ನಿಮಿಷಕ್ಕೆ ವಿಸ್ತರಣೆ ಮಾಡಲಾಗಿತ್ತು. ಪ್ರವಾಸೋದ್ಯಮ ಇಲಾಖೆಯಿಂದ ನಿರ್ಮಾಣಗೊಂಡಿದ್ದ ಈ ಯೋಜನೆಯನ್ನು 2014ರಲ್ಲಿ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಹಸ್ತಾಂತರ ಮಾಡಲಾಯಿತು ಎಂದು ಇಲ್ಲಿನವರು ಸ್ಮರಿಸುತ್ತಾರೆ.

ಹಂಪಿ ಮತ್ತು ಮೈಸೂರು ದೊರೆಗಳಿಗಿಂತ ಐತಿಹಾಸಿಕ ಕಿತ್ತೂರು ಸಂಸ್ಥಾನದ ಕಥಾನಕ ವಿಶೇಷತೆ ಪಡೆದುಕೊಂಡಿದೆ. ಹಾಗಂತ ಉತ್ತರ ಕನ್ನಡದ ಗಂಡು ಭಾಷೆ ಬಳಸಿ ಚಲನಚಿತ್ರ ನಿರ್ದೇಶಕ ಟಿ.ಎಸ್.ನಾಗಾಭರಣ ನಿರ್ದೇಶನದಲ್ಲಿ ಹಾಗೂ ಖ್ಯಾತ ಚಿತ್ರನಟಿ ಜಯಂತಿ ಅವರ ಪುತ್ರ ಕೃಷ್ಣಕುಮಾರ್ ನೇತೃತ್ವದ ತಂಡವು ಈ ಪ್ರದರ್ಶನದ ದೃಶ್ಯ ಸಂಯೋಜನೆಯನ್ನು ಸೊಗಸಾಗಿ ಮಾಡಿತ್ತು.

ಭಗ್ನ ಕೋಟೆಯನ್ನೇ ಬಳಸಿಕೊಂಡು ಮಾಡಿರುವ ಧ್ವನಿ ಮತ್ತು ಬೆಳಕು ಸಂಯೋಜನೆ ಮೂಲಕ ಗೀಗೀ ಪದ ಹಾಗೂ ಸಂಭಾಷಣೆ ಮೂಲಕ ಸಾರುವ ಕಿತ್ತೂರು ಸಂಸ್ಥಾನ ಕತೆ ವೀಕ್ಷಕರಲ್ಲಿ ಅಂದು ಹೊಸ ಅನುಭವ ನೀಡಿತ್ತು.

ಮಲ್ಲಸರ್ಜ ದೊರೆಯ ಪಟ್ಟಾಭಿಷೇಕದೊಂದಿಗೆ ಆರಂಭವಾಗುವ ಈ ಕಥಾನಕವು ಕಿತ್ತೂರು ರಾಣಿ ಚನ್ನಮ್ಮ ಹಚ್ಚಿದ ಸ್ವಾತಂತ್ರ್ಯದ ಕಿಡಿ ದೇಶದ ತುಂಬ ಹಬ್ಬಿ ದಾಸ್ಯದ ಸಂಕೋಲೆಯ ಬಿಡುಗಡೆಯ ದಿನವಾದ 1947ರ ಆಗಸ್ಟ್ 15ರವರೆಗೆ ಸಾಗುತ್ತಿತ್ತು.

ಕಿತ್ತೂರು ಸಂಸ್ಥಾನದ ರಾಣಿಯಾಗಿ ಬರುವ ಚನ್ನಮ್ಮ ಅನಂತರ ಪಡೆದ ಪುತ್ರ ಸಂತಾನದ ಸಂಭ್ರಮ, ಮಲ್ಲಸರ್ಜನ ಮರಣ, ದತ್ತಕ ಪ್ರಕರಣ, ಥ್ಯಾಕರೆ ಜೊತೆಗಿನ ಪ್ರಥಮ ಯುದ್ಧ ಗೆದ್ದ ಸಂಭ್ರಮವು ಬೆಳಕು, ಧ್ವನಿ ಸಂಯೋಜನೆ ಮೂಲಕ ಸಾಗಿ ಹೊಸ ಅನುಭವವನ್ನು ನೋಡುಗರಲ್ಲಿ ತಂದಿತ್ತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-21-1364407834

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.