ಚನ್ನಮ್ಮನ ಕಿತ್ತೂರು: ಇಲ್ಲಿನ ಐತಿಹಾಸಿಕ ರಣಗಟ್ಟಿ ಕೆರೆ ಅಭಿವೃದ್ಧಿಯ ದ್ವಿತೀಯ ಹಂತದ ಕಾಮಗಾರಿಗೆ ₹ 2 ಕೋಟಿ ವೆಚ್ಚದಲ್ಲಿ ಶಾಸಕ ಬಾಬಾಸಾಹೇಬ ಪಾಟೀಲ ಬುಧವಾರ ಚಾಲನೆ ನೀಡಿದರು.

ಮೊದಲ ಹಂತದಲ್ಲಿ ಹೂಳು ತೆಗೆಯುವುದು, ಕೊಳಚೆ ನೀರು ಹರಿಸಲು ಪರ್ಯಾಯ ಚರಂಡಿ ಮಾರ್ಗ ನಿರ್ಮಿಸುವುದು, ಅತಿಕ್ರಮಣ ತೆರವುಗೊಳಿಸಿ ಸುತ್ತಲೂ ಬೇಲಿ ಹಾಕುವ ಕಾಮಗಾರಿ ಇದ್ದವು.

ದ್ವಿತೀಯ ಹಂತದಲ್ಲಿ ತುಂಬುಗೆರೆಯಿಂದ ಸ್ವಚ್ಛ ನೀರನ್ನು ರಣಗಟ್ಟಿ ಕೆರೆಗೆ ತುಂಬಿಸುವುದು. ಅದಕ್ಕಾಗಿ ಪಂಪ್ ಹಾಗೂ ಟ್ಯಾಂಕ್ ನಿರ್ಮಿಸುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಮತ್ತೊಂದು ಬದಿಗೆ ಕಾಲುವೆ ದುರಸ್ತಿ ಮಾಡಿ ಕೋಟೆ ಆವರಣದ ಪಕ್ಕದಲ್ಲಿರುವ ಅಗಳಕ್ಕೆ ನೀರು ಹರಿಸುವುದು ಸೇರಿದೆ ಎಂದು ಶಾಸಕ ಬಾಬಾಸಾಹೇಬ ತಿಳಿಸಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷ ಜೈಸಿದ್ದರಾಮ ಮಾರಿಹಾಳ, ಮುಖಂಡರಾದ ಆಷ್ಫಾಕ್ ಹವಾಲ್ದಾರ್, ಕೃಷ್ಣ ಬಾಳೇಕುಂದರಗಿ, ಮುಖಂಡರಾದ ಮಂಜುನಾಥ ದೊಡ್ಡಣ್ಣವರ, ಪ್ರವೀಣ ಜಕ್ಕನಗೌಡ್ರ, ಬಿಷ್ಟಪ್ಪ ಶಿಂಧೆ, ಸಣ್ಣ ನೀರಾವರಿ ಇಲಾಖೆಯ ಎಂಜನಿಯರ್ ಎಂ.ಆರ್. ಪಾಟೀಲ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-21-536443161

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.