ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪಸಭಾಧ್ಯಕ್ಷ ಆನಂದ ಮಾಮನಿ ನಿಧನ: ಕಿತ್ತೂರು ಉತ್ಸವದ ಮೊದಲ ದಿನದ ಕಾರ್ಯಕ್ರಮ ರದ್ದು

ಅ.24ರಂದು ಮೆರವಣಿಗೆ, ಉದ್ಘಾಟನೆ
Last Updated 23 ಅಕ್ಟೋಬರ್ 2022, 4:52 IST
ಅಕ್ಷರ ಗಾತ್ರ

ಬೆಳಗಾವಿ: ವಿಧಾನಸಭೆ ಉಪಸಭಾಧ್ಯಕ್ಷ, ಸವದತ್ತಿ ಯಲ್ಲಮ್ಮ ಕ್ಷೇತ್ರದ ಶಾಸಕ ಆನಂದ ಮಾಮನಿ ಅವರು ನಿಧನರಾದ ಹಿನ್ನೆಲೆಯಲ್ಲಿ ಕಿತ್ತೂರು ಉತ್ಸವದ ಮೊದಲ ದಿನವಾದ ಅ. 23ರ ಎಲ್ಲ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ. ಅ.24 ಹಾಗೂ 25ರಂದು ಉತ್ಸವದ ಸೀಮಿತ ಕಾರ್ಯಕ್ರಮಗಳು ನಡೆಯಲಿವೆ.

ಸೋಮವಾರ ಮೆರವಣಿಗೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಉದ್ಘಾಟನೆ ನಡೆಯಲಿದೆ. ಸಾಂಸ್ಕೃತಿ ಕಾರ್ಯಕ್ರಮ, ಗೋಷ್ಠಿಗಳಲ್ಲಿ ಅಲ್ಪ ಬದಲಾವಣೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.

ಭಾನುವಾರ ಬೆಳಿಗ್ಗೆ ವೈಭವೋಪೇತ ಮೆರವಣಿಗೆಗೆ ಸಿದ್ಧತೆ ಮಾಡಲಾಗಿತ್ತು. ಇಡೀ ದಿನ ಸಾಂಸ್ಕೃತಿ ಕಾರ್ಯಕ್ರಮ, ಕ್ರೀಡಾಕೂಟ ಹಾಗೂ ಸಂಜೆಗೆ ಉತ್ಸವದ ಉದ್ಘಾಟನೆ ನಿಗದಿ ಮಾಡಲಾಗಿತ್ತು. ಭಾನುವಾರ ಶೋಕಾಚರಣೆ ಘೋಷಣೆ ಮಾಡಿದ್ದರಿಂದ ಇವೆಲ್ಲವನ್ನೂ ಕೈ ಬಿಡಲಾಗಿದೆ.

ಎರಡನೇ ಬಾರಿ ಮುಂದೂಡಿಕೆ: 1997ರ ಮಾರ್ಚ್‌ 24ರಂದು ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ ಅವರು ನಿಧನರಾಗಿದ್ದರು. ಆಗ ಒಂದು ದಿನಕ್ಕೆ ಸೀಮಿತವಾಗಿದ್ದ ಜಿಲ್ಲಾ ಮಟ್ಟದ ಕಿತ್ತೂರು ಉತ್ಸವವನ್ನೂ ಮುಂದೂಡಲಾಗಿತ್ತು.

ಆನಂದ ಮಾಮನಿ ಅವರ ಅಗಲಿಕೆಯಿಂದಾಗಿ ಎರಡನೇ ಬಾರಿಗೆ ಮುಂಡೂಡಿದಂತಾಗಿದೆ.

ಇವನ್ನೂಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT