ಚನ್ನಮ್ಮನ ಕಿತ್ತೂರು: ಕಿತ್ತೂರು ಸಂಸ್ಥಾನ ಕಾಲದ ಐತಿಹಾಸಿಕ ಗಡಾದ ಮರಡಿ ಮೇಲಿನ ವೀಕ್ಷಣಾ ಗೋಪುರ ಕುಸಿದು ಬಿದ್ದು ಎರಡು ವರ್ಷ ಸಮೀಪಿಸುತ್ತಿದೆ. ಆದರೂ, ಅದನ್ನು ಪುನರ್ ನಿರ್ಮಿಸುವ ಗೋಜಿಗೆ ಸರ್ಕಾರ ಹಾಗೂ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಮುಂದಾಗದಿರುವ ಬಗ್ಗೆ ಸಾರ್ವಜನಿಕರು ಅಸಮಾಧಾನಗೊಂಡಿದ್ದಾರೆ.

ಕಿತ್ತೂರು ಕೋಟೆ, ವಸ್ತು ಸಂಗ್ರಹಾಲಯ, ದೊರೆಗಳ ಸಮಾಧಿ ತಾಣಗಳು, ರಾಜಗುರುಗಳ ಕಲ್ಮಠ ಮತ್ತು ಗಡಾದ ಮರಡಿ ವೀಕ್ಷಿಸಲು ಪ್ರವಾಸಿಗರು ಬರುತ್ತಾರೆ. ಪಾಳು ಬಿದ್ದ ಕೋಟೆ ವೀಕ್ಷಿಸಿ ಗಡಾದ ಮರಡಿಗೆ ಆಗಮಿಸಿದರೆ, ‘ಇದನ್ನೂ ಬ್ರಿಟಿಷರು ಕೆಡವಿದ್ದಾರೆಯೇ’ ಎಂಬ ಪ್ರಶ್ನೆಯನ್ನು ಪ್ರವಾಸಿಗರು ಕೇಳುವಂತಾಗಿದೆ.

ದೊರೆಗಳ ಕಾಲದಲ್ಲಿ ವೈರಿಗಳ ಚಲನ– ವಲನಗಳ ಮೇಲೆ ನಿಗಾ ಇರಿಸುವ ವೀಕ್ಷಣಾ ಗೋಪುರವಾಗಿದ್ದ ಈ ಐತಿಹಾಸಿಕ ಗಡಾದ ಮರಡಿಗೆ ತನ್ನದೇ ಆದ ಇತಿಹಾಸವಿದೆ. ಗೋಪುರದ ಮೇಲೆ ನಿಂತು ನೋಡಿದರೆ ಹತ್ತಾರು ಕಿ.ಮೀ ದೂರದವರೆಗಿನ ಪ್ರದೇಶ ಕಣ್ಣಿಗೆ ಗೋಚರಿಸುತ್ತದೆ. ನೀಲಗಿರಿ ಗಿಡಗಳು ಬೆಳೆಯುವ ಮುನ್ನ ಧಾರವಾಡ ವಿಶ್ವವಿದ್ಯಾಲಯದ ಗೋಪುರ ಕಣ್ಣಿನ ನೋಟಕ್ಕೆ ಸಿಗುತ್ತಿತ್ತು ಎಂದು ಇಲ್ಲಿನ ಹಿರಿಯರು ನೆನಪಿಸುತ್ತಾರೆ.

ಮಹತ್ವದ ಸಂಗತಿಗಳನ್ನು ತನ್ನೊಡಲಲ್ಲಿ ಇಟ್ಟುಕೊಂಡಿರುವ ಈ ಮಹತ್ವದ ತಾಣದ ಅಭಿವೃದ್ಧಿಗಾಗಿ ಹಿಂದಿನ ಅವಧಿಯಲ್ಲಿ ಶಾಸಕರಾಗಿದ್ದ ಮಹಾಂತೇಶ ದೊಡ್ಡಗೌಡರ ಒತ್ತಾಸೆಯಿಂದ ಬಿಜೆಪಿ ಸರ್ಕಾರವು ₹ 1.80 ಕೋಟಿ ಬಿಡುಗಡೆ ಮಾಡಿತ್ತು. ಅದರ ಸೌಂದರ್ಯ ಹೆಚ್ಚಿಸಿ ಆಕರ್ಷಣೀಯ ತಾಣವಾಗಿ ರೂಪಿಸಲು ಯೋಜನೆ ರೂಪಿಸಲಾಗಿತ್ತು. ಮರಡಿಗೆ ತೆರಳುವ ರಸ್ತೆ ಸುಧಾರಣೆ, ಇಕ್ಕೆಲಗಳಲ್ಲಿ ವಿದ್ಯುತ್ ದೀಪಾಲಂಕಾರ, ಮರಡಿ ಬಳಿ ತಿನಿಸು ಕಟ್ಟೆ ನಿರ್ಮಾಣ, ಮರಡಿಗೆ ಹೊಸ ರೂಪ ನೀಡುವ ಕಾಮಗಾರಿ ಯೋಜನೆಯಲ್ಲಿದ್ದವು.

ಇದರಲ್ಲಿ ಕೆಲ ಕಾಮಗಾರಿ ನಡೆದಿವೆ. ಮರಡಿ ಮಧ್ಯ ಸುಮಾರು 80 ಅಡಿ ಎತ್ತರದ ಧ್ವಜಸ್ತಂಭ ಅನಾವರಣ ಮಾಡಲಾಗಿತ್ತು. ಜ. 26 ಹಾಗೂ ಆ. 15ಕ್ಕೆ ಇಲ್ಲಿ ವಿಶಾಲವಾದ ರಾಷ್ಟ್ರಧ್ವಜಾರೋಹಣ ಮಾಡಲಾಗುತ್ತಿತ್ತು.

ಎರಡ್ಮೂರು ಬಾರಿ ಧ್ವಜಾರೋಹಣಕ್ಕೂ ಈ ತಾಣ ಸಾಕ್ಷಿಯಾಗಿ, ನೋಡುಗರಲ್ಲಿ ಪುಳಕ ಉಂಟುಮಾಡಿತ್ತು. ಆದರೆ, 2024ರಲ್ಲಿ ಸುರಿದ ಮಳೆಗೆ ನವೀಕರಣಗೊಂಡಿದ್ದ ಗೋಪುರ ಕುಸಿದು ಬಿತ್ತು. ಯೋಚಿಸದೇ ನಡೆಸಿದ ಕಾಮಗಾರಿಗೆಯಿಂದಾಗಿ ಗೋಪುರದ ಮೇಲೆ ನೀರು ಸಂಗ್ರಹಗೊಂಡು ಕೆಳಗೆ ಬಸಿದಿದ್ದು ಇದಕ್ಕೆ ಕಾರಣವಾಯಿತು. ಅನಂತರ ಪ್ರವಾಸಿಗರು ಮತ್ತು ಜನರ ಓಡಾಟವನ್ನು ಈ ಪ್ರದೇಶದಲ್ಲಿ ನಿಷೇಧಿಸಲಾಯಿತು ಎಂದು ಇಲ್ಲಿನವರು ಹೇಳುತ್ತಾರೆ.

ಗೋಪುರದ ಒಂದು ಭಾಗ ಬಿದ್ದಿದ್ದರೂ ಆಡಳಿತ ವ್ಯವಸ್ಥೆಯಿಂದಾಗಿ ಇದೂ ಒಂದು ಸ್ಮಾರಕವಾಗಿ ಮೂಕರೋದನ ಅನುಭವಿಸುತ್ತ ನಿಂತಂತೆ ಭಾಸವಾಗುತ್ತದೆ ಎನ್ನುತ್ತಾರೆ ಜನರು.

ಗಡಾದ ಮರಡಿ ಅಭಿವೃದ್ಧಿಗಾಗಿ ಹಿಂದಿನ ಸರ್ಕಾರ ₹ 1.80 ಕೋಟಿ ಕಾಮಗಾರಿಗೆ ಅನುಮೋದನೆ ನೀಡಿತ್ತು. ಅದರಲ್ಲಿ ₹ 90 ಲಕ್ಷ ವೆಚ್ಚದ ಕಾಮಗಾರಿ ನಡೆದಿವೆ. ಇನ್ನೂ ಕೆಲಸ ಬಾಕಿಯಿದೆ. ಬೇಗ ಪೂರ್ಣಗೊಳಿಸಬೇಕು ಎಂಬುದು ಸಾರ್ವಜನಿಕರ ಒತ್ತಾಸೆ.

ಮಳೆಯಿಂದಾಗಿ ಕುಸಿದು ಬಿದ್ದಿರುವ ಗೋಪುರ ಪುನರ್ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಸರ್ಕಾರದಿಂದ ಅನುದಾನ ಬಿಡುಗಡೆಯಾದರೆ ಕಾಮಗಾರಿ ನಡೆಸಲಾಗುವುದು

–ಸಂಜೀವ ಮಿರಜಕರ, ಎಇಇ, ಲೋಕೋಪಯೋಗಿ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.