ವಿಶ್ವನಾಥ ಕತ್ತಿ ದಂತ ಕಾಲೇಜು ವಿದ್ಯಾರ್ಥಿಗಳ ಸಾಧನೆ

ಬೆಳಗಾವಿ: ಇಲ್ಲಿನ ಕೆಎಲ್ಇ ಸಂಸ್ಥೆಯ ವಿಶ್ವನಾಥ ಕತ್ತಿ ದಂತ ಕಾಲೇಜಿನ ಸಾರ್ವಜನಿಕ ದಂತ ಆರೋಗ್ಯ ವಿಭಾಗದ ಸ್ನಾತಕೊತ್ತರ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಅನೇಕ ಪ್ರಶಸ್ತಿಗಳನ್ನು ಗಳಿಸಿದ್ದಾರೆ.
‘ಕೋವಿಡ್ ಸಂದರ್ಭದಲ್ಲೂ ದಂತ ವೈದ್ಯಕೀಯ ವಿದ್ಯಾರ್ಥಿಗಳ ಪ್ರತಿಭೆಯ ಉತ್ತೇಜನಕ್ಕಾಗಿ ಇತ್ತೀಚೆಗೆ ವಿವಿಧ ಸ್ಥಳಗಳಲ್ಲಿ ವಿಶ್ವ ಆರೋಗ್ಯ, ವಿಶ್ವ ತಂಬಾಕುರಹಿತ ದಿನ ಹಾಗೂ ಭಾರತೀಯ ದಂತ ಆರೋಗ್ಯ ಸಂಸ್ಥೆಯ ದಿನಾಚರಣೆ ಅಂಗವಾಗಿ ರಾಷ್ಟ್ರಮಟ್ಟದಲ್ಲಿ ಸ್ಪರ್ಧೆಗಳನ್ನು ನಡೆಸಲಾಗಿತ್ತು. ಪ್ರತಿ ಸ್ಪರ್ಧೆಯಲ್ಲೂ 200 ಮಂದಿ ಪಾಲ್ಗೊಂಡಿದ್ದರು. ಅವರ ನಡುವೆ ಕಾಲೇಜಿನ ವಿದ್ಯಾರ್ಥಿಗಳು ಮಿಂಚಿದ್ದಾರೆ’ ಎಂದು ಪ್ರಕಟಣೆ ತಿಳಿಸಿದೆ.
ಡಾ.ಅತ್ರಿಯಾ ಪೈ ಕೋತ್: ಐಸಿಪಿಎ ಆರೋಗ್ಯ ಉತ್ಪಾದನಾ ಸಂಸ್ಥೆ ಆಯೋಜಿಸಿದ್ದ ‘ಭವಿಷ್ಯದ ಅವಿಷ್ಕಾರಗಳ ಮುನ್ಸೊಚನೆ’ ವಿಷಯ ಕುರಿತ ಸ್ಪರ್ಧೆಯಲ್ಲಿ ಪ್ರಥಮ ರ‍್ಯಾಂಕ್.
ಡಾ.ಅಭ್ರಾ ರಾಯ್ ಚೌಧರಿ ಮತ್ತು ಡಾ.ಅತ್ರಿಯಾ ಪೈ ಕೋತ್: ಆಂಧ್ರದ ಅನಿಲ್ ನೀರುಕೊಂಡ ದಂತ ವೈದ್ಯಕೀಯ ವಿಙ್ಞನ ಸಂಸ್ಥೆ ಮತ್ತು ಐಎಪಿಎಚ್‌ಡಿ ಆಯೋಜಿಸಿದ್ದ ಜಿಗ್ಸಾ ಪಜಲ್‌ನಲ್ಲಿ ಪ್ರಥಮ.
ಡಾ.ಅಭ್ರಾ ರಾಯ್ ಚೌಧರಿ: ಕಾರ್ಸಿನೊಜೆನೆಸಿಸ್, ಬಾಯಿ ಕ್ಯಾನ್ಸರ್ ಸಂಶೋಧನಾ ಸಂಸ್ಥೆ ಹಾಗೂ ಅಮೃತ ವೈದ್ಯಕೀಯ ಕಾಲೇಜು ನಡೆಸಿದ ಪ್ರಬಂಧ ಸ್ಪರ್ಧೆಯಲ್ಲಿ 3ನೇ ಬಹುಮಾನ.
ಡಾ.ಮೆಹಲ್ ಶಹಾ: ಐಎಪಿಎಚ್‌ಡಿ ಕೇರಳ ಘಟಕ ಆಯೋಜಿಸಿದ್ದ ಆರೋಗ್ಯ ಶಿಕ್ಷಣ ಕುರಿತ ಫಿನಿಕ್ಸ್-2021 ಆನ್‌ಲೈನ್ ಸ್ಪರ್ಧೆಯಲ್ಲಿ 2ನೇ ಬಹುಮಾನ.
ಡಾ.ರಾಮ್ ಸೊರತ್‌ಕುಮಾರ್: ಐಎಪಿಎಚ್‌ಡಿ ಕೇರಳ ಘಟಕ ನಡೆಸಿದ ಸ್ಮಾರ್ಟ್ ಐಡಿಯಾ ಆನ್‌ಲೈನ್ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ.
ಡಾ.ಮೆಹಲ್ ಶಹಾ ಮತ್ತು ಡಾ.ಅತ್ರಿಯಾ ಪೈ ಕೋತ್: ಐಎಪಿಎಚ್‌ಡಿ ಕೇರಳ ಘಟಕ ನಡೆಸಿದ ಫಿನಿಕ್ಸ್–2021 ಸಮ್ಮೇಳನದಲ್ಲಿ ಹಳೆಯ ಛಾಯಾಚಿತ್ರ ಸಂಗ್ರಹ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದ್ದಾರೆ. ಈ ವಿದ್ಯಾರ್ಥಿಗಳನ್ನು ಕೆಎಲ್‌ಇ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿ ಕುಲಪತಿ, ಕುಲಸಚಿವರು, ಪ್ರಾಂಶುಪಾಲೆ ಡಾ.ಅಲ್ಕಾ ಕಾಳೆ, ವಿಭಾಗ ಮಖ್ಯಸ್ಥ ಡಾ.ಅನಿಲ ಅಂಕೋಲ ಅಭಿನಂದಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.