ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಜಿಐಟಿಗೆ ‘ಲೂಯಿಸ್ ಐ. ಖಾನ್ ಟ್ರೋಫಿ’

Last Updated 19 ಜುಲೈ 2021, 11:28 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಕೆಎಲ್ಎಸ್ ಗೋಗಟೆ ತಾಂತ್ರಿಕ ಕಾಲೇಜಿನ ವಾಸ್ತುಶಿಲ್ಪ ವಿಭಾಗದ ವಿದ್ಯಾರ್ಥಿಗಳು ನವದೆಹಲಿಯ ನಾಸಾ (ನ್ಯಾಷನಲ್ ಅಸೋಸಿಯೇಷನ್ ಆಫ್ ಸ್ಟೂಡೆಂಟ್ಸ್ ಆಫ್ ಆರ್ಕಿಟೆಕ್ಚರ್) ಆಯೋಜಿಸಿದ್ದ ಸ್ಪರ್ಧೆಯಲ್ಲಿ ‘ಲೂಯಿಸ್ ಐ. ಖಾನ್ ಟ್ರೋಫಿ’ ಗೆದ್ದಿದ್ದಾರೆ.

ಪ್ರತಿ ವರ್ಷ ನಾಸಾ ವಾಸ್ತುಶಿಲ್ಪದ ವಿದ್ಯಾರ್ಥಿಗಳಿಗೆ ಈ ಸ್ಪರ್ಧೆ ನಡೆಸುತ್ತದೆ. ಭಾರತದ ಶ್ರೀಮಂತ, ವೈವಿಧ್ಯಮಯ ಮತ್ತು ಐತಿಹಾಸಿಕ ಪ್ರದೇಶಗಳ ಅರಿವು ಹೆಚ್ಚಿಸುವುದು ಈ ಸ್ಪರ್ಧೆಯ ಮೂಲ ಉದ್ದೇಶವಾಗಿದೆ. ಈ ಶೈಕ್ಷಣಿಕ ವರ್ಷದಲ್ಲಿ, ‘ರೂಡಿಮೆಂಟ್ಸ್-ವರ್ನಾಕ್ಯುಲರ್ ಟ್ರೆಡಿಷನ್ಸ್-ಕಂಟೆಂಪರರಿ ಆರ್ಕಿಟೆಕ್ಚರ್’ ಎಂಬ ವಿಷಯದ ಮೇಲೆ ಆಯೋಜಿಸಲಾಗಿತ್ತು. ದೇಶದ 60 ಸಂಸ್ಥೆಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವು.

ಜಿಐಟಿ ವಾಸ್ತುಶಿಲ್ಪ ವಿಭಾಗದ ವಿದ್ಯಾರ್ಥಿಗಳ ತಂಡವು ಗುಜರಾತ್‌ನ ಕಚ್‌ನಲ್ಲಿರುವ ‘ಖಮೀರ್ ಆರ್ಟ್ ಅಂಡ್ ಕ್ರಾಫ್ಟ್ ರಿಸೋರ್ಸ್ ಸೆಂಟರ್’ ಅನ್ನು ಬಿಂಬಿಸುವ ಮಾದರಿ ರಚಿಸಿ ಪ್ಯಾನ್ ಇಂಡಿಯಾದಲ್ಲಿ 1ನೇ ಸ್ಥಾನ (ಉಲ್ಲೇಖ) ಗೆದ್ದಿದೆ. ಪ್ರೊ.ಎ.ವಿ. ಪ್ರಸಾದಿ ಮತ್ತು ಪ್ರೊ.ಬಿ.ವಿ. ಗೌರಿಪುರ ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದರು. ಆಡಳಿತ ಮಂಡಳಿ ಅಧ್ಯಕ್ಷ ಎಂ.ಆರ್. ಕುಲಕರ್ಣಿ, ಪ್ರಾಂಶುಪಾಲ ಡಾ.ಜಯಂತ ಕೆ. ಕಿತ್ತೂರ ಮತ್ತು ಸಿಬ್ಬಂದಿ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT