ಕೌಜಲಗಿ: ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಈಚೆಗೆ ನಡೆದ ಮೇಲುಸ್ತುವಾರಿ ಸಮಿತಿ ಸಭೆಗೆ ಕೇವಲ ಮೂವರು ಮಾತ್ರ ಹಾಜರಾಗಿದ್ದು, 20 ಸದಸ್ಯರು ಗೈರಾಗಿದ್ದರು. ಈ ಬೆಳವಣಿಗೆ ಶಾಲಾ ಬಾಲಕರ ಪಾಲಕರಲ್ಲಿ ಬೇಸರ ಮೂಡಿಸಿದೆ.

ಒಂದೇ ಆವರಣದಲ್ಲಿ ಎಲ್.ಕೆ.ಜಿ. ಯಿಂದ ಪದವಿಪೂರ್ವ ಶಿಕ್ಷಣ ದೊರೆಯಲೆಂದು ಕರ್ನಾಟಕ ಪಬ್ಲಿಕ್ ಶಾಲೆಯನ್ನು ತೆರೆಯಲಾಗಿದೆ. ಇದರ ಅಭಿವೃದ್ಧಿಗಾಗಿ ಶಾಲಾ ಮೇಲುಸ್ತುವಾರಿ ಸಮಿತಿಯನ್ನು ರಚಿಸಿದೆ. ಆದರೆ ಕೌಜಲಗಿಯಲ್ಲಿ ಒಬ್ಬರಿಗೊಬ್ಬರು ಸಂಬಂಧವಿಲ್ಲದಂತೆ ಕೆಪಿಎಸ್ ಸಭೆಗಳು ನಡೆಯುತ್ತಿವೆ ಎಂದು ದೂರಿದ್ದಾರೆ.

ಮೇಲುಸ್ತುವಾರಿ ಸಮಿತಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಗೌರವಾಧ್ಯಕ್ಷರಾಗಿದ್ದಾರೆ. ಇವರೂ ಸೇರಿದಂತೆ ಒಟ್ಟು 18 ಸದಸ್ಯರು, 5 ಪದನಿಮಿತ್ತ ಸದಸ್ಯರು ಸೇರಿ 23 ಜನರಿದ್ದಾರೆ. ಪದವಿ ಪೂರ್ವ ಕಾಲೇಜಿನ ಪ್ರಭಾರಿ ಪ್ರಾಚಾರ್ಯ ಜಿ.ಎಂ ಯಕ್ಕುಂಡಿ ಅವರ ಅಧ್ಯಕ್ಷತೆಯಲ್ಲಿ, ಪ್ರೌಢಶಾಲೆ ಮುಖ್ಯಶಿಕ್ಷಕಿ ರಾಜಶ್ರೀ ನಾಯಕ ಅವರ ಉಪಾಧ್ಯಕ್ಷತೆಯಲ್ಲಿ ನಡೆದ ಸಭೆ ವಿಫಲವಾಗಿದೆ. ಸಮಿತಿ ಅಧ್ಯಕ್ಷ ಮಹಾದೇವ ಬುದ್ನಿ, ಸದಸ್ಯರಾದ ರಮೇಶ ಗಡ್ದೆದಾರ, ಅನಿಲ ಕಂಬಾರ ಮಾತ್ರ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-21-1260371817

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.