ಬೆಳಗಾವಿ: ಕೆಪಿಟಿಸಿಎಲ್ ಕಿರಿಯ ಸಹಾಕರ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಎಸಗಿದ ಆರೋಪದ ಮೇಲೆ ಮತ್ತೆ ಆರು ಅಭ್ಯರ್ಥಿಗಳನ್ನು ಗುರುವಾರ ಬಂಧಿಸಲಾಗಿದೆ. ಇದರೊಂದಿಗೆ ಆರೋಪಿಗಳ ಸಂಖ್ಯೆ 29ಕ್ಕೆ ಏರಿಕೆಯಾಗಿದೆ.
ಗೋಕಾಕ ತಾಲ್ಲೂಕಿನ ಬಗರನಾಳದ ಈರಣ್ಣ ಮಲ್ಲಪ್ಪ ಬಂಕಾಪುರ (26), ಶಿವಾನಂದ ರಾಮಪ್ಪ ಕುಮೋಜಿ (22), ರಾಮದುರ್ಗ ತಾಲ್ಲೂಕಿನ ಬಟಕುರ್ಕಿಯ ಆದಿಲ್‌ಶಾ ಸಿಖಂದರ್ ತಾಸೇವಾಲೆ (23), ಮೂಲಗಿ ತಾಲ್ಲೂಕಿನ ಖಾನಟ್ಟಿಯ ಮಹಾಂತೇಶ ಹಣಮಂತ ಹೊಸ ಉಪ್ಪಾರ (22) ನಾಗನೂರು ಗ್ರಾಮದ ಮಹಾಲಿಂಗ ಭೀಮಪ್ಪ ಕುರಿ (30), ಸವದತ್ತಿ ತಾಲ್ಲೂಕಿನ ಮೆಳ್ಳಿಕೇರಿಯ ಸುಂದರ ಶಿವಾನಂದ ಬಾಳಿಕಾಯಿ (23) ಬಂಧಿತರು.
ಇವರೆಲ್ಲರೂ ಸ್ಮಾರ್ಟ್‌ವಾಚ್, ಮೈಕ್ರೊ ಚಿಪ್ ಸೇರಿದಂತೆ ಇತರ ಎಲೆಕ್ಟ್ರಾನಿಕ್ ಉಪಕರಣಗಳನ್ನು ಪರೀಕ್ಷೆ ಕೇಂದ್ರದೊಳಗೆ ತೆಗೆದುಕೊಂಡು ಹೋಗಿ ಪರೀಕ್ಷೆ ಬರೆದಿದ್ದಾರೆ. ಅಕ್ರಮಕ್ಕೆ ಬಳಸಿದ ಉಪಕರಣಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ತಿಳಿಸಿದ್ದಾರೆ.
ಇದೇ ಪ್ರಕರಣದಲ್ಲಿ ಬಂಧಿತರಾಗಿದ್ದ 19 ಆರೋಪಿಗಳಿಗೆ ಅ.17ರಂದು ಜಾಮೀನು ಸಿಕ್ಕಿದೆ. ಪ್ರಮುಖ ಆರೋಪಿ ಸಂಜು ಲಕ್ಷ್ಮಣ ಭಂಡಾರಿಯನ್ನು ಸಿಐಡಿ ಕಸ್ಟಡಿಗೆ ನೀಡಲಾಗಿದೆ. ಅ.18ರಂದು ಇಬ್ಬರು ಹಾಗೂ 19ರಂದು ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.