ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ರೋಮಾಂಚಕ ಕೆಟಿಎಂ ಬೈಕ್ ಸಾಹಸ

Last Updated 24 ಫೆಬ್ರುವರಿ 2020, 10:10 IST
ಅಕ್ಷರ ಗಾತ್ರ

ಬೆಳಗಾವಿ: ಕೆಟಿಎಂ ಕಂಪನಿಯಿಂದ ಇಲ್ಲಿನ ಬೆಳಗಾವಿ ಕ್ಲಬ್‌ ಆವರಣದಲ್ಲಿ ಭಾನುವಾರ ರಾತ್ರಿ ರೋಮಾಂಚಕ ಬೈಕ್ ಸಾಹಸ ಪ್ರದರ್ಶನವನ್ನು ಆಯೋಜಿಸಲಾಗಿತ್ತು.

ಗ್ರಾಹಕರಿಗೆ ಈ ಬೈಕ್‌ಗಳ ಸಾಮರ್ಥ್ಯವನ್ನು ಪರಿಚಯಿಸುವ ‘ಕೆಟಿಎಂ ಆರೆಂಜ್ ಡೇ’ ಸಾಹಸ ಪ್ರದರ್ಶನಕ್ಕೆ ನೂರಾರು ಮಂದಿ ಸಾಕ್ಷಿಯಾದರು. ಸುತ್ತಮುತ್ತಲಿನ ಕೆಟಿಎಂ200 ಡ್ಯೂಕ್ ಮತ್ತು ಆರ್‌ಸಿ200 ಬೈಕ್‌ಗಳ ಮಾಲೀಕರು, ಪರಿಣತರ ಉಸ್ತುವಾರಿಯಲ್ಲಿ ಸಾಹಸ ಪ್ರದರ್ಶಿಸಿದರು. ವೃತ್ತಿಪರ ಸಾಹಸಿ ಬೈಕ್ ಸವಾರರು ಮೈನವಿರೇಳಿಸುವಂತೆ ಸಾಹಸ ಮತ್ತು ಟ್ರಿಕ್‌ಗಳನ್ನು ಪ್ರದರ್ಶಿಸಿದರು. ಸಾರ್ವಜನಿಕರಿಗೆ ಉಚಿತ ಪ್ರವೇಶ ನೀಡಲಾಗಿತ್ತು.

‘ಕೆಟಿಎಂ ಬ್ರ್ಯಾಂಡ್‌ ಅಧಿಕ ಸಾಮರ್ಥ್ಯದ ರೇಸಿಂಗ್ ಬೈಕ್‌ಗಳಿಗೆ ಹೆಸರಾಗಿದೆ. ಇವು ಸವಾರರಿಗೆ ಯಾವ ರೀತಿಯ ರೋಮಾಂಚಕ ಅನುಭವ ನೀಡಬಹುದು ಎನ್ನುವುದನ್ನು ಈ ರೀತಿಯ ಪ್ರದರ್ಶನದ ಮೂಲಕ ಸಾಬೀತುಪಡಿಸಲಾಗುತ್ತಿದೆ. ದೇಶದ ಪ್ರಮುಖ ನಗರಗಳಲ್ಲಿ ವೃತ್ತಿಪರ ಸಾಹಸಿ ಸವಾರರು ಈ ಪ್ರದರ್ಶನ ನೀಡುತ್ತಿದ್ದಾರೆ’ ಎಂದು ಬಜಾಜ್ ಆಟೊ ಲಿಮಿಟೆಡ್‌ನ ಪ್ರೊಬೈಕಿಂಗ್ ವಿಭಾಗದ ಉಪಾಧ್ಯಕ್ಷ ಸುಮಿತ್‌ ನಾರಂಗ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT