ಶನಿವಾರ, 3 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಹವಾಲು ಆಲಿಸಿದ ಶಾಸಕಿ ಲಕ್ಷ್ಮಿ

Last Updated 10 ಜುಲೈ 2021, 15:51 IST
ಅಕ್ಷರ ಗಾತ್ರ

ಬೆಳಗಾವಿ: ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಶನಿವಾರ ತಮ್ಮ ಕಚೇರಿಯಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ, ಪರಿಹಾರ ಒದಗಿಸುವ ಪ್ರಯತ್ನ ಮಾಡಿದರು.

ಕಂಗ್ರಾಳಿ ಕೆ.ಎಚ್. ಗ್ರಾಮದ ಸ್ಥಳೀಯ ಜನಪ್ರತಿನಿಧಿಗಳು ಭೇಟಿಯಾಗಿ ಗ್ರಾಮದ ಅನೇಕ ಅಭಿವೃದ್ಧಿ ಕೆಲಸಗಳ ಕುರಿತು ಚರ್ಚಿಸಿದರು. ‘ಶಿವಾಜಿ ಪ್ರತಿಮೆ ಸ್ಥಳದಿಂದ ಕಲ್ಮೇಶ್ವರ ನಗರದವರೆಗೆ ಸಿ.ಸಿ. ರಸ್ತೆ ನಿರ್ಮಾಣ, ಸ್ಮಶಾನ ಭೂಮಿಯ ಸಲುವಾಗಿ ಪ್ರತ್ಯೇಕ ಸ್ಥಳ ಮಂಜೂರು, ನಾರಾಯಣ ಗಲ್ಲಿಯ ಮಂಗಲ ಕಾರ್ಯಾಲಯದಿಂದ ಕಾಳಾ ಕಟ್ಟಾವರೆಗೆ ಚರಂಡಿ ನಿರ್ಮಾಣ ಮತ್ತು ರೈತರಿಗೆ ಸಂಚಾರಕ್ಕೆ ಅನುಕೂಲವಾಗುವಂತೆ ಕಾಳಾ ಕಟ್ಟಾ ಹತ್ತಿರ ಸೇತುವೆ ನಿರ್ಮಿಸಿಕೊಡುವಂತೆ’ ಕೋರಿದರು.

ಸ್ಪಂದಿಸಿದ ಶಾಸಕರು, ‘ಆದಷ್ಟು ಬೇಗ ಗ್ರಾಮದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ಕೊಡಲಾಗುವುದು’ ಎಂದು ಭರವಸೆ ನೀಡಿದರು.

ಬಾಮನವಾಡಿಯ ಹಿರಿಯರು, ಗ್ರಾಮ ಪಂಚಾಯ್ತಿ ಸದಸ್ಯರು, ಗ್ರಾಮದಲ್ಲಿ ಅಂಗನವಾಡಿ ಕೇಂದ್ರ ನಿರ್ಮಿಸಿಕೊಡುವಂತೆ ವಿನಂತಿಸಿದರು. ಅವರ ಬೇಡಿಕೆಯಂತೆ ಶೀಘ್ರವೇ ನಿರ್ಮಾಣದ ಕಾಮಗಾರಿ ಉದ್ಘಾಟಿಸುವ ಭರವಸೆಯನ್ನು ಲಕ್ಷ್ಮಿ ನೀಡಿದರು.

ಜಿಮ್‌ಗೆ ಅಗತ್ಯ ಸಾಮಗ್ರಿಗಳನ್ನು ಒದಗಿಸುವುದಾಗಿ ರಾಜಹಂಸಗಡದ ಯುವಕರಿಗೆ ತಿಳಿಸಿದರು.

‘ಕ್ಷೇತ್ರದ ಜನರ ಪ್ರೀತಿ, ವಿಶ್ವಾಸ ಖುಷಿ ನೀಡುತ್ತದೆ. ತಮ್ಮ ಬೇಡಿಕೆಗಳ ಕುರಿತು ಆತ್ಮೀಯವಾಗಿ ಚರ್ಚಿಸುತ್ತಾರೆ. ನನ್ನ ಮೇಲೆ ಅತಿಯಾದ ಭರವಸೆಯನ್ನು ಇಟ್ಟಿದ್ದಾರೆ. ಈವರೆಗೆ ಕ್ಷೇತ್ರದಲ್ಲಿ ನನ್ನಿಂದ ಆಗಿರುವ ಕೆಲಸಗಳ ಕುರಿತು ಪ್ರಸ್ತಾಪಿಸಿ ಕೃತಜ್ಞತೆ ವ್ಯಕ್ತಪಡಿಸುತ್ತಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಯೋಜನೆಗಳನ್ನು ತರುವ ಮೂಲಕ ಅವರ ಋಣವನ್ನು ತೀರಿಸುವ ಪ್ರಯತ್ನ ಮಾಡುತ್ತೇನೆ’ ಎಂದು ಶಾಸಕರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT