ಗುರುವಾರ , ಜೂನ್ 30, 2022
21 °C

ಅಂಗವಿಕಲರಿಗೆ ಲಸಿಕೆ ಹಾಕಿಸಿದ ಶಾಸಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರು ತಾಲ್ಲೂಕಿನ ಮುತಗಾ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 25 ಅಂಗವಿಕಲರಿಗೆ ಕೋವಿಡ್ ಲಸಿಕೆಯನ್ನು ಸ್ವತಃ ತಾವೇ ನಿಂತು ಗುರುವಾರ ಹಾಕಿಸಿದರು.

‘ಅಂಗವಿಕಲರು ದೇವರ ಮಕ್ಕಳಿದ್ದಂತೆ. ಅವರನ್ನು ಪ್ರೋತ್ಸಾಹಿಸಿ, ಪೋಷಿಸಿ ಬೆಳೆಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ. ಸ್ವಾವಲಂಬಿ, ಸ್ವಾಭಿಮಾನದ ಬದುಕು ಸಾಗಿಸಬೇಕೆಂಬ ಅವರ ಕನಸುಗಳಿಗೆ ನೂರೆಂಟು ವಿಘ್ನಗಳಿವೆ. ಅವರ ಕನಸುಗಳಿಗೆ ನೀರೆರೆಯುವುದಕ್ಕೆ, ಅವರ ರಕ್ಷಣೆಗೆ ಸದಾಕಾಲವೂ ನಿಲ್ಲುವುದಕ್ಕೆ ನಾನು ಸಿದ್ಧವಿದ್ದೇನೆ’ ಎಂದರು.

ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಲಕ್ಷ್ಮಿ ತಾಯಿ ಪ್ರತಿಷ್ಠಾನದಿಂದ ದಿನಸಿ ಕಿಟ್‌ಗಳನ್ನು ಪೂರೈಸುವ ಭರವಸೆ ನೀಡಿದರು.

‘ಇನ್ನೆರಡು ದಿನಗಳಲ್ಲಿ ಕ್ಷೇತ್ರದ ಬೀದಿಬದಿ ವ್ಯಾಪಾರಿಗಳಿಗೆ, ಆಟೊರಿಕ್ಷಾ ಚಾಲಕರಿಗೆ ಕೋವಿಡ್ ಲಸಿಕೆ ಹಾಕಿಸುವ ಗುರಿ ಹೊಂದಿದ್ದೇನೆ’ ಎಂದು ತಿಳಿಸಿದರು.

ಮುತಗಾ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಹೇಮಲತಾ, ತಾ.ಪಂ. ಅಧ್ಯಕ್ಷ ಶಂಕರಗೌಡ ಪಾಟೀಲ, ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಲಚಂದ್ರ ಪಾಟೀಲ, ಶ್ಯಾಮ ಮುತಗೆಕರ, ಕಿರಣ ಪಾಟೀಲ, ಸುಧೀರ ಪಾಟೀಲ, ಅಜಿತ ಪೂಜಾರಿ, ಪಿಂಟು ಯಲಗೌಡ, ಹನಮಂತ ಪಾಟೀಲ, ಮಾರುತಿ ಪಾಟೀಲ, ಬಾಹು ಶಿಂಧೆ, ಸೋಮಲಿಂಗ ಸಣ್ಣಮನಿ, ಶರದ ಪಾಟೀಲ, ರಾಧಿಕಾ ಮುತಗೆಕರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು