ಸೋಮವಾರ, ಆಗಸ್ಟ್ 19, 2019
28 °C

ಧ್ವಜ ಸ್ತಂಭ ಕಿತ್ತ ವ್ಯಕ್ತಿಗೆ ಸ್ಥಳೀಯರ ಬುದ್ಧಿವಾದ

Published:
Updated:

ಬೆಳಗಾವಿ: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಇಲ್ಲಿನ ಭವಾನಿ ನಗರದ ಮರಾಠಿ ಪ್ರಾಥಮಿಕ ಶಾಲೆ ಮೈದಾನದಲ್ಲಿ ಗುರುವಾರ ಧ್ವಜಾರೋಹಣ ‌ಮಾಡಿದ್ದ ರಾಷ್ಟ್ರಧ್ವಜದ ಸಮೇತ ಕಂಬವನ್ನು ಕಿತ್ತು ಹಾಕಿದ್ದ ಅಲ್ಲಿನ ನಿವಾಸಿ ಆನಂದ ಕೋಡಗ ಸ್ಥಳೀಯರ ಆಕ್ರೋಶಕ್ಕೆ ತುತ್ತಾದರು.

ಶಾಲೆ ವತಿಯಿಂದ ಧ್ವಜಾರೋಹಣ ನೆರವೇರಿಸಲಾಗಿತ್ತು. ‘ಕೆಲ ಸಮಯದ ನಂತರ ಬಂದ ಆನಂದ, ಈ ಮೈದಾನ ತನ್ನದೆಂದು ವಾದಿಸಿ ಧ್ವಜಕಂಬವನ್ನು ಕಿತ್ತು ಹಾಕಿದ್ದರು. ಸ್ಥಳೀಯರು ಕೂಡಲೇ ಅವರನ್ನು ಹಿಡಿದು ತಂದು ಧ್ವಜ ಕಂಬ ನೆಟ್ಟು ‌ಮತ್ತೊಮ್ಮೆ ಧ್ವಜಾರೋಹಣ ಮಾಡಿದ್ದಾರೆ. ಅಲ್ಲದೇ, ಧ್ವಜ ಕಂಬಕ್ಕೆ ಆನಂದ ಅವರಿಂದ ದೀಡ್‌ ನಮಸ್ಕಾರ ಹಾಕಿಸಿ, ಬುದ್ಧಿವಾದ ಹೇಳಿದ್ದಾರೆ. ವ್ಯಕ್ತಿ ತನ್ನಿಂದಾದ ಪ್ರಮಾದವನ್ನು ಒಪ್ಪಿಕೊಂಡು ನಮಸ್ಕಾರ ಮಾಡಿದ್ದಾರೆ’ ಎಂದು ತಿಳಿದುಬಂದಿದೆ.

ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ.

Post Comments (+)